ವದು ನೋಡಲು ಹೊರಟ ಕುಟುಂಬದವರು ಸಾವಿನ ಮನೆ ಸೇರಿದರು..

ಒಂದೇ ಕುಟುಂಬದಲ್ಲಿ ನಾಲ್ವರ ಸಾವು, ಕನ್ಯಾ ನೋಡಲು ಹೊರಟ ಕುಟುಂಬಕ್ಕೆ ಯಮನು ಕಾದು ಕುಳಿತಿದ್ದ…

ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾಣಾಪುರ ಗ್ರಾಮದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕ್ ಕಾರು ಹಾಗು ಬಸ್ ಗೆ ಬೆಳ್ಳುಳ್ಳಿ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾನಪುರದ ಬಳಿ ನಡೆದಿದೆ, ಸುಜಾತಾ ಒಳಗಡ್ಡಿ ಅತಿಥಿ ಶಿಕ್ಷಕಿ ಹಾಗೂ ಅವರ ತಂದೆ ನಾಗರಾಜ ತಾಯಿ ಬಸಮ್ಮ ಗಂಡ ಜಂಬುನಾಥ್ ಸಹೋದರ ಕೊಟ್ರೇಶ್, ಒಂದೇ ಕುಟುಂಬದವರು ನಾಲ್ಕು ಜನ ಸಾವಿಗೀಡಾಗಿದ್ದು ಊರಲ್ಲಿ ನೀರವ ಮೌನ ಶೋಕಾಚರಣೆ ಮಾಡುವ ಪರಿಸ್ಥಿತಿ ಉಂಟಾಗಿದೆ, ಈ ಒಂದು ಭೀಕರ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು ಸ್ಥಳದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸರಣಿ ಅಪಘಾತದ ಬಳಿಕ ಕಾರಿನ ಮೇಲೆ ಲಾರಿ ಪಲ್ಟಿಯಾಗಿದೆ. ಡಿಕ್ಕಿಯ ಹೊಡೆದ ಬಳಿಕ ಸುಮಾರು 100 ಮೀಟರ್ ವರೆಗೂ ಕಾರನ್ನು ಎಳೆದೋಯ್ದಿದೆ. ಲಾರಿ ಚಾಲಕನ ಅಜಾರುಕತೆಯಿಂದ ಈ ಒಂದು ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಘಟನೆಯಲ್ಲಿ 25ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿದ್ದು ತಕ್ಷಣ ಅವರನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.