ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿ: ಭುವನೇಶ್ವರ ಶಿಡ್ಲಾಪುರ ಒತ್ತಾಯ.
ವೀರಮಾರ್ಗ ನ್ಯೂಸ್ : ಹಾವೇರಿ : ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯಿಂದಾಗಿ ಕಬ್ಬಿನ ಇಳುವರಿ ತೀವ್ರವಾಗಿ ಖುಷಿಯುತ್ತಿದ್ದು ರೈತರ ಉತ್ಪಾದನಾ ವೆಚ್ಚ ಗಗನಕ್ಕೆರುತ್ತಿದೆ ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಸಂಗೂರ ಜಿಎಂ ಶುಗರ್ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿಸುವ ಕುರಿತು ಚರ್ಚಿಸಲು ಜಿಲ್ಲಾಡಳಿತ ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆಯ ಮಾಲೀಕರ ತುರ್ತು ಜಂಟಿ ಸಭೆ ಕರೆಯುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ ಜಿಲ್ಲಾಡಳಿತದ ಮುಂದೆ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಇಡಲಾಗುವುದು ಸಂಗೂರ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮು ಆರಂಭಿಸುವ ಮುನ್ನವೇ ರಾಜ್ಯ ಸರ್ಕಾರ ನಿಗದಿ ಮಾಡಿದ್ದ 50/50 ಹಿಂದಿನ ವರ್ಷದ ಸಹಾಯಧನ ಮೊತ್ತವಾದ ಪ್ರತಿ ಟನ್ ಕಬ್ಬಿಗೆ ರೂ.50ರೂಪಾಯಿ ಸರ್ಕಾರ ಕೊಟ್ಟಿದೆ ಇನ್ನು ಉಳಿದ 50 ರೂಪಾಯಿಗಳನ್ನು ಕಾರ್ಖಾನೆ ಅವರು ಕೊಡಬೇಕು ಇಲ್ಲಿಯವರೆಗೂ ಹಣ ಹಾಕಿರುವುದಿಲ್ಲ ಮತ್ತು ಕಬ್ಬಿನ ಬಾಕಿ ಹಣ 20 ಕಿಲೋಮೀಟರ್ ಅಂತರದ ಒಳಗಿನ ರೈತರಿಗೆ ಪ್ರತಿ ಟನ್ ಕಬ್ಬಿಗೆ 31 ರೂಪಾಯಿ ಬಾಕಿ ಕೊಡುವುದು ಇದೆ ರೈತರ ಖಾತೆಗಳಿಗೆ ತಕ್ಷಣವೇ ಪಾವತಿಸಬೇಕು ಕಬ್ಬಿನ ಉಪ ಉತ್ಪನ್ನಗಳಾದ ಸಕ್ಕರೆ ಬಗ್ಯಾಸ್ ಕಾಕಂಬಿ ಮೊಲಾಸಿಸ್ಯಿ ಬೂದಿ ಕೊಜನ್ ಫ್ರೆಶ್ ಮಡ್ಡ ನಿಂದ ಬಂದಿರುವ ಹೆಚ್ಚುವರಿ ಲಾಭವನ್ನು ಲೆಕ್ಕಹಾಕಿ ರೈತರಿಗೆ ನ್ಯಾಯಯುತವಾಗಿ ಹಂಚಿಕೆ ಮಾಡಬೇಕು.
ಪ್ರಸಕ್ತ 2026- 27 ನೇ ಸಾಲಿನ ಕಬ್ಬಿನ ದರವನ್ನು 4500 ಮಾಡಬೇಕು ಕಾರ್ಖಾನೆ ಆರಂಭಕ್ಕೂ ಮುನ್ನವೇ ಅಧಿಕೃತವಾಗಿ ದರ ನಿಗದಿಪಡಿಸಿ ಘೋಷಿಸಬೇಕು ಅಲ್ಲಿಯತನಕ ದರ ನಿಗದಿಯಾಗುವವರೆಗೂ ಕಾರ್ಖಾನೆ ಆರಂಭಿಸಕೂಡದು ರೈತರ ಒಪ್ಪಿಗೆ ಪಡೆದು ಕಾರ್ಖಾನೆ ಆರಂಭಿಸಬೇಕು ಬರ ಪರಿಸ್ಥಿತಿಯಿಂದ ಕಬ್ಬಿನ ಇಳುವರಿ ಕಡಿಮೆಯಾಗುತ್ತಿದ್ದು ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್ ಆರ್ ಪಿ ಗಿಂತ ಹೆಚ್ಚುವರಿ ದರವನ್ನು ರಾಜ್ಯ ಸರ್ಕಾರ ನಿಗದಿಪಡಿಸಬೇಕು ಕಬ್ಬು ಕಟಾವು ಕೂಲಿ ಮತ್ತು ಸಾಗಾಣಿಕೆ ವೆಚ್ಚವನ್ನು ಮೊದಲೇ ನಿರ್ಧರಿಸಬೇಕು ಯಾವುದೇ ತಾರತಮ್ಯವಿಲ್ಲದೆ ಹಿರಿತನದ ಆಧಾರದ ಮೇಲೆ ಕಬ್ಬು ಕಟಾವು ಪ್ರಕ್ರಿಯೆ ನಡೆಸಬೇಕೆಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದರು
ಕಾರ್ಖಾನೆಗಳು ಸರ್ಕಾರದ ಆದೇಶಗಳನ್ನು ಪ್ರತಿಬಾರಿಯೂ ಗಾಳಿಗೆ ತೂರಿ ನ್ಯಾಯಾಲಯದಿಂದ ತಡೆ ಆಜ್ಞೆ ತಂದು ರೈತರನ್ನು ವಂಚಿಸುವುದು , ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಮಾಮೂಲಿಯಾಗಿದೆ ಆದ್ದರಿಂದ ಜಿಲ್ಲಾಧಿಕಾರಿಗಳು ಈ ಬಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡುವ ಮುನ್ನವೇ ತ್ರಿಪಕ್ಷೀಯ ಸಭೆ ಕರೆದು ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿದರು. ಒಂದು ವೇಳೆ ಜಿಲ್ಲಾಡಳಿತ ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮುಂದೆ ನಿರಂತರ ಚಳುವಳಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘ ಎಚ್ಚರಿಕೆ ನೀಡಿದೆ.