ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರೇ ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಮಾಡುತ್ತಿರುವ ಅವ್ಯವಸ್ಥೆ,,,
ಹರಪನಹಳ್ಳಿ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಕಾಪಾಡುವುದು ಯಾರ ಜವಾಬ್ದಾರಿ….?
ಗೋಡೆ ಮತ್ತು ಗೆಟ್ ಭಾಗದಲ್ಲಿ ಕಲೆ ಮತ್ತು ಕೊಳಕು,,,
ಗೋಡೆ ಮೇಲೆ ಹೆಚ್ಚು ಗಲೀಜು ಮತ್ತು ಪಾನ್ ಕಲೆಗಳು…
ಕಿಟಕಿ ಬಳಿ ತ್ಯಾಜ್ಯ ಮತ್ತು ತುಕ್ಕು ಹಿಡಿಡಿರುವ ಸ್ಥಿತಿ ಇದರಿಂದ ರೋಗ ಹರಡಬಹುದು…
ವೀರಮಾರ್ಗ ನ್ಯೂಸ್ : ಹರಪನಹಳ್ಳಿ : ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಎಂದರೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಪ್ರಮುಖ ಸ್ಥಳ. ಆದರೆ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿರುವುದು ಕಿಡಕಿಗಳ ಬಳಿ ತ್ಯಾಜ್ಯ
ಹಾಕಿರುವುದು ಆ ಶುಚಿಗೊಳಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವುದು ಆಡಳಿತದ ಜವಾಬ್ದಾರಿಯಷ್ಟೇ ಅಲ್ಲ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ಸಾರ್ವಜನಿಕರ ಜವಾಬ್ದಾರಿಯು ಹೌದು. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಆಸ್ಪತ್ರೆಯ ಪರಿಸರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ಸಹಕರಿಸಬೇಕಾಗಿದೆ.
“ಸರ್ಕಾರಿ ಆಸ್ಪತ್ರೆ ನಮ್ಮದು_ಸ್ವಚ್ಛವಾಗಿಡುವ ಜವಾಬ್ದಾರಿಯೂ ನಮ್ಮದು”
ವರದಿ : ಅನಿತಾ ಕೆ ಸಿ ಹರಪನಹಳ್ಳಿ.