ಗುಡುಗು ಶಿಡ್ಲಿಗೆ ಯುವಕ ಬಲಿ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದ ವಿನಾಯಕ ಮಹೇಂದ್ರ ಕೋಣಿ 23 ವರ್ಷದ ಯುವಕ ಸಿಡಿಲು ಹೊಡೆದ ಮೃತಪಟ್ಟಿದ್ದಾರೆ…

ಇಂದು ಸಂಜೆ ಹೊಲಕ್ಕೆ ಬೆಳೆಗಳಿಗೆ ನೀರು ಹಾಯಿಸಲು ತಂದೆ ಮಗ ಹೋಗಿದ್ದು ಗಾಳಿ ಮಳೆ ಮಿಂಚು ಗುಡುಗು ಜೋರಾಗಿ ಬಂದ ಕ್ಷಣ ಗಿಡದ ಕೆಳಗಡೆ ಮಳೆ ಹನಿ ಬೀಳಬಾರದು ಎನ್ನುವ ಕಾರಣಕ್ಕೆ ಮರದ ಕೆಳಗಡೆ ನಿಂತ್ತಿದ್ದಾರೆ, ಆದರೆ ಅವರ ತಂದೆ ಮಹೇಂದ್ರಪ್ಪ 25 ಮೀಟರ್ ದೂರ ಇದ್ದರು ಎನ್ನುವ ಮಾಹಿತಿ ದೊರಕಿದೆ. ತಂದೆ ಕ್ಷೆಮವಾಗಿ ಇದ್ದಾರೆ, ಮಗ ವಿನಾಯಕ ಕ್ಷಣಾರ್ಧದಲ್ಲಿ ಯಮನು ಗುಡುಗು ಮಿಂಚು ಸಿಡಿಲಿನ ರೂಪದಲ್ಲಿ ಬಂದು ಪ್ರಾಣವನ್ನು ತೆಗೆದುಕೊಂಡು ಹೋಗಿದ್ದಾನೆ ಎನ್ನುವ ಮಾಹಿತಿ ದೊರೆತಿದೆ.

ಜೋರಾದ ಗಾಳಿ ಮಳೆ ಮಿಂಚು ಗುಡುಗು ಸಿಡಿಲು ಇರುವಾಗ ಮೊಬೈಲ್ ಬಳಿಕೆ ಮಾಡುತ್ತಾ ಮತ್ತು ಗಿಡದ ಕೆಳಗಡೆ ನಿಲ್ಲಬೇಡಿ ನಿಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿ ತಗ್ಗು ಪ್ರದೇಶದ ಕಡೆ ಹೋಗಿ ನಿಲ್ಲಬೇಕು ಮನೆಯ ಮಧ್ಯೆ ಇರಬೇಕು ದಯವಿಟ್ಟು ಹಿರಿಯರು ಚಿಕ್ಕ ಮಕ್ಕಳಿಗೆ ವಿಷಯವನ್ನು ತಿಳಿಸಿ ಜಾಗೃತರನ್ನಾಗಿ ಮಾಡಿ…..