ರೈತರ ಬೇಡಿಕೆ ಈಡೇರಿಕೆಗಾಗಿ KRS ಪಕ್ಷದಿಂದ ಒತ್ತಾಯ.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆಆರ್‌ಎಸ್ ಪಕ್ಷದಿಂದ ಜಿಲ್ಲಾಧಿಕಾರಿಗೆ ಒತ್ತಾಯ.

ವೀರಮಾರ್ಗ ನ್ಯೂಸ್ : ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಉಲ್ಬಣಗೊಂಡಿರುವ ವಿವಿಧ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಈ ಮನವಿ ಪತ್ರ ಸಲ್ಲಿಕೆಗೆ ರೈತ ಘಟಕದ ಅಧ್ಯಕ್ಷರಾದ ಜೋಗನಹಳ್ಳಿ ಗುರುಮೂರ್ತಿ ನೇತೃತ್ವ ವಹಿಸಿದ್ದರು.

ಮನವಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೋಗನಹಳ್ಳಿ ಗುರುಮೂರ್ತಿ ಅವರು ಬಳ್ಳಾರಿ ಕಸಬಾ ತಾಲೂಕಿನ ಹಲವು ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ,ವಿಶೇಷವಾಗಿ ಶಂಕರ ಬಂಡ ಗ್ರಾಮದಲ್ಲಿ ಜನರು ಶುದ್ಧ ಕುಡಿಯುವ ನೀರನ್ನು ಖಾಸಗಿಯವರಿಗೆ ಹಣ ನೀಡಿ ಪಡೆಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದು ಬೇಸಿಗೆ ಕಾಲದ ಹಿನ್ನೆಲೆಯಲ್ಲಿ ಇತರ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಹೆಚ್ಚುತ್ತಿರುವುದರಿಂದ ತಕ್ಷಣ ಪರಿಹಾರ ನೀಡಬೇಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ದುಸ್ಥಿತಿ ಕೂಡ ಜನರಿಗೆ ತೊಂದರೆಯಾಗುತ್ತಿದೆ ಕೆಲವು ಗ್ರಾಮಗಳಲ್ಲಿ ರಸ್ತೆಗಳನ್ನು ರಿಪೇರಿಗಾಗಿ ಕಿತ್ತುಹಾಕಿ ಹಾಗೆ ಬಿಟ್ಟಿರುವುದರಿಂದ ಗುಂಡಿಗಳು ಬಿದ್ದು ವಾಹನ ಸಂಚಾರ ಕಷ್ಟಕರವಾಗಿದೆ ತುರ್ತಾಗಿ ಜಲ್ಲಿ,ಮರಳು ಸುರಿದು ಸಮತಟ್ಟಗೊಳಿಸಿ ಸಂಚಾರಿಕ ಅನುಕೂಲ ಮಾಡಿಕೊಡಬೇಕು,ಕಕ್ಕಬೇವಿನ ಹಳ್ಳಿಯ ಸುತ್ತಮುತ್ತ ಕೊಳಚೆ ನೀರು ಹರಿಯುತ್ತಿರುವುದರಿಂದ ಪರಿಸರ ಮಾಲಿನ್ಯ ಗಂಭೀರವಾಗಿ ಹೆಚ್ಚಾಗಿದೆ. ನೋಣ,ಸೊಳ್ಳೆ,ಜಿರಳೆಗಳ ಕಾಟದಿಂದ ಜನರು ಅನಾರೋಗ್ಯದ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಬಳ್ಳಾರಿ ನಗರದ ಕೊಳಚೆ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಹೊರಬಿಡುವ ವ್ಯವಸ್ಥೆ ಮಾಡಬೇಕು, ಜೊತೆಗೆ ಲಿಂಗದೇವನಹಳ್ಳಿ,ಕುಂಟನಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.ರೂಪನ ಗುಡಿ ,ಅಸುಂಡಿ,ಹೊಸ ಮೋಖ ಪ್ರದೇಶಗಳಲ್ಲಿ ಜೋಳ ಖರೀದಿ ಕೇಂದ್ರಗಳ ವ್ಯವಸ್ಥೆಯನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ ರೈತರಿಗೆ ಕುಡಿಯುವ ನೀರು,ನೆರಳು, ವಿಶ್ರಾಂತಿ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ,ಅನಧಿಕೃತವಾಗಿ ರೈತರ ಬಳಿ ಅಲ್ಲಿನ ಸಿಬ್ಬಂದಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವು ಕೇಳಿ ಬಂದಿದ್ದು ಈ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಲಾಗಿದೆ.ರೈತರಿಂದ ಖರೀದಿಸಿದ ಜೋಳಕ್ಕೆ ಎರಡು ವಾರದೊಳಗೆ ಹಣ ಪಾವತಿಸಬೇಕು ಮತ್ತು ಪ್ರತಿದಿನ ಕನಿಷ್ಠ ನಾಲ್ಕರಿಂದ ಐದು ಲಾರಿಗಳಷ್ಟು ಜೋಳ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ದುಡಿದರೆ ಮಾನವ ಪಕ್ಷ ಹಸು 330ಕೋಟಿ ಜೀವರಾಶಿಗಳಿಗೂ ಕೂಡ ಅನ್ನ… ರೈತನಿಗೆ ಸರ್ಕಾರದಿಂದ ಸೌಲತ್ತುಗಳನ್ನು ಕೊಡಿ ರೈತನ ಬೆಳೆದ ಬೆಳೆಗೆ ಬೆಲೆ ಕೊಡಿ.

ಇದೇ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿಗಳಾದ ಜನಾರ್ಧನ್ ರೆಡ್ಡಿ,ನಾಗರೆಡ್ಡಿ, ನಿರುಪಾದಿ ಕೆ ಗೋಮರ್ಸಿ ಸೇರಿದಂತೆ ಪಕ್ಷದ ಮುಖಂಡರಾದ ಶ್ರೀನಿವಾಸ ರೆಡ್ಡಿ,ಕಟ್ಟೆ ಬಸಪ್ಪ, ತಿಪ್ಪೇಸ್ವಾಮಿ,ರವಿ ಗೋನಾಳ, ಪ್ರಶಾಂತ್ ರೆಡ್ಡಿ,ರೇಖಾ, ದಾದಪೀರ್,ರಾಜಣ್ಣ, ರಂಗೇಶ್,ಕೃಷ್ಣಮೂರ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.