ಅಭಿವೃದ್ಧಿಗೆ ಹೊಸ ಕಾಯಕಲ್ಪ!!

ಅಭಿವೃದ್ಧಿಗೆ ಹೊಸ ಕಾಯಕಲ್ಪ!!

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ಭಕ್ತರು ದೇವಸ್ಥಾನಕ್ಕೆ ಉತ್ತರ ಈಶಾನ್ಯದ ಮೂಲಕ ಆಗಮಿಸಲು ಮೆಟ್ಟಿಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದವರು ಭರವಸೆ ನೀಡಿದರು.

ಸಮಿತಿಯ ಕಾನೂನು ಸಲಹೆಗಾರ, ನ್ಯಾಯವಾದಿ ಶರಣಬಸವ ಅಂಗಡಿಯವರು ಮಾತನಾಡಿ ಕಳೆದ 50 ವರ್ಷಗಳಿಂದ ಹಳೆ ಸಮಿತಿ ಅಸ್ತಿತ್ವದಲ್ಲಿದ್ದು ಏನೊಂದು ಅಭಿವೃದ್ಧಿ ಕಾರ್ಯ ಮಾಡದೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಭಕ್ತರನ್ನು ವಂಚಿಸಿದೆ. ಕೆಲವೆಡೆ ಅವ್ಯವಹಾರ, ಹಣದ ಹಾಗೂ ಅಧಿಕಾರದ ದುರುಪಯೋಗ ಆಗಿದೆ ಎನ್ನುವ ಆರೋಪವಿದ್ದು, ಇನ್ನು ಮುಂದೆ ಇಂತಹ ಕಾನೂನುಬಾಹೀರ ಮತ್ತು ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ.

ಸರ್ವಾಂಗೀಣ ಅಭಿವೃದ್ಧಿಗೆ ಸಮಿತಿಯು ಬದ್ಧವಾಗಿದ್ದು ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಈಗಾಗಲೇ ಮುಂದಾಗಿರುವುದಾಗಿ ಹೇಳಿದರಲ್ಲದೇ ಹೊಸ ಸಮಿತಿ ಮಾಡಲು ಹಳೆ ಸಮಿತಿಯವರು ನ್ಯಾಯದ ಮೂಲಕ ಅಡಕೆಡೆ ಮಾಡಲು ಬಹಳಷ್ಟು ತೊಂದರೆ ನೀಡಿದರು ಅಂತಿಮವಾಗಿ ಗೆಲುವು ನಮ್ಮದಾಯಿತು ಎಂದರು.

ಸ್ಥಳೀಯ ಲೋಕಲ್ ಕಮಿಟಿ ಚೇರ್ಮನ್ ಭರಮಪ್ಪ ಉರ್ಮಿ ಮಾತನಾಡಿ ಕಳೆದ ಅರ್ಧ ಶತಮಾನಗಳ ಆಡಳಿತ ವೈಖರಿಗೆ ಭಕ್ತರು ಹಾಗೂ ಬಹುತೇಕ ಗ್ರಾಮಸ್ಥರು ಬೇಸತ್ತಿದ್ದಾರೆಂದು ಅನೇಕ ಆರೋಪಗಳು ಬಂದಿವೆ. ಇನ್ನು ಮೇಲೆ ನಿರಂತರವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾ ಗುವುದು. ಭಕ್ತರ ಹಿತ ಕಾಪಾಡಲಾಗುವುದು ಎಂದರು.

ಸ.22 ರಿಂದ ದಸರಾ ಮಹೋತ್ಸವ ಆರಂಭಗೊಳ್ಳಲಿದ್ದು, 22ಕ್ಕೆ ಘಟಸ್ಥಾಪನೆ, ಸ.30ಕ್ಕೆ ದುರ್ಗಾಷ್ಟಮಿ, ಆ.1ರಂದು ಕಾರ್ಣಿಕೋತ್ಸವ, ಆ.2 ವಿಜಯದಶಮಿ, 2ರಂದು ಕಂಚವೀರ ಹಾಗೂ ಗೊರವಯ್ಯನ ವರಿಂದ ಸರಪಳಿ ಪವಾಡಗಳು, ಬನ್ನಿ ಮುಡಿಯುವುದು. ಅ7ರಂದು ಶೀಗೆ ಹುಣ್ಣಿಮೆ ಆ. 15ರಂದು ಕುದುರೆ ಹಬ್ಬ ಕಾರ್ಯಕ್ರಮಗಳು ಜರುಗಲಿವೆ ಎಂದವರು ವಿವರಿಸಿದರು.

ಸಮಿತಿಯ ಸದಸ್ಯರುಗಳಾದ ಸುರೇಶ್ ತಳಗೇರಿ, ಪವನ ಪಾಟೀಲ, ಸುಭಾಷ್ ಕೆಂಗಲ್, ಪವನ್ ಪೂಜಾರ, ಪ್ರಕಾಶ್ ಬಳ್ಳಾರಿ, ನ್ಯಾಯವಾದಿ ನಾಗರಾಜ ಸಂಶಿ, ಸುಮಂಗಲಾ ಮೈಲಾರ, ದ್ಯಾಮವ್ವ ಐಗಳ ಸೇರಿದಂತೆ ಸಮಿತಿಯ ಸದಸ್ಯರುಗಳು, ಸಿಬ್ಬಂದಿಗಳು, ಭಕ್ತರು ಮತ್ತಿತರರು ಇದ್ದರು.