ನಗರಸಭೆ ಆದರೂ ಬಸ್ ನಿಲ್ದಾಣದ ಸ್ಥಿತಿ ಅದೋಗತಿ!

ನಗರಸಭೆ ಯಾದರೂ ಬಸ್ ನಿಲ್ದಾಣದ ಸ್ಥಿತಿ ಮಾತ್ರ ಬದಲಾಗಿಲ್ಲ!

ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲಾ : ಹರಪನಹಳ್ಳಿ : ಗ್ರಾಮ ಪಂಚಾಯಿತಿಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹರಪನಹಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವಚ್ಛತೆಯ ಸಮಸ್ಯೆ ಮುಂದುವರೆದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬಸ್ ನಿಲ್ದಾಣದ ವಿವಿಧಡೆ ಕಸದ ರಾಶಿ ಕಂಡು ಬರುತ್ತಿದ್ದು ಕಸದ ಬುಟ್ಟಿಗಳಿದ್ದರೂ ಅವುಗಳಲ್ಲಿ ಕಸ ತುಂಬಿ ಹೊರಗೆ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ ಕೆಳಗಡೆ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಿರುವುದು ಕಾರಣ ಸರಿಯಾದ ರೀತಿಯಲ್ಲಿ ಕಸದ ಬುಟ್ಟಿಗಳನ್ನು ಹಿಡದೆ ಇರುವುದು ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

ಬಸ್ ನಿಲ್ದಾಣದ ಶೌಚಾಲಯವು ಸ್ವಚ್ಛ ವಿಲ್ಲ ಹಾಗೂ ಸುತ್ತಮುತ್ತಲು ಸ್ವಚ್ಛತೆಯ ಕೊರತೆ ಕಂಡುಬರುತ್ತಿತ್ತು ಗೋಡೆಗಳು ಸುಮಾರು ದಿನಗಳಿಂದ ಕೊಳಕಿನಿಂದ ಕೂಡಿವೆ ನೀರು ನಿಂತಿರುವ ಜಾಗಗಳು ಹಾಗೂ ದುರ್ವಾಸನೆ ಉಂಟಾಗುವಂತೆ ಪರಿಸ್ಥಿತಿ ಕಂಡುಬರುತ್ತಿದೆ ಸಾರ್ವಜನಿಕರು ಬಳಸುವ ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆಯೇ ಎಂಬುದು ಪ್ರಶ್ನೆಯಾಗಿದೆ.

ಇನ್ನು ಕುಡಿಯುವ ನೀರಿನ ವ್ಯವಸ್ಥೆಯಲ್ಲಿಯೂ ಸಮಸ್ಯೆ ಕಂಡು ಬರುತಿದೆ ನೀರಿನ ಘಟಕದ ಸುತ್ತಮುತ್ತಲಿನ ಕೊಳಕು ರೋಗಗಳ ಭಯ ಹಾಗೂ ಹಸಿರು ಪಾಚಿ ಕಾಣಿಸಿಕೊಂಡಿದ್ದು ಕುಡಿಯುವ ನೀರಿನ ವ್ಯವಸ್ಥೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ನಿರ್ವಹಿಸಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಬಸ್ ನಿಲ್ದಾಣಕ್ಕೆ ಪ್ರತಿದಿನ ನೂರಾರು ಪ್ರಯಾಣಿಗರು ಆಗಮಿಸುತ್ತಾರೆ. ಮಹಿಳೆಯರು ಮಕ್ಕಳು ವೃದ್ಧರು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರು ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಅವಲಂಬಿಸಿದ್ದಾರೆ ಇಂತಹ ಸ್ಥಳದಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ನಗರ ಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಪಟ್ಟಣದ ಮೂಲಸೌಕರ್ಯ ಸಾಧಾರಣ ವಾಗಬೇಕೆಂಬ ನಿರೀಕ್ಷೆ ಸಾರ್ವಜನಿಕರಲ್ಲಿದೆ ಸಂಬಂಧಪಟ್ಟ ಅಧಿಕಾರಿಗಳು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸ್ವಚ್ಛತೆ ಕಸ ವಿಲೇವಾರಿ ಶೌಚಾಲಯಗಳ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ನಗರಸಭೆಯಾದರೂ ಸ್ವಚ್ಛತೆ ಮಾತ್ರ ಮರೀಚಿಕೆ: ಹರಪನಹಳ್ಳಿ ಬಸ್ ನಿಲ್ದಾಣದಲ್ಲಿ ಕಸದ ರಾಶಿ!