ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವಂತೆ ಸಂಸದ,ಬೊಮ್ಮಾಯಿ,ಕಚೇರಿ,ಎದುರು,ನೊಂದ,ಮಹಿಳೆಯರಿಂದ ಪ್ರತಿಭಟನೆ. ಹಾವೇರಿ ಜಿಲ್ಲೆಯಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಹಾವಳಿ ಯಾವುದೇ ರೀತಿ ಕಡಿಮೆಯಾಗಿಲ್ಲ. ಇದರಿಂದ ಸಾಲ ಪಡೆದ ಬಡ ಹೆಣ್ಣು ಮಕ್ಕಳು ಬೀದಿಗೆ ಬಂದಿದ್ದಾರೆ. ಫೈನಾನ್ಸ್ ಅವರ ದಬ್ಬಾಳಿಕೆಯಿಂದ ಕುಟುಂಬ ಸಮೇತ ಊರೇ ಬಿಟ್ಟು ಹೋಗಿದ್ದಾರೆ. ಕೂಡಲೇ ಖಾಸಗಿ ಫೈನಾನ್ಸ್ ಕಡೆಯಿಂದ ಪಡೆದ ಸರ್ವ ಸಾಲವನ್ನು ಮನ್ನಾ ಮಾಡಬೇಕು ಅವರಿಗೆ ರಕ್ಷಣೆ ಕೊಟ್ಟು ಗೌರವದಿಂದ ಜೀವನ ನಡೆಸಲು ಅವಕಾಶ ನೀಡುಬೇಕು ಎಂದು ರೈತ ಸಂಘದ ಜಿಲ್ಲಾ ಮುಖಂಡ ಹನುಮಂತಪ್ಪ ಕಬ್ಬಾರ ಆಗ್ರಹ ಮಾಡಿದರು. ಗುರವಾರ ನಗರದ ತಾಲೂಕ ಪಂಚಾಯತಿ ಕಚೇರಿ ಆವರಣದಲ್ಲಿರುವ ಸಂಸದ ಬಸವರಾಜ ಬೊಮ್ಮಾಯಿ ಮುಂದು ರೈತ ಸಂಘದವರು ಹಾಗೂ ನೊಂದ ಮಹಿಳೆಯರು ಮೈಕ್ರೋ ಫೈನಾನ್ಸ್ ಕಿರುಕುಳ, ಸಾಲ ಮನ್ನಾ ಮತ್ತು ರಕ್ಷಣೆ ಕೋರಿ ಉಗ್ರ ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ರೈತ ಸಂಘದ ರಾಜ್ಯ ಮುಖಂಡ ಮಹೇಶ ಕೊಟ್ಟೂರು ಬಡವರನ್ನು ಟಾರ್ಗೆಟ್ ಮಾಡಿ ಸುಲಭ ರೀತಿಯಾಗಿ ಸಾಲ ನೀಡುವುದಾಗಿ ಹೇಳಿ ಸಾಲ ನೀಡಿದ ಮೇಲೆ ಅವರ ಮನೆಯವರೆಗೆ ಹೋಗಿ ವಿಪರೀತ ಕಿರುಕುಳ ನೀಡುತ್ತಿರುವ ಖಾಸಗಿ ಮೈಕ್ರೋ ಪೈನಾನ್ಸ್ ಗಳ ಮೇಲೆ ಕಠಿಣ ಕಾನೂನು ಕ್ರಮ ಆಗಬೇಕು. ಬಡವರಿಗೆ ನೀಡಿರುವ ಎಲ್ಲ ಸಾಲವನ್ನು ಮನ್ನಾ ಆಗಬೇಕು ಎಂದು ಒತ್ತಾಯಿಸಿದರು.

ನಂತರ ಮಾತನಾಡಿದ ರಾಜ್ಯ ರೈತ ಮುಖಂಡ ಹನುಮಂತಪ್ಪ ದೀವಗಿಹಳ್ಳಿ ಬಡ ಕೂಲಿ ಕಾರ್ಮಿಕರ ಕುಟುಂಬದ ಹೆಣ್ಣು ಮಕ್ಕಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರಗಳು ವಿಫಲವಾಗಿದೆ. ಬಡವರ ಹಣಕಾಸಿನ ತೊಂದರೆ ತಿಳಿದ ಖಾಸಗಿ ಮೈಕ್ರೋ ಪೈನಾನ್ಸ್ ಗಳು ಸಂಘಗಳನ್ನು ನಿರ್ಮಿಸಿ ಸರಳ ವಿಧಾನದಲ್ಲಿ ಸಾಲ ಕೊಟ್ಟು ತದನಂತರ ಅವರ ಮನೆ ಬಾಗಿಲಿಗೆ ಹೋಗಿ ದಬ್ಬಾಳಿಕೆ, ಕಿರುಕುಳ, ಗುಂಡಾ ವರ್ತನೆ ನಡೆಯುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ನಮ್ಮ ಬಡವರಿಗೆ ಸರಳ ರೀತಿ ಸಾಲ ಒದಗಿಸದೇ ಇರುವುದೇ ಇಂತಹ ದುರಂತಕ್ಕೆ ಕಾರಣವಾಗಿದೆ. ರೈತರು ಇದಕ್ಕೆ ಹೊರತಾಗಿ ತಕ್ಷಣವೇ ಮೈಕ್ರೋ ಪೈನಾನ್ಸ್ ನವರಿಂದ ಆಗುವ ತೊಂದರೆ ತಪ್ಪಿಸಬೇಕು. ಬಡವರ ಎಲ್ಲಾ ಸಾಲ ಮನ್ನಾ ಆಗಬೇಕು. ರಾಜ್ಯದಲ್ಲಿ ರೈತರು ಅತಿವೃಷ್ಠಿಯಿಂದ ಸಂಪೂರ್ಣ ಬೆಳೆ ನಾಶವಾಗಿವೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ರೈತ ಮುಖಂಡ ರಾಜಶೇಖರ ದೂದಿಹಳ್ಳಿ, ಮಹೇಶ ಕೊಟ್ಟೂರ, ಹನುಮಂತಪ್ಪ ದೀವಗಿಹಳ್ಳಿ, ಹನುಮಂತಪ್ಪ ಕಬ್ಬಾರ ಸೇರಿದಂತೆ ನೂರಾರು ನೊಂದ ಮಹಿಳೆಯರು ಬಾಗವಹಿಸಿದ್ದರು. ಪೋಟೋ: ಖಾಸಗಿ ಪೈನಾನ್ಸ್ ಕಿರುಕುಳ, ದಬ್ಬಾಳಿಕೆ ನಿಲ್ಲಿಸಿ ಬಡವರ ಎಲ್ಲ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ನೊಂದ ಮಹಿಳೆಯರು ರೈತ ಸಂಘದ ನೇತೃತ್ವದಲ್ಲಿ ಸಂಸದ ಬಿ. ಬೊಮ್ಮಾಯಿ ಅವರ ಕಚೇರಿ ಮುಂದೆ ಗುರವಾರ ಉಗ್ರ ಪ್ರತಿಭಟನೆ ನಡೆಸಿದರು.