ಅವಳಿ ನಗರದಲ್ಲಿ ಸಕಾಲಕ್ಕೆ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ನಗರಸಭೆಯ ಪೌರಾಯುಕ್ತರಿಗೆ ಸೌಜನ್ಯತಾ ಸಮಿತಿಯಿಂದ ಮನವಿ.
ವೀರಮಾರ್ಗ ನ್ಯೂಸ್ : ಗದಗ ಜಿಲ್ಲೆ : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿನ 35 ವಾರ್ಡಗಳಲ್ಲಿ ರಹವಾಸಿಯಾಗಿರುವ ನಾಗರಿಕರಿಗೆ ಅತ್ಯಗತ್ಯವಾದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ಹಾಗೂ ದೈನಂದಿನ ಬಳಕೆಯ ನೀರಿನ ಆಹಾಕಾರವು ಕಳೆದ 3 ದಶಕಗಳಿಂದಲೂ ನಿರಂತರ ಬವಣೆಯಾಗಿರುತ್ತದೆ. ಅವಳಿ ನಗರದಲ್ಲಿ 15 ರಿಂದ 20 ದಿನಗಳಿಗೂಮ್ಮೇ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ಅದರೆ ಇತ್ತೀಚಿಗೆ ವಾತಾವರಣ ವೈಪರಿತ್ಯದಿಂದಾಗಿ ಮುಂಗಾರು ಪ್ರಾರಂಭಕ್ಕಿಂತಲೂ ಮೊದಲೇ ವಿಪರೀತ ಮಳೆಯಿಂದ ಅವಳಿ ನಗರಕ್ಕೆ ಪೂರೈಕೆಯಾಗುವ ತುಂಗಭದ್ರಾ ನೀರಿನ ಸಂಗ್ರಹಣೆ ಅಗತ್ಯಕ್ಕಿಂತಲೂ ಹೆಚ್ಚಾಗಿ ಇರುತ್ತದೆ.
ಆದರೂ ಕೂಡಾ ಅವಳಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಹಿಂದೆ ಎಂಟು ಹತ್ತು ದಿನಗಳಿಗೊಮ್ಮೆ ಸರಬರಾಜು ಆಗುತ್ತಿದ್ದ ತುಂಗಭದ್ರಾ ಕುಡಿಯುವ ನೀರು ತಿಂಗಳಲ್ಲಿ ಒಂದೇ ಬಾರಿಗೆ ಪೂರೈಕೆಯಾಗುತ್ತಿದೆ. ಇದರಿಂದ ಬಡಾವಣೆಯ ನಾಗರಿಕರು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟ ನೀರಿನಲ್ಲಿ ಹುಳಗಳಿಂದ ಕೂಡಿ ದುರ್ವಾಸನೆಯಿಂದ ಕೂಡಿರುತ್ತದೆ. ಇದರಿಂದ ಬಡಾವಣೆಯ ನಾಗರಿಕರಿಗೆ ಅನಾರೋಗ್ಯದ ಭಯದಲ್ಲಿ ಜೀವಿಸುವಂತಾಗಿರುತ್ತದೆ.
ಆದರೂ ಹೇಗೋ ಸಂಗ್ರಹಣೆ ಮಾಡಿದ ನೀರನ್ನು ಕಾಯಿಸಿ ಕುದಿಸಿ ಬಳಸುತ್ತಿರುವ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನಲ್ಲಿರುವ ಕುಲಕರ್ಣಿ ಗಲ್ಲಿ, ಹನಮನ ಗರಡಿ ಬಡಾವಣೆಗಳಿಗೆ ಕಳೆದ ದಿನಾಂಕ 8 ರಂದು ನಗರಸಭೆಯಿಂದ ಕುಡಿಯುವ ನೀರು ಪೂರೈಕೆಯಾಗಿದ್ದು, ಆನಂತರದಲ್ಲಿ ಇಲ್ಲಿಯವರೆಗೂ ಕುಡಿಯುವ ನೀರಿನ ಪೂರೈಕೆಯಾಗಿರುವುದಿಲ್ಲ ಇದರಿಂದಾಗಿ ಬಡಾವಣೆ ನಾಗರಿಕರು ಕುಡಿಯುವ ಹಾಗೂ ದೈನಂದಿನ ಬಳಕೆಯ ನೀರಿಗಾಗಿ ಪರಿತಪಿಸುವಂತಾಗಿರುತ್ತದೆ.
ಆದುದರಿಂದ ಕೂಡಲೇ 23 ನೇ ವಾರ್ಡಿನ ಕುಲಕರ್ಣಿ ಗಲ್ಲಿ ಹಾಗೂ ಹನಮನ ಗರಡಿ ಬಡಾವಣೆಗೆ ಸಂವಿಧಾನಬದ್ದವಾಗಿ ನಾಗರಿಕರಿಗೆ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಪೂರೈಕೆ ಮಾಡಬೇಕೆಂದು ಬಡಾವಣೆಯ ಸಮಸ್ತ ನಾಗರಿಕರ ಜನಾಗ್ರಹವಾಗಿದೆ. ಈ ಕೂಡಲೇ ನಗರಸಭೆಯಿಂದ ಕುಡಿಯುವ ನೀರು ಪೂರೈಸಬೇಕೆಂದು ಆಗ್ರಹಪೂರ್ವಕ ಮನವಿಯನ್ನು ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರಿಗೆ ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ರೇಣವ್ವ ಬೋವಿ, ಕಸ್ತೂರಿ ಬೋವಿ, ಬಾಗಲಕೋಟಿ, ಅಸ್ಲಮ್ ಖಾಜಿ, ಲೀಲಾಬಾಯಿ ಶಾಖಾಪೂರ, ಸೀತಾಲಕ್ಷ್ಮಿ ಅಷ್ಟಪುತ್ರೆ, ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ, ಶೋಭಾ ರಾಯ್ಕರ, ರೇಣವ್ವ ಪೋತ್ನಾಳ್, ಮಂಜುನಾಥ ಬೋವಿ, ಕುಮಾರ ಎ ಎಸ್ ಖಾಜಿ ಸಾಜುದ್ದಿನ್ ಬಿ ಎಮ್ ಶಿವ,ಷಿಂಪಗೇರ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಹಾಗೂ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ಕುಲಕರ್ಣಿ ಗಲ್ಲಿ ಹಾಗೂ ಹನಮನ ಗರಡಿ ಬಡಾವಣೆಯ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.