“ಕಬ್ಬಿಗೆ ಬೆಲೆ ಉತ್ತರ ಕರ್ನಾಟಕದಲ್ಲಿ ಒಂದೇ ದರ ಮಾಡಿ “
ವೀರಮಾರ್ಗ ನ್ಯೂಸ್ : ಹಾವೇರಿ : ಹಾವೇರಿ ತಾಲೂಕ್ ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಬೃಹತ್ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಇಂತಿವೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ನಿರ್ಮಾಣವಾಗಬೇಕು, ಜಿಲ್ಲೆಗೆ ಪ್ರತ್ಯೇಕ ರಿಕವರಿ ಲ್ಯಾಬ್ ಮಾಡಿಕೊಡಬೇಕು, ಕಾರ್ಖಾನೆಯವರು ಉಳಿಸಿಕೊಂಡಿರುವ ಬಾಕಿ ಹಣ ಕೊಡಿಸಬೇಕು, ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿಯಾಗಬೇಕು, ಈ ವರ್ಷ ಒಂದು ಟನ್ ಕಬ್ಬಿಗೆ 5,500 ರೂಪಾಯಿ ಗಳನ್ನು ನಿಗದಿ ಮಾಡಬೇಕು. ರಿಕವರಿ ಎಂಬುದು ಕಾರ್ಖಾನೆ ಯವರು ಕಬ್ಬು ಬೆಳೆಗಾರರಿಗೆ ಮೋಸ ಮಾಡುಲು ಒಂದು ಅಸ್ತ್ರವಾಗಿದೆ ದರ ನಿಗದಿಯಾಗುವವರೆಗೂ ಯಾವ ಕಾರ್ಖಾನೆಯನ್ನು ಶುರು ಮಾಡಬಾರದು ಕಾರ್ಖಾನೆಯವರು ರೈತರನ್ನು ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಾರೆ ಯಾವುದೇ ಕಾರಣಕ್ಕೂ ರೈತರು ಕಬ್ಬನ್ನು ಕಡಿಸಲು ಮುಂದಾಗಬಾರದು ಎಂದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಕ್ರೋಶ ವ್ಯಕ್ತಪಡಿಸಿದರು.
ಈಗ ಸಕ್ಕರೆಯ ದರ ಸಾಕಷ್ಟು ಹೆಚ್ಚಾಗಿದ್ದು ಅದರ ಲಾಭ ರೈತರಿಗೂ ದೊರೆಯುವಂತಾಗಬೇಕು ಎಂದು ಹೇಳಿದರು ಮಾರುಕಟ್ಟೆ ಯಲ್ಲಿ ಸಕ್ಕರೆ ದರವನ್ನು ಸಾರ್ವಜನಿಕರಿಗೆ ಐವತ್ತು ರೂಪಾಯಿ ಹಾಗೂ ವಾಣಿಜ್ಯ ಬಳಕೆಗೆ ನೂರು ರೂಪಾಯಿ ಯಂತೆ ಸಕ್ಕರೆ ಧರ ನಿಗದಿಪಡಿಸಬೇಕು ಎಂದು ತಿಳಿಸಿದರು ಇದಲ್ಲದೆ ಕರ್ನಾಟಕ ರಾಜ್ಯದಲ್ಲಿ ಉತ್ಪಾದಿಸುತ್ತಿರುವ ಯಥನಾಲನ್ನು ಸಂಪೂರ್ಣವಾಗಿ ಸರಕಾರ ಖರೀದಿ ಮಾಡಿದರೆ ರೈತರಿಗೆ ಹೆಚ್ಚಿನ ಕಬ್ಬಿನ ದರ ನೀಡಲು ಅನುಕೂಲವಾಗುತ್ತದೆ ಎಂದ ಅವರು
ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿಗೆ ಅನುಕೂಲವಾಗುವಂತೆ ಅಳವಡಿಸಿದರೆ ಅದರಿಂದ ರೈತರಿಗೆ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ ಹಾಗೂ ಸ್ವಾಮಿನಾಥನ್ ವರದಿ ಈಗಲಾದರೂ ಜಾರಿಗೆ ಬರುವಂತಾಗಬೇಕು. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ನಮ್ಮ ಜಿಲ್ಲೆಯಲ್ಲಿ ಇರುವ ಸಕ್ಕರೆ ಸಚಿವರಾದ ಶ್ರೀಮಾನ್ಯ ರುದ್ರಪ್ಪ ಲಮಾಣಿ ಅವರ ಮನೆಯ ಎದುರುಗಡೆ ಕಬ್ಬು ಬೆಳೆಗಾರರ ಹೋರಾಟವನ್ನು ಮಾಡಲಾಗುವುದು ಆದಷ್ಟು ಬೇಗನೆ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರರ ಸಭೆಯನ್ನು ಕರೆದು ಸಚಿವರ ನೇತೃತ್ವದಲ್ಲಿ ಸಭೆ ಮಾಡಬೇಕೆಂದು ಎಂದು ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಎಚ್ಚರಿಸಿದ್ದಾರೆ ಇದೇ ಸಂದರ್ಭದಲ್ಲಿ ಗುತ್ತಲ ಭಾಗದ 30ಕ್ಕೂ ಹೆಚ್ಚು ಹಳ್ಳಿಗಳ ರೈತರು ಕಬ್ಬು ಬೆಳೆಗಾರರು ರೈತ ಮುಖಂಡರು ಸಂಘಟನೆಗಳ ಮುಖಂಡರು ಹಾಜರಿದ್ದರು.