ರಸಗೊಬ್ಬರ ಬೆಲೆ ಏರಿಕೆ ಹಿಂಪಡೆಯಿರಿ ಕಬ್ಬಿನ ಬೆಳೆಗೆ ಹಾಕಲು ಯೂರಿಯಾ ಗೊಬ್ಬರ ಕೊಡಿ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ದಿನೇ ದಿನೇ ಹೆಚ್ಚುತ್ತಿರುವ ರಸಗೊಬ್ಬರ ಬೆಲೆಯನ್ನು ತಕ್ಷಣವೇ ಹಿಂಪಡೆಯಬೇಕು ರಸಗೊಬ್ಬರ ಖರೀದಿಗೆ ಕಡ್ಡಾಯಗೊಳಿಸಿರುವ ಎಫ್ ಐ ಡಿ ನಿಯಮ ರದ್ದುಪಡಿಸುವದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ ಸೇರಿಕೊಂಡು ಜಂಟಿ ಕೃಷಿ ನಿರ್ದೇಶಕರಾದ ಕೆ ಮಲ್ಲಿಕಾರ್ಜುನ್ ಅವರಲ್ಲಿ ಮನವಿ ಮಾಡಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ ಪ್ರಸ್ತುತ ಕೃಷಿ ವಲಯದಲ್ಲಿ ಬೀಜ ರಸಗೊಬ್ಬರ ಕೂಲಿ ಡೀಸೆಲ್ ಕೀಟನಾಶಕಗಳ ವೆಚ್ಚ ದುಬಾರಿಯಾಗಿದೆ ಇಂಥ ಸಂದರ್ಭದಲ್ಲಿ ಸರ್ಕಾರಗಳು ಮತ್ತು ರಸಗೊಬ್ಬರ ಕಂಪನಿ ಗಳು ರಸಗೊಬ್ಬರಗಳ ಬೆಲೆಯನ್ನು ನಿರಂತರವಾಗಿ ಹೆಚ್ಚಿಸಿರುವುದು ರೈತರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಪೂರೈಸಬೇಕು
ರಸಗೊಬ್ಬರ ಖರೀದಿಗೆ ಎಫ್ ಐ ಡಿ ಕಡ್ಡಾಯಗೊಳಿಸಿರುವುದು ರೈತ ವಿರೋಧಿ ನಿಯಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈ ನಿಯಮದಿಂದ ಸಾವಿರಾರು ರೈತರು ಸಂಕಷ್ಟಕ್ಕೆ ಶಿಲುಕಿದ್ದಾರೆ ಅನೇಕ ರೈತ ಕುಟುಂಬಗಳಲ್ಲಿ ಜಮೀನಿನ ಮೂಲ ಮಾಲೀಕರು ಮರಣ ಹೊಂದಿದ್ದು ದಾಖಲೆಗಳು ಅವರ ಹೆಸರಿನಲ್ಲಿಯೇ ಇವೆ ಹಿರಿಯರ ಹೆಸರಿನಲ್ಲಿರುವ ಭೂಮಿಯಲ್ಲಿ ಮಕ್ಕಳು ಬೇಸಾಯ ಮಾಡುತ್ತಿದ್ದಾರೆ ಇನ್ನು ಕೆಲವು ಕಡೆ ಕೌಟುಂಬಿಕ ವ್ಯಾಜ್ಯ ನ್ಯಾಯಾಲಯದ ಪ್ರಕರಣಗಳಿಂದಾಗಿ ಎಫ್ಐ ಡಿ ನೋಂದಣಿಯಾಗಿಲ್ಲ ಇಂಥ ಪರಿಸ್ಥಿತಿಯಲ್ಲಿ ಹೆಬ್ಬೆರಳಿನ ಗುರುತು ಅಥವಾ ದೃಢೀಕರಣ ಕಡ್ಡಾಯ ಅಥವಾ ಓಟಿಪಿ ಹೇಳಬೇಕು ಎನ್ನುವುದರಿಂದ ನೈಜ ರೈತರಿಗೆ ಗೊಬ್ಬರ ಸಿಗುತ್ತಿಲ್ಲ ತಾಂತ್ರಿಕ ಅಡೆತಡೆಗಳನ್ನು ತಕ್ಷಣ ದೂರಗೊಳಿಸಿ ಹಳೆಯ ಪದ್ಧತಿಯಲ್ಲಿಯೇ ರಸಗೊಬ್ಬರ ವಿತರಿಸಬೇಕೆಂದು ಆಗ್ರಹಿಸಿದರು.
ಈಗಾಗಲೇ ಮುಂಗಾರು ಮಳೆ ಉತ್ತಮವಾಗಿದ್ದು ಹಾವೇರಿ ಜಿಲ್ಲೆಯಲ್ಲಿ 25 ಲಕ್ಷಕ್ಕಿಂತ ಹೆಚ್ಚು ಟನ್ ಕಬ್ಬು ಬೆಳೆಯುವ ರೈತರಿಗೆ ಗೊಬ್ಬರ ಸಿಗುತ್ತಿಲ್ಲ ಎಫ್ ಐಡಿ ಪ್ರಕಾರ ಒಂದು ಎಕರೆಗೆ ಒಂದು ಚೀಲ ಗೊಬ್ಬರ ಕೊಟ್ಟರೆ ಸಾಕಾಗುವುದಿಲ್ಲ ಆದಕಾರಣ ಕಬ್ಬು ಬೆಳೆಯುವಂತ ರೈತರಿಗೆ ಉತಾರವನ್ನು ನೋಡಿ ಬೆಳೆ ದೃಢೀಕರಣ ತೆಗೆದುಕೊಂಡು ಒಂದು ಎಕರೆಗೆ ಮೂರು ಚೀಲ ಯೂರಿಯಾ ಗೊಬ್ಬರ ಕೊಡಬೇಕೆಂದು ಜಂಟಿ ಕೃಷಿ ನಿರ್ದೇಶಕದಲ್ಲಿ ಮನವಿ ಮಾಡಲಾಯಿತು ಇದೇ ಸಂದರ್ಭದಲ್ಲಿ ಭುವನೇಶ್ವರ ಶಿಡ್ಲಾಪುರ, ಎಂ ಎಸ್ ಪಾಟೀಲ್, ಮಾಲಿಂಗಪ್ಪ ಬಿದ್ರು ಮಳ್ಳಿ, ಶೀಲಾ ಭದ್ರಾವತಿ, ತೌಶಿಪ್ ಹಸನಾಬಾದಿ, ನಸೀಮಾಬಾನು ಲೊಹಾರ್, ಕುರ್ಶಿದಾ ಕಬ್ಬೂರ, ಪುಷ್ಪಾ ಅಗಸಿಬಾಗಿಲ, ಚನ್ನಸಪ್ಪ ಅಂಗಡಿ, ಚನ್ನಬಸಯ್ಯ ದೊಡ್ಡಕಂಚತಿನಮಠ, ಶಿವನಗೌಡ ಪಾಟೀಲ್, ಆದಮ್ ಖಾನ್ ನೆಗಳೂರ್ ವೀರಣ್ಣ ಬ್ಯಾಗವಾದಿ ಶೇಖಪ್ಪ ಬಸಾಪುರ್ ಇನ್ನೂ ಅನೇಕ ರೈತ ಮುಖಂಡರು ಹಾಜರಿದ್ದರು.