ಕಬ್ಬು ಬೆಳೆಗಾರರ ಹೋರಾಟಕ್ಕೆ ರೈತ ಬಾಂಧವರಿಗೆ ಕರೆ
ವೀರಮಾರ್ಗ ನ್ಯೂಸ್ : ಹಾವೇರಿ : ಜಿಲ್ಲೆ ಹಾವೇರಿ ತಾಲೂಕ ಹೊಸರಿತ್ತಿ ಗ್ರಾಮದಲ್ಲಿ ಕಬ್ಬು ಬೆಳೆಗಾರರ ಸಭೆ ಆಯೋಜಿಸಲಾಗಿದೆ 2026/ 27 ನೇ ಸಾಲಿನ ಕಬ್ಬು ಕಟಾವು ಹಂಗಾಮ ಪ್ರಾರಂಭವಾಗುವ ಸಮಯ ಬಂದಿದೆ ಕಳೆದ ವರ್ಷಗಳಂತೆ ಈ ವರ್ಷವೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಇಳುವರಿ (ರಿಕವರಿ )ಕಡಿಮೆ ತೋರಿಸುವುದು ಹಾಗೂ ಕಬ್ಬಿಗೆ ಕಡಿಮೆ ದರ ನೀಡುವ ಮೂಲಕ ರೈತರಿಗೆ ಕಾರ್ಖಾನೆ ಅವರಿಂದ ಅನ್ಯಾಯವಾಗುವ ಸಾಧ್ಯತೆ ಇದೆ ಆದ್ದರಿಂದ ರೈತರ ಹಕ್ಕು ಮತ್ತು ನ್ಯಾಯಯುತ ಬೆಲೆ ಪಡೆಯಲು ಇಂದಿನಿಂದಲೇ ನಾವೆಲ್ಲ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ. ಕಬ್ಬು ಬೆಳೆಗಾರರಲ್ಲಿ ವಿನಂತಿ ಮಾಡಿದ್ದಾರೆ.
ರೈತ ಬಾಂಧವರೇ ಇದೇ ದಿನಾಂಕ್ 1 /9/ 2026ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಾವೇರಿ ತಾಲೂಕ ಹೊಸರಿತ್ತಿ ಗ್ರಾಮದ ಲಡ್ಡುಮುತ್ಯಾ ಅವರ ಶಾಲೆಯ ಆವರಣದಲ್ಲಿ ಕಬ್ಬು ಬೆಳೆಗಾರರ ಸಭೆ ಕರೆಯಲಾಗಿದೆ. ಈ ಭಾಗದ ಹತ್ತಾರು ಹಳ್ಳಿಗಳ ಕಬ್ಬು ಬೆಳೆಗಾರರು ಸೇರಿಕೊಂಡು ಸಭೆ ಕರೆಯಲಾಗಿದೆ ಹಳೆಯ ಬಾಕಿ ಈ ವರ್ಷದ ಕಬ್ಬಿನ ರಿಕವರಿ ದುಬಾರಿ ಕಟಾವು ಹಾಗೂ ಕೂಲಿಯ ವೆಚ್ಚ ಇವೆಲ್ಲವುಗಳ ಸಮಗ್ರ ಚರ್ಚಿಸಿ ಮುಂದಿನ ದಿನಮಾನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೋರಾಟ ರೂಪಿಸಿಕೊಳ್ಳಲು ಪೂರ್ವಭಾವಿ ಸಭೆಯನ್ನು ಈ ಭಾಗದ ಎಲ್ಲ ಮುಖಂಡರ ಒಪ್ಪಿಗೆ ಪಡೆದು ಸಭೆ ಕರೆಯಲಾಗಿದೆ ಈ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚಿಸಿ ನಿಮ್ಮ ಅಭಿಪ್ರಾಯಗಳನ್ನು ಪಡೆದುಕೊಂಡು ಮುಂದಿನ ದಿನಮಾನಗಳಲ್ಲಿ ಹೋರಾಟ ಮಾಡಿ ನಮ್ಮ ಹಕ್ಕನ್ನು ನಾವು ಪಡೆಯೋಣ ಎಂದು ಚರ್ಚಿಸುವ ಸಲುವಾಗಿ ಸಭೆ ಕರೆಯಲಾಗಿದೆ ಯಾರಿಗೂ ಪ್ರತ್ಯೇಕವಾಗಿ ಫೋನ್ ಮಾಡುವುದಿಲ್ಲ ರೈತರ ಹಿತಕ್ಕಾಗಿ ಕಬ್ಬಿಗೆ ಸರಿಯಾದ ದರ ಪಡೆಯಲು ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಹೊಸರಿತ್ತಿ ಭಾಗದ ಕಬ್ಬು ಬೆಳೆಗಾರರು ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.