ಶಿಗ್ಗಾವಿಯಲ್ಲಿ ಹಾಡಹಗಲೇ ಭೀಕರ ಹತ್ಯೆ.! ಅಲ್ಲಿ ಹೆಣವಾಗಿದ್ದವನ ಹೆಸರು ಶಿವಾನಂದ ಕುನ್ನೂರ..!
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾವಿಯಲ್ಲಿ ಹಡಹಗಲೇ ಭೀಕರ ಕೊಲೆಯಾಗಿದೆ.
ಶಿವಾನಂದ ಕುನ್ನೂರ ಎಂಬುವವರನ್ನು ಬೀಕರವಗಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಹಂತಕರು. ಶಿಗ್ಗಾವಿಯ ಹುಬ್ಬಳ್ಳಿ ರಸ್ತೆಯ ಸಮೀಪ, ಮಹೇಶ್ ದಾಬಾದ ಎದುರೇ ವಿಕೃತವಾಗಿ ಹತ್ಯೆ ಮಾಡಲಾಗಿದೆ.

ಮಟಮಟಮದ್ಯಾಹ್ನ ಮರ್ಡರ್..!
ಶಿಗ್ಗಾವಿಯಲ್ಲಿ ಇತ್ತಿಚೆಗೆ ಹಲವು ರೀತಿಯ ಕ್ರೈಮುಗಳು ಚಾಲ್ತಿ ಪಡೆದುಕೊಂಡಿವೆ. ಎರಡು ದಿನದ ಹಿಂದೆಯಷ್ಟೇ ಇಲ್ಲಿ CRPF ಯೋಧನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಇದೀಗ, ಹಾಡಹಗಲೇ ಶಿವಾನಂದ್ ಕುನ್ನೂರ ಎಂಬುವವನ ಭೀಕರ ಹತ್ಯೆಯಾಗಿದ್ದು ಇಡೀ ಶಿಗ್ಗಾವಿ ಪಟ್ಟಣ ಬೆಚ್ಚಿ ಬಿದ್ದಿದೆ.
ಪೊಲೀಸರು ದಂಡು ದೌಡಾಯಿಸಿದೆ..!
ಹಾಡಹಗಲೇ, ಇಂತಹದ್ದೊಂದು ಬೀಕರ ಮರ್ಡರ್ ನಡೆದಿದ್ದ ಕಾರಣಕ್ಕಾಗಿ ಇಡೀ ಶಿಗ್ಗಾವಿಯ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.