ಬ್ಯಾಂಕ್ ಉದ್ಯೋಗಿ ಬೆತ್ತಲೆ ಸ್ಥಿತಿಯಲ್ಲಿ ಹೆಣವಾಗಿ ಪತ್ತೆ!

ಬ್ಯಾಂಕ್ ಉದ್ಯೋಗಿ ಬೆತ್ತಲೆ ಸ್ಥಿತಿಯಲ್ಲಿ ಹೆಣವಾಗಿ ಪತ್ತೆ!

ಶಾಕಿಂಗ್‌ ನ್ಯೂಸ್: ಸ್ನೇಹಿತರೊಂದಿಗೆ ಪಾರ್ಟಿಗೆ ಹೋದ ಬ್ಯಾಂಕ್ ಉದ್ಯೋಗಿ ಬೆತ್ತಲೆ ಸ್ಥಿತಿಯಲ್ಲಿ ಹೆಣವಾಗಿ ಪತ್ತೆ! ಕೊಲೆಯೋ? ಅಪಘಾತವೋ?

ವೀರಮಾರ್ಗ ನ್ಯೂಸ್ : ಬಳ್ಳಾರಿ : ಸ್ನೇಹಿತರೊಂದಿಗೆ ವೀಕೆಂಡ್ ಪಾರ್ಟಿಗೆಂದು ತೆರಳಿದ್ದ ಮಹಿಳೆಯೊಬ್ಬರು ಭೀಕರ ಹಾಗೂ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಗಣಿ ನಾಡು ಬಳ್ಳಾರಿಯಲ್ಲಿ ಇಡೀ ಜಿಲ್ಲೆಯನ್ನೇ ನಡುಗಿಸಿದೆ. ಬಳ್ಳಾರಿಯ ಹಂದ್ರಾಳ್‌ ಹಳ್ಳದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಯಾರು ಈ ಮಹಿಳೆ? ಏನಿದು ಘಟನೆ?

ಮೃತ ದುರ್ದೈವಿಯನ್ನು ಬಳ್ಳಾರಿಯ ಕೌಲ್ ಬಜಾರ್ ನಿವಾಸಿ ಅನಿಷಾ ಫಾತೀಮಾ (38) ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಪ್ರಗತಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ಶನಿವಾರ (ಜೂನ್ 6) ರಾತ್ರಿ ಬ್ಯಾಂಕ್ ಸಹೋದ್ಯೋಗಿಗಳ ಜೊತೆ ಪಾರ್ಟಿಗೆಂದು ಅನಿಷಾ ತೆರಳಿದ್ದರು ಎನ್ನಲಾಗಿದೆ.

ರಾತ್ರಿ 11 ಗಂಟೆಗೆ ಪತಿಗೆ ಬಂದಿತ್ತು ಕೊನೆಯ ಕರೆ!

ಪಾರ್ಟಿಯಲ್ಲಿದ್ದ ಅನಿಷಾ ಫಾತೀಮಾ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ಪತಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ, ಆ ಕರೆ ಮುಗಿದ ನಂತರ ಅನಿಷಾ ಅವರ ಮೊಬೈಲ್ ಸಂಪರ್ಕಕ್ಕೆ ಸಿಗಲೇ ಇಲ್ಲ. ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸುತ್ತಿರುವಾಗಲೇ ಭಾನುವಾರ ಬೆಳಿಗ್ಗೆ ಹಂದ್ರಾಳ್ ಹಳ್ಳದ ಪಕ್ಕದ ಜಾಲಿ ಬೇಲಿಯಲ್ಲಿ ಅನಿಷಾ ಅವರ ಮೃತದೇಹ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹ ಪತ್ತೆಯಾದ ಸ್ಥಿತಿ ಕಂಡು ಬೆಚ್ಚಿಬಿದ್ದ ಜನ!

ಹಳ್ಳದ ಪಕ್ಕದ ಜಾಲಿ ಬೇಲಿಯಲ್ಲಿ ಮಹಿಳೆಯ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರನ್ನು ಹಾಗೂ ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ. ಮೃತದೇಹ ಒಂದು ಕಡೆ ಸಿಕ್ಕರೆ, ಅವರು ಚಲಾಯಿಸುತ್ತಿದ್ದ ಸ್ಕೂಟಿ ಮತ್ತೊಂದು ಕಡೆ ಪತ್ತೆಯಾಗಿದೆ. ಇದು ಹಲವು ತರಹದ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪೊಲೀಸರ ಪ್ರಾಥಮಿಕ ಅಂದಾಜು:

ಶನಿವಾರ ರಾತ್ರಿ ಬಳ್ಳಾರಿಯಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಹಂದ್ರಾಳ್ ಹಳ್ಳ ತುಂಬಿ ಹರಿಯುತ್ತಿತ್ತು. ನೀರಿನ ರಭಸಕ್ಕೆ ಸ್ಕೂಟಿ ಸಮೇತ ಮಹಿಳೆ ಕೊಚ್ಚಿ ಹೋಗಿರಬಹುದು, ನೀರಿನ ರಭಸಕ್ಕೆ ಬಟ್ಟೆಗಳು ಹರಿದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕುಟುಂಬಸ್ಥರ ಕಣ್ಣೀರು, ನ್ಯಾಯಕ್ಕಾಗಿ ಆಗ್ರಹ!

“ನಮ್ಮ ಮನೆ ಹೆಣ್ಣು ಮಗಳಿಗೆ ಆದ ಇಂತಹ ಭೀಕರ ಸ್ಥಿತಿ ಇನ್ನೊಬ್ಬರಿಗೆ ಬರಬಾರದು. ಇದರ ಹಿಂದೆ ಬೇರೇನೋ ಸಂಚಿರುವ ಅನುಮಾನವಿದೆ. ಘಟನೆಯ ಸಂಪೂರ್ಣ ತನಿಖೆಯಾಗಬೇಕು” ಎಂದು ಮೃತರ ಕುಟುಂಬಸ್ಥರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.

ಸದ್ಯಕ್ಕೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಎಪಿಎಂಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಇದು ಮಳೆಯ ನೀರಿನ ರಭಸಕ್ಕೆ ನಡೆದ ಅಪಘಾತವೋ ಅಥವಾ ಪಾರ್ಟಿಗೆ ಹೋದ ಜಾಗದಲ್ಲಿ ನಡೆದ ಬೇರೇನಾದರೂ ಕೃತ್ಯವೋ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

ವರದಿ : ಚನ್ನೇಶ್ MK ಬೆಂಗಳೂರು.