ನಟ ದರ್ಶನ್ & ಗ್ಯಾಂಗ್ ಗೆ : ಜಾಮೀನು ರದ್ದು…

ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಬಿಗ್ ಶಾಕ್‌ : ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ವೀರಮಾರ್ಗ ನ್ಯೂಸ್ : ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದೆ.

ಕಾದು ಕುಂತಿರುವ ನಟ ದರ್ಶನ್ ಫ್ಯಾನ್ ಗಳಿಗೂ ಕೂಡ ಶಾಕ್ ಆಗಿದೆ, ಮಹತ್ವದ ತೀರ್ಪನ್ನು ಕೊಟ್ಟು ಹಣ ಬಲ ಜನಬಲ ಅಧಿಕಾರದ ಬಲ ಕೋರ್ಟ್ ಮೆಚ್ಚುವುದಿಲ್ಲ ತಪ್ಪು ತಪ್ಪೇ ಎಂದು ತೀರ್ಮಾನ ಮಾಡಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ನಟ ದರ್ಶನ ಹಾಗೂ ಗ್ಯಾಂಗ್ ಮತ್ತೆ ಜೈಲು ಸೇರುವುದು ಖಚಿತವಾಗಿದೆ.

ಪ್ರಕರಣ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ದೋಷವಿದೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 7 ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಆರೋಪಿಗಳು ಎಷ್ಟೇ ದೊಡ್ಡವನಾಗಿದ್ದರೂ ಕಾನೂನಿಗಿಂತ ದೊಡ್ಡವನಲ್ಲ. ಕೊಲೆ ಆರೋಪಿಗಳಿಗೆ ಜೈಲಿನಲ್ಲಿ 5 ಸ್ಟಾರ್ ಟ್ರೇಟ್ ಮೆಂಟ್ ನೀಡಲಾಗಿದೆ. ಜೈಲಾಧಿಕಾರಿಗಳ ವಿರುದ್ಧವೂ ಕ್ರಮವಾಗಬೇಕು. ಈ ತೀರ್ಪು ಎಲ್ಲಾ ಜೈಲುಗಳಿಗೂ ಒಂದು ಲ್ಯಾಂಡ್ ಮಾರ್ಕ್ ಎಂದು ಸುಪ್ರೀಂ ಕೋರ್ಟ್ ಖಡಕ್ ಸಂದೇಶ ರವಾನಿಸಿದೆ.