ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆಕೊಟ್ಟಕಬ್ಬು ಬೆಳೆಗಾರರ ಸಂಘ.

ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ಕೊಟ್ಟ ರಾಜ್ಯ ಕಬ್ಬು ಬೆಳೆಗಾರರ ಸಂಘ.

ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ಘನ ಸರ್ಕಾರದ ಸಕ್ಕರೆ ಸಚಿವರಾದ ಶ್ರೀ ರುದ್ರಪ್ಪ ಲಮಾಣಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಇವರಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು ನವಂಬರ್ ಒಂದನೇ ತಾರೀಕಿನವರೆಗೂ ಯಾವುದೇ ಕಾರ್ಖಾನೆಯನ್ನು ಶುರು ಮಾಡಕೂಡದು, ಹಾವೇರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಉತ್ತರ ಕರ್ನಾಟಕದ ಕಾರ್ಖಾನೆಗಳು ಯಾವ ದರ ಕೊಡುತ್ತಿವೆಯೋ ಅದೇ ತರವಾಗಿ ನಮ್ಮ ಹಾವೇರಿ ಜಿಲ್ಲೆಯ ಕಬ್ಬು ಬೆಳಗಾರರಿಗೆ ದರ ಕೊಡಬೇಕು ಉತ್ತರ ಕರ್ನಾಟಕಕ್ಕೆ ಒಂದೇ ದರ ನಿಗದಿಯಾಗಬೇಕು ಈ ವರ್ಷದ ದರ ಐದು ಸಾವಿರದ ಐದುನೂರು(5500) ಕೊಡಲೇಬೇಕು ಎಂಬುದು ನಮ್ಮ ಜಿಲ್ಲೆಯ ಕಬ್ಬು ಬೆಳೆಗಾರರ ಬೇಡಿಕೆಯಾಗಿದೆ ಕಾರ್ಖಾನೆಯವರು ಕಬ್ಬಿನ ದರ ನಿಗದಿಯಾಗದೆ ಕಾರ್ಖಾನೆ ಶುರು ಮಾಡಲು ಮುಂದಾದರೆ ಮುಂದೆ ಆಗುವ ಅನಾಹುತಗಳಿಗೆ ಸಕ್ಕರೆ ಕಾರ್ಖಾನೆಯ ಮಾಲೀಕರೇ ನೇರ ಹೊಣೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಎಚ್ಚರಿಕೆ ನೀಡಿದ್ದಾರೆ.

ಮಾರುಕಟ್ಟೆಯಲ್ಲಿ ಸಕ್ಕರೆ ದರ ಹೆಚ್ಚಾಗಿದೆ ಈ ನಿಟ್ಟಿನಲ್ಲಿ ಕಬ್ಬು ಬೆಳೆಗಾರರ ಖರ್ಚು ವೆಚ್ಚವು ಸಹ ಮೂರು ಪಟ್ಟು ಹೆಚ್ಚಾಗಿದೆ ಆದಕಾರಣ ಕೇಂದ್ರ ಸರ್ಕಾರ 10 ವರ್ಷಗಳಿಂದಲೂ ಸಹ ಸಕ್ಕರೆ ದರವನ್ನು ಹೆಚ್ಚು ಮಾಡಿರುವುದಿಲ್ಲ ಈಗ ಕಬ್ಬು ಬೆಳೆಗಾರು ಬಹಳಷ್ಟು ನೊಂದಿದ್ದಾರೆ ಬರಗಾಲದಿಂದ ಕಷ್ಟದಲ್ಲಿದ್ದಾರೆ ಕಾರ್ಖಾನೆಯವರು ಕಬ್ಬಿಗೆ ದರ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಕೇಂದ್ರ ಸರ್ಕಾರ ಸಕ್ಕರೆ ಬೆಲೆಯನ್ನು ಹೆಚ್ಚಿಗೆ ಮಾಡಬೇಕು ಗ್ರಾಹಕರಿಗೆ 50 ರೂಪಾಯಿ ಕೆಜಿಯಂತೆ ಕಮರ್ಷಿಯಲ್ ಕೋ ಕೋ ಕೋಲಾ ಪೆಪ್ಸಿ ಸ್ವೀಟ್ ಮಾರ್ಟ್ ಇವುಗಳಿಗೆ ಒಂದು ನೂರುಪಾಯಿಗೆ ಒಂದು ಕೆಜಿಯಂತೆ ದರ ನಿಗದಿಗೊಳಿಸಬೇಕು ಈ ಗ್ರಹ ಉಪಯೋಗಿ ಹಾಗೂ ಕಮರ್ಷಿಯಲ್ ಸಿಲಿಂಡರ್ ಗೆ ಹೇಗೆ ಬೆಲೆ ವ್ಯತ್ಯಾಸವಿದೆಯೋ , ಹಾಗೇ ಸಕ್ಕರೆ ಬೆಲೆಯನ್ನು ಸಹ ನಿಗದಿಗೊಳಿಸಬೇಕು.

ಎರಡು ವರ್ಷದ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಮಾತು ಕೊಟ್ಟಿದೆ ಹಾವೇರಿ ಜಿಲ್ಲೆಯಲ್ಲಿ ರಿಕವರಿ ಲ್ಯಾಬ್ ಮತ್ತು ಕಾರ್ಖಾನೆ ಎದುರು ತೂಕದ ಯಂತ್ರ ಮಾಡಿಕೊಡುತ್ತೇವೆ ಎಂದು ಅಂದಿನ ಸಕ್ಕರೆ ಸಚಿವರಾದ ಶಿವಾನಂದ್ ಪಾಟೀಲರು ನಮಗೆ ಲಿಖಿತವಾಗಿ ಉತ್ತರ ಕೊಟ್ಟಿದ್ದಾರೆ ಅದು ಬೇಗನೆ ಕಾರ್ಯರೂಪಕ್ಕೆ ಬರಬೇಕೆಂದು ತಿಳಿಸಿದರು ಮಳೆ ಕೊರತೆಯಿಂದ ಕಬ್ಬಿನ ಬೆಳೆಯಲ್ಲಿ ಇಳುವರಿ ಕಡಿಮೆಯಾದರೆ ಅಂತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು..ಹಾವೇರಿ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಕಬ್ಬಿನ ಬೆಳೆಯ ವಿಷಯವನ್ನು ತಪ್ಪು ಮಾಹಿತಿ ನೀಡಿವೆ ಜಿಲ್ಲೆಯಲ್ಲಿ ಬರಿ 6,70,000 ಟನ್ ಮಾತ್ರ ಕಬ್ಬು ಬೆಳೆಯಲಾಗಿದೆ ಎಂದು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಅಧಿಕಾರಿಗಳು ಅಂಕಿ ಸಂಖ್ಯೆ ನೀಡುವಾಗ ಎಚ್ಚರ ವಹಿಸಬೇಕು ಜಿಲ್ಲೆಯಲ್ಲಿ 25 ಲಕ್ಷಕ್ಕಿಂತ ಹೆಚ್ಚು ಟನ್ ಬೆಳೆಯಲಾಗುತ್ತದೆ ಇವರ ಮಾಹಿತಿಯ ಪ್ರಕಾರ ಬರಿ ಒಂಬತ್ತು ಸಾವಿರದ ಆರುನೂರ ಹೆಕ್ಟೇರ್ ಪ್ರದೇಶ ಮಾತ್ರವಿದೆ ಎಂದು ಕೃಷಿ ಇಲಾಖೆ ತಪ್ಪು ಮಾಹಿತಿ ನೀಡಿ ಕಬ್ಬು ಬೆಳೆಗಾರರನ್ನು ಒಕ್ಕಲುಬ್ಬಿಸುವ ಹುನ್ನಾರ ಮಾಡಿದೆ ಇದನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕೆಂದು ಕಬ್ಬು ಬೆಳೆಗಾರರ ಸಂಘ ಮನವಿ ಮಾಡಿದೆ. ಇದೇ ಸಂದರ್ಭದಲ್ಲಿ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ , ವೀರಯ್ಯ ಹಿರೇಮಠ್ ಜಯಣ್ಣಮಾಗಡಿ ಚನ್ನಬಸಪ್ಪ ಕೋಡಿಹಳ್ಳಿ ಮುರಿಗೆಪ್ಪ ಅಂಗಡಿ ಶಂಭಣ್ಣ ಅಣ್ಣಿಗೇರಿ ವೆಂಕಟೇಶ್ ಶೇಷನಗೌಡ್ರು ವಿರುಪಾಕ್ಷಪ್ಪ ಕಲ ಕೋಟಿ ರವಿಕುಮಾರ್ ಸವನೂರ ನಾಗನಗೌಡ ರಾಮನ ಗೌಡ್ರು ಪ್ರಬಣ್ಣ ಗೌರಿಮನಿ ಅಲ್ತಾಫ್ ಶಿರಹಟ್ಟಿ ಸಿಸಿ ತೋಟಿಗೇರ್ ಹರೀಶ್ ಇನ್ನೂ ಅನೇಕ ಕಬ್ಬು ಬೆಳೆಗಾರರು ಹಾಜರಿದ್ದರು.