ಅನ್ನ ನೀಡುವ ರೈತನಿಗೆ ಸರ್ಕಾರ ಆತ್ಮಹತ್ಯೆ ಭಾಗ್ಯ ನೀಡದಿರಲಿ.
ಕಬ್ಬಿನ ಬೆಳೆಗೂ ಬೆಳೆವಿಮೆ ತುಂಬುವ ಅವಕಾಶ ಕೊಡಿ ರೈತರ ಬೆಳೆಸಾಲ ಮನ್ನಾ ಮಾಡಿ ಭುವನೇಶ್ವರ ಶಿಡ್ಲಾಪುರ ಆಗ್ರಹ
ವೀರಮಾರ್ಗ ನ್ಯೂಸ್ : ಹಾವೇರಿ : ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಅತಿ ಹೆಚ್ಚು ಬಿಸಿಲು ಬೀಳುತ್ತದೆ ಭೂಮಿಯಲ್ಲಿ ತೇವಾಂಶದ ಕೊರತೆ ಇದೆ ಮಳೆ ಇಲ್ಲ ಬೆಳೆಗಳು ಒಣಗುತ್ತಿವೆ ಮಧ್ಯಾಹ್ನದ ಬಿಸಿಲಿನಲ್ಲಿ ಹೊಲಕ್ಕೆ ಹೋದರೆ ಬೆಳೆಗಳು ಬತ್ತಿರುತ್ತವೆ ಹೊಲಕ್ಕೆ ಹೋಗಿ ಬೆಳೆಗಳನ್ನು ನೋಡಿದರೆ ರೈತರಿಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವವಿದೆ ಸಾಲದ ಸುಳಿವಿನಲ್ಲಿ ಸಿಲುಕಿಕೊಂಡ ರೈತನ ಪರಿಸ್ಥಿತಿ ಅತಂತ್ರವಾಗಿದೆ. ಅದಕ್ಕಾಗಿ ರೈತರ ಬೆಳೆ ಸಾಲವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿಕೊಂಡು ಸಂಪೂರ್ಣವಾಗಿ ಮನ್ನಾ ಮಾಡಬೆಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿದ್ದು ಒಟ್ಟು ಇಪ್ಪತ್ತೈದು ಲಕ್ಷ ಕಿಂತ ಹೆಚ್ಚು ಟನ್ ಕಬ್ಬನ್ನು ರೈತರು ಹಾವೇರಿ ಜಿಲ್ಲೆಯಲ್ಲಿ ಬೆಳೆಯುತ್ತಿದ್ದಾರೆ ಈ ವರ್ಷ ಮುಂಗಾರಿನಿಂದಲೂ ಮಳೆ ಇಲ್ಲದೆ ಬೆಳೆಗಳು ಕುಂಠಿತಗೊಂಡಿವೆ ಬೇಸಿಗೆಯಲ್ಲಿ ಬೋರ್ವೆಲ್ ನೀರು ಕಡಿಮೆಯಾಗಿ ಸಮಸ್ಯೆ ಆಯ್ತು ಈಗ ಮಳೆಯಾಗದೆ ಇರುವದರಿಂದ ಇಳುವರಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎರಡು ವರ್ಷದಿಂದ ರೈತ ಅತಿವೃಷ್ಠಿ ಅನಾವೃಷ್ಟಿಯಲ್ಲಿ ನಲುಗಿ ಬೆಂದು ಹೋಗಿದ್ದಾನೆ ಸಿಹಿ ಕೊಡುವ ರೈತರಿಗೆ ಸರ್ಕಾರಗಳು ಕಹಿ ಕೊಡಬಾರದು ಕಬ್ಬು ಬೆಳೆ ಬೆಳೆಯಲು ದುಬಾರಿ ವೆಚ್ಚ ತಗುಲುತ್ತಿದೆ ಗೊಬ್ಬರ ದುಬಾರಿಯಾಗಿದೆ ಕೂಲಿಕಾರರ ಸಂಬಳ ಹೆಚ್ಚಾಗಿದೆ ರೈತರಿಗೆ ಕಬ್ಬಿನ ದರ ಕಡಿಮೆಯಾಗುತ್ತಿದೆ ಈ ವರ್ಷ ಪ್ರತಿ ಟನ್ ಕಬ್ಬಿಗೆ ನಾಲ್ಕುವರೆ ಸಾವಿರ ದರ ನಿಗದಿ ಮಾಡಬೇಕು ಉಳಿದ ಬೆಳೆಗಳಿಗೆ ಹೇಗೆ ಬೆಳೆಯುಮೆ ತುಂಬಲು ಅವಕಾಶವಿದೆಯೋ ಅದೇ ರೀತಿ ಕಬ್ಬಿಗೆ ಬೆಳೆ ವಿಮೆ ತುಂಬುವ ಅವಕಾಶ ಕಲ್ಪಿಸಿಕೊಡಬೇಕು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಪಾಡಲು ಮುಂದಾಗ ಮುಂದಾಗ ಬೇಕೆಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮನವಿ ಮಾಡಿದ್ದಾರೆ.