ಭವಿಷ್ಯದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಲಹೆ ಭಜಂತ್ರಿ..

ಭವಿಷ್ಯದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸಂತೋಷ್ ಭಜಂತ್ರಿ ಸಲಹೆ

ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಶಿಕ್ಷಣ ತಜ್ಞರ ಪ್ರಕಾರ ಇಂದಿನ ವ್ಯವಹಾರ ಜಗತ್ತಿಗೆ ಹೊಂದಿಕೆಯಾಗಲು ಬಿಕಾಂ ಪದವಿ ಕೋರ್ಸ್ ಅತ್ಯುತ್ತಮ ಪದವಿಯಾಗಿದೆ ಎಂದು ಬಿ.ಎ. ಜೆ.ಎಸ್.ಎಸ್ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಂತೋಷ್ ಭಜಂತ್ರಿ ಹೇಳಿದ್ದಾರೆ.


ಬುಧವಾರ ಈ ಕುರಿತು ಬಿಕಾಂ ಪದವಿ ಹಿನ್ನೆಲೆ ಮತ್ತು ಅದರ ಆಳ, ಆಗಲ, ಸಮಗ್ರ ಔದ್ಯೋಗಿಕ ಬೆಳವಣಿಗೆ ಕುರಿತು ವಿಶ್ಲೇಷಿಸಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಈ ಕೋರ್ಸ್ ಮಾಡಿದವರು ಲೆಕ್ಕ ಪತ್ರ, ಹಣಕಾಸು ನಿರ್ವಹಣೆ, ಉಳಿತಾಯ ಹೂಡಿಕೆ ಮನೋಭಾವ ಬೆಳೆಸುವ ಏಕೈಕ ಮುಖ್ಯ ಧ್ಯೇಯ ಇದರಲ್ಲಿ ಅಡಗಿದೆ.


ಬಿಕಾಂ ಪದವಿ ಪಡೆದವರು ಉದ್ಯಮಶೀಲತೆ, ಸ್ಟಾರ್ಟಪ್, ಬ್ಯಾಂಕಿಂಗ್, ಶಿಕ್ಷಣ ಇಲಾಖೆ ಎಸ್. ಎ. ಎ ಡಿ, ಸರಕಾರಿ ಇಲಾಖೆಗಳಲ್ಲಿ ಲೇಖಪತ್ರಗಳ ನಿರ್ವಹಣೆ ಹುದ್ದೆ ಜೊತೆಗೆ ಹತ್ತು ಹಲವು ಅವಕಾಶಗಳನ್ನು ದೊರಕಿಸುವಲ್ಲಿ ಸಹಕಾರಿಯಾಗಿದೆ ಎಂದಿದ್ದಾರೆ. ಅಲ್ಲದೆ ಕಾನೂನು ಪದವಿ ( ಎಲ್. ಎಲ್.ಬಿ) ಅರ್ಹತೆ ಹೊಂದಲು ಅತ್ಯಂತ ಸೂಕ್ತವಾದ ಭದ್ರಬುನಾದಿ ಕೋರ್ಸ್ ಇದಾಗಿದೆ. ಬಿಕಾಂ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಕಂಪನಿಗಳು ಉಹಿಸುವ ಅಗಸ್ತ್ಯಗಳ ತಕ್ಕಂತೆ ಪಠ್ಯಕ್ರಮಗಳನ್ನೂ ಅಧ್ಯಯನ ಮಾಡುತ್ತಿರುವುದು ನವೀನತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ.
ಈ ಕೋರ್ಸ್ ಜೊತೆಗೆ ಸಿಎ, ಸಿ.ಎಂ.ಎ ತರಹದ ಅತ್ಯುತ್ತಮ ಕೋರ್ಸ್ ಗಳು ವೃತ್ತಿಪರ ಅಡಿಪಾಯವಾಗಿದೆ. ಇಂದಿನ ಸ್ಪರ್ಧಾತ್ಮಕ ಮತ್ತು ಪೈಪೋಟಿ ಜೀವನ ಬದುಕಿನಲ್ಲಿ ಬಿಕಾಂ ಪದವಿ ಪಡೆದ ಕೇವಲ 4 ಗಂಟೆಗಳ ಕಾಲ ಶ್ರಮಿಸಿ ಉತ್ತಮ ಲಾಭ ಪಡೆಯುವುದರ ಜೊತೆಗೆ ಇತರರಿಗೆ ಉದ್ಯೋಗ ನೀಡುವುದರ ಆದರ್ಶ ವ್ಯಕ್ತಿಯಾಗಲು ಸಾಧ್ಯವಿದೆ ಎಂದಿದ್ದಾರೆ.
ಬಿಕಾಂ ಪದವಿ ಪಡೆದವರು ಪೈಪೋಟಿ ಜಗತ್ತಿನಲ್ಲಿ ಸರಕಾರಿ ನೌಕರಿ ಪಡೆಯಬೇಕೆಂದು ಸ್ವಂತ ಸ್ಥಳ ಬಿಟ್ಟು ಪರಸ್ಥಳಕ್ಕೆ ಹೋಗಿ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ನಡೆಸುವವರಿಗೆ, ಮುಂಜಾನೆ ಏಳು ಗಂಟೆಯಿಂದ 10 ಗಂಟೆಯವರೆಗೆ ಅತೀ ಕಡಿಮೆ ದರದಲ್ಲಿ ಬೆಳಗಿನ ಉಪಹಾರ ನೀಡುವ ನನಗೂ ತನ್ನವರಿಗೂ ಹಾಗೂ ಪರರಿಗೂ ಸಹಾಯವಾಗಿರುವ ನೂರಾರು ವ್ಯಕ್ತಿಗಳನ್ನು ಇಂದು ದಿನ ನಿತ್ಯದ ಬದುಕಿನಲ್ಲಿ ಕಾಣುತ್ತಿರುವುದು ಸಾಮಾನ್ಯವಾಗಿದೆ ಬಿಕಾಂ ಪದವಿ ಹೊಂದಿದವರಿಗೆ ಸಾವಲಂಬನೆ ಜೀವನ ನಡೆಸಲು ಇದೊಂದು ಅತ್ಯುತ್ತಮ ಶಿಕ್ಷಣವಾಗಿದೆ ಎಂದು ಭವಿಷ್ಯದ ಅಧ್ಯಯನಕಾರರಿಗೆ ಸಂತೋಷ್ ಭಜಂತ್ರಿ ಅವರು ತಮ್ಮ ವೈಚಾರಿಕ, ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ಮೌಲಿಕ ಸಲಹೆ ನೀಡಿದ್ದಾರೆ.