ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಛಾಟನೆ…

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ ಟ್ರಸ್ಟಿಗಳಿಂದ ಮಹತ್ವದ ನಿರ್ಧಾರ,,,,!

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಹರಿಹರ ಪಂಚಮಸಾಲಿ ಪೀಠದಲ್ಲಿ ಭಾರಿ ಹೈಡ್ರಾಮ ನಡೆದಿದೆ ಲೆಕ್ಕ ಕೊಡಿ ಅಭಿಯಾನ ತೀವ್ರಗೊಂಡ ಬೆನ್ನಲ್ಲೇ ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಚಾಟನೆ ಮಾಡಲು ಟ್ರಸ್ಟಿಗಳು ಹಿಂದಿನ ಸಭೆಯಲ್ಲಿ ನಿರ್ಧರಿಸಿದ್ದಾರೆ.

ಲೆಕ್ಕ ಕೊಡಿ ಅಭಿಯಾನದ ತೀವ್ರಗೊಂಡ ಬೆನ್ನಲ್ಲೇ ಇಂದು ನಡೆಸಿದ ಸಭೆಯಲ್ಲಿ 15 ಟ್ರಸ್ಟಿಗಳು ಪೈಕಿ 13 (ಹದಿಮೂರು) ಮಂದಿ ಭಾಗವಹಿಸಿ ನಿರ್ಣಯ ಕೈಗೊಂಡಿದ್ದಾರೆ ಮಠದ ಟ್ರಸ್ಟಿಗಳ ನಿರ್ಣಯ ಕೈಗೊಂಡು ಸ್ವಾಮೀಜಿಯನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಟ್ರಸ್ಟಿ, ಬಸವರಾಜ್ ದಿಂಡೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸರ್ಕಾರದಿಂದ 2008ರಿಂದ ಬಂದ ಅನುದಾನ ಹಾಗೂ ಭಕ್ತರ ದೇಣಿಗೆ ಹಣವನ್ನು ಟ್ರಸ್ಟಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ. ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವು ಟ್ರಸ್ಟಿಗಳು ವಿರುದ್ಧ ಹಣ ದುರ್ಬಳಕೆ ಆರೋಪ ಹೊರಿಸಲಾಗಿದೆ. ಕೆಲ ಕಳೆದ ದಿನಗಳ ಹಿಂದೆ ನಡೆದ ಟ್ರಸ್ಟಿಗಳ ಸಭೆಯಲ್ಲಿ ಗಲಾಟೆಯಾಗಿ ಆಡಳಿತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ.

ಎಂದು ಆಡಳಿತ ಅಧಿಕಾರಿ ರಾಜಕುಮಾರ್ ಆರೋಪಿಸಿದ್ದರು. ಅಂದಿನಿಂದ ಲೆಕ್ಕ ಕೊಡಿ ಅಭಿಯಾನ ಆರಂಭಿಸಲಾಗಿತ್ತು. ಹರಿಹರ ಪಂಚಮಸಾಲಿ ಪೀಠದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಂದು ಜಮಾಯಿಸಿ ಆಕ್ರೋಶ

ವ್ಯಕ್ತಪಡಿಸಿದರು ಲಿಂಗಾಯಿತ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಸೃಷ್ಟಿಸಿತ್ತು, ಹೀಗಾಗಿ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಆಗ್ರಹಿಸಿದ್ದರು. ಇಂದು ಪಂಚಮಸಾಲಿ ಗುರುಪೀಠದಲ್ಲಿ ನಡೆದ ಟ್ರಸ್ಟಿಗಳ ಸಭೆಯಲ್ಲಿ ಭಕ್ತರು ಹಾಗೂ ಟ್ರಸ್ಟಿಗಳ ನಡುವೆ ವಾಗ್ವಾದ ನಡೆದಿತ್ತು ಈ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಮಠದ ಆವರಣ ಸುತ್ತ 163 ಕಲಂ ಅನ್ವಯ ತಶಿಲ್ದಾರ್ ಸಂತೋಷ್ ಕುಮಾರ್ ನಿಷೇಧ ಜಾರಿಗೊಳಿಸಿದ್ದರು. ಮಠದ ಗೇಟ್ ಬಳಿಯೇ ಪ್ರತಿಭಟನೆ ನಡೆಸಿದರು. ಈ ವೇಳೆ ನೂರಕ್ಕೂ ಹೆಚ್ಚು ಜನರನ್ನ ಪೊಲೀಸರು ವಶಕ್ಕೆ ಪಡೆದರು ಇದರ ಮಧ್ಯೆ ಸಭೆ ನಡೆಸಿದ ಟ್ರಸ್ಟಿಗಳು ಹುಚ್ಚಾಟಿಸಲು ನಿರ್ಧಾರ ತೆಗೆದುಕೊಂಡರು. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಮಶಾಲಿ ಗುರುಪೀಠದ ಟ್ರಸ್ಟಿ ಬಾವಿ ಬೆಟ್ಟಪ್ಪ ಮಾತನಾಡಿದ್ದು ಸ್ವಾಮೀಜಿಗಳನ್ನ ತೆಗೆದುಹಾಕಲು ಸರ್ವ ಟ್ರಸ್ಟಿಗಳು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಸ್ವಾಮೀಜಿಗಳಿಗೆ ಒಂದು ನಿರ್ಣಯಬನ್ನಿ ಎಂದು ಗಡುವು ನೀಡಿದ್ದೆವು. ಮಾರ್ಚ್ 24ಕ್ಕೆ ನಿರ್ಣಯಕ್ಕೆ ಗಡುವು ನೀಡಿದ್ದೆವು ಇದರ ಬಗ್ಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ, ಹುಚ್ಚಾಟನೆ ನಿರ್ಧರಿಸಲಾಯಿತು ನೀವು ಸ್ವಾಸಪೀಠದಲ್ಲಿ ಇರಬೇಕು ಇಲ್ಲ ಹರಿಹರ ಪಂಚಮಸಾಲಿ ಪೀಠದಲ್ಲಿ ಇರಬೇಕು ಎಂದು ಗಡುವು ನೀಡಲಾಗಿತ್ತು ಆದರೆ ಎರಡು ಕಡೆ ಒಮ್ಮತ ಇರುವುದರಿಂದ ತೆಗೆದು ಹಾಕಲಾಗಿದೆ ಸ್ವಾಮೀಜಿಗಳ ಗೌರವಯುತವಾಗಿ ಮಠವನ್ನು ಬಿಡಬೇಕು ಎಂದು ಮನವಿ ಮಾಡಲಾಗಿದೆ.