ಎಫ್ಐಡಿ ಕಡ್ಡಾಯ ವಿರುದ್ಧ ಪ್ರತಿಭಟನೆ…

ಎಫ್ಐಡಿ ಕಡ್ಡಾಯ ವಿರುದ್ಧ ಪ್ರತಿಭಟನೆ.


ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾವ್ ಪಟ್ಟಣದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದರು ಸರಕಾರ ರೈತರಿಗೆ ರಸಗೊಬ್ಬರ ವಿತರಣೆ ಮಾಡಲು ಜಾರಿಗೆ ತಂದಿರುವುದು ಮತ್ತು ಒಂದು ಎಕರೆಗೆ ಒಂದು ಚೀಲ ಗೊಬ್ಬರ ನೀಡುವ ಕೆಲಸಕ್ಕೆ ಕೈ ಹಾಕಿರುವುದು ಮತ್ತು ಗೊಬ್ಬರ ಖರೀದಿಗೆ ಲಿಂಕ್ ಗಳನ್ನು ಸೃಷ್ಟಿ ಮಾಡಿ ರೈತರಿಗೆ ಹೊರೆ ಹಾಕುತ್ತಿರುವ ಸರ್ಕಾರಗಳ ವಿರುದ್ಧ ಶಿಗ್ಗಾವ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಅಂಚೆ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿ ಗರುಡ ಹೋಟೆಲ್ ವರೆಗೂ ಹೋರಾಟ ಮಾಡಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕೃಷಿ ಜಂಟಿ ನಿರ್ದೇಶಕರ ಮುಖಾಂತರಮನವಿಯನ್ನು ಸಲ್ಲಿಸಲಾಯಿತು.

ರೈತರಿಗೆ ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು ಯಾವ ಬೆಳೆ ಬೆಳೆಯುಬೇಕು ಯಾವಾಗ ಬೆಳೆಯಬೇಕು ಎಂಬುದು ರೈತರಿಗೆ ಗೊತ್ತಿದೆ ಸರಕಾರ ಸರಿಯಾಗಿ ಗೊಬ್ಬರ ಪೂರೈಕೆ ಮಾಡುವುದು ಆಗದೇ ಇರುವ ಕಾರಣಕ್ಕೆ ಇಂಥ ಇಲ್ಲ ಸಲ್ಲದ ಆದೇಶವನ್ನು ಜಾರಿ ಮಾಡಿ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಹುನ್ನಾರ ಮಾಡುತ್ತಿದೆ ಆದಷ್ಟು ಬೇಗನೆ ಈ ಎಫ್ ಐಡಿಯನ್ನು ರದ್ದುಗೊಳಿಸಿ ಹಿಂದಿನಿಂದಲೂ ಹೇಗೆ ಗೊಬ್ಬರ ಸರಬರಾಜಾಗುತ್ತದೆಯೋ ಅದೇ ರೀತಿ ರಸಗೊಬ್ಬರವನ್ನು ಸರಬರಾಜು ಮಾಡಬೇಕೆಂದು ಮತ್ತು ಮುಂಗಾರು ಬಿತ್ತನೆ ಸಮಯ ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿದೆ ಉತ್ತಮ ತಳಿಯ ಬೀಜಗಳನ್ನು ರೈತರಿಗೆ ಪೂರೈಕೆ ಮಾಡಬೇಕು ಕಳಪೆ ಬೀಜ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿದರು ತಾಲೂಕಾಧ್ಯಕ್ಷರಾದ ಬಸಲಿಂಗಪ್ಪ ನರಗುಂದ ಈರಣ್ಣ ಸಮಗೊಂಡ್ರ ಶಿವಾನಂದಯ್ಯ ಜಡಿಮಠ ನಾಗರಾಜ್ ದೇಸಾಯಿ ಶಂಕರಗೌಡ ಪಾಟೀಲ್ ಮಂಜಣ್ಣ ಕಂಕಣವಾಡ ಲಕ್ಷ್ಮಣ ಹಂಚಿನಮನಿ ದೇವಣ್ಣ ಹಳವಳ್ಳಿ ಆರ್ ಎಸ್ ಗಾಳಿಗೌಡ್ರ್ ಗಿರೀಶ್ ಪಾಟೀಲ್ ಸಂತೋಷ್ ಪಾಟೀಲ್ ಶಂಭು ಕೇರಿ ಮಾಲ್ತೇಶ್ ಬಾರ್ಕಿ ಇನ್ನು ಅನೇಕ ರೈತರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು