ವಿದ್ಯಾರ್ಥಿಗಳ ಬಳಗದ ಹಳೆಯ ನೆನಪುಗಳು…
ನನ್ನ ಶಾಲೆ ನನ್ನ ಹೆಮ್ಮೆ ಶಾಲೆಯ ಹೆಮ್ಮೆಯ ವಿದ್ಯಾರ್ಥಿ, ಹಾವೇರಿ ಜಿಲ್ಲೆಯ : ರಾಣೆಬೆನ್ನೂರು ತಾಲೂಕಿನ : ಕವಲೆತ್ತು ಗ್ರಾಮದಲ್ಲಿರುವ ದಿ||ಎಂ.ಎಸ್. ಪಾಟೀಲ್ ಪ್ರೌಢಶಾಲೆಯ 1996-97 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ “ಗುರುವಂದನ ಮತ್ತು ಸ್ನೇಹ ಸಮ್ಮಿಲನ” ಕಾರ್ಯಕ್ರಮ ಇದೇ ಜೂನ್ 13, 2026ರ ಶನಿವಾರದಂದು ಬಹಳ ಅದ್ದೂರಿಯಾಗಿ ನೆರವೇರಿತು. ತಾವುಗಳೇ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 30 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಾಗೂ ಅಂದು ವಿದ್ಯೆ…