ಕಬ್ಬಿನ ಬೆಳೆಗೆ ಹೊಸ ದರ ನಿಗದಿ ಮಾಡಿ ಭುವನೇಶ್ವರ ಶಿಡ್ಲಾಪುರ
ವೀರಮಾರ್ಗ ನ್ಯೂಸ್ : ಹಾವೇರಿ : ಸಕ್ಕರೆ ಬೆಲೆ ಏರಿಕೆಯಾಗಿದೆ ಅದರೊಂದಿಗೆ ಯತನಾಲ್ ಉತ್ಪಾದನೆ ಹೆಚ್ಚಳ ಸಹ ಆಗುತ್ತಿದೆ ಹೀಗಾಗಿ ರೈತರ ಹಿತ ರಕ್ಷಣೆ ಸ್ಥಳೀಯ ಯತನಾಲ್ ಉತ್ಪಾದನೆ ಹಾಗೂ ಬ್ರೆಜಿಲ್ ಮಾದರಿಯೇ ವೈಜ್ಞಾನಿಕ ಕಬ್ಬು ನೀತಿಯನ್ನು ಜಾರಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯು ದಿನೇ ದಿನೇ ಏರಿಕೆ ಕಾಣುತ್ತಿದೆ ಸಕ್ಕರೆ ಕಾರ್ಖಾನೆಗಳು ಯಥಾಲ್ ಉತ್ಪಾದನೆಯಿಂದ ಭಾರಿ ಲಾಭ ಗಳಿಸುತ್ತಿವೆ ಆದರೆ ಕಬ್ಬು ಬೆಳೆಯುವ ರೈತನಿಗೆ ಮಾತ್ರ ನ್ಯಾಯಯುತ ಬೆಲೆ ಸಿಗದೇ ಕಹಿ ಅನುಭವಿಸುವಂತಾಗಿದೆ
ಕಾರ್ಖಾನೆಗಳ ಶಕ್ತಿಶಾಲಿ ಲಾಭಿಗೆ ಸರ್ಕಾರಗಳು ಮಣಿಯುತ್ತಿದ್ದು ಬೆವರು ಹರಿಸಿ ಬೆಳೆ ತೆಗೆಯುವ ರೈತರ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಪ್ರಸ್ತುತ ದಿನಗಳಲ್ಲಿ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಪರಿಸ್ಥಿತಿಯಿಂದಾಗಿ ಹೆಚ್ಚು ಕಬ್ಬು ಉತ್ಪಾದನೆ ಉತ್ತರ ಪ್ರದೇಶ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಕಬ್ಬಿನ ಇಳುವರಿ ಗಣನೀಯವಾಗಿ ಕುಸಿದಿದೆ ಬೆಳೆ ನಷ್ಟ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಈ ಬಿಕ್ಕಟ್ಟನ್ನು ನಿವಾರಿಸಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ
“ರೈತರಿಗೆ ಅಲೆಮನೆಗಳಲ್ಲಿ ಏತನಾಲ್ ಉತ್ಪಾದನೆಗೆ ಅವಕಾಶ ಕೊಡಬೇಕು” ದೊಡ್ಡ ದೊಡ್ಡ ಸಕ್ಕರೆ ಕಾರ್ಖಾನೆ ಗಳಿಗೆ ಮಾತ್ರ ಯತನಾಲ್ ಲಾಭ ಸೀಮಿತವಾಗಬಾರದು ರೈತರು ತಮ್ಮ ಸ್ಥಳೀಯ ಆಲೆಮನೆಗಳಲ್ಲಿಯೇ ಯಥನಾಲ್ ಉತ್ಪಾದನೆ ಮಾಡಿಕೊಳ್ಳಲು ಸರ್ಕಾರ ಸರಳ ನಿಯಮ ಹಾಗೂ ನೀತಿಯನ್ನು ರೂಪಿಸಬೇಕು ಹೀಗೆ ಉತ್ಪಾದಿಸಿದ ಯಥನಾಲನ್ನು ಅಡುಗೆಮನೆಗಳಲ್ಲಿ ಇಂಧನವಾಗಿ ಬೆಳೆಸಲು ರೈತರ ಸ್ವಂತ ವಾಹನಗಳು ಹಾಗೂ ಟ್ಯಾಕ್ಟರ್ ಗಳಿಗೆ ಇಂಧನವಾಗಿ ಬಳಸಿಕೊಳ್ಳಲು ಹಾಗೂ ಹೆಚ್ಚುವರಿ ಯತನಾಲ್ ಸರಕಾರವೇ ನಿಗದಿತ ಬೆಲೆಗೆ ಖರೀದಿ ಮಾಡಲು ಅವಕಾಶ ನೀಡಬೇಕು ಇದರಿಂದ ರೈತರ ಇಂಧನ ವೆಚ್ಚ ಗಣನೀಯವಾಗಿ ಕಡಿಮೆಯಾಗಿ ಅವರ ಆರ್ಥಿಕ ಸಬಲೀಕರಣಕ್ಕೆ ದಾರಿಯಾಗುತ್ತದೆ
ಈ ವರ್ಷ ಕಬ್ಬಿಗೆ ಸರಿಯಾಗಿ ಧರ ನಿಗದಿ ಮಾಡಿ ಪ್ರತಿ ಟನ್ ಕಬ್ಬಿಗೆ 5500 ದರ ಘೋಷಣೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಾವೇರಿ ಜಿಲ್ಲಾ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದ್ದಾರೆ