ಸಾಲದ ಜಗಳಕ್ಕೆ ಅವಳಿ ಮಕ್ಕಳ ಬಲಿ…

ಸಾಲದ ಜಗಳಕ್ಕೆ ಅವಳಿ ಮಕ್ಕಳ ಬ*ಲಿ – ಜಗಳ ಬಿಡಿಸಲು ಹೋಗಿ ಹೊಟ್ಟೆಯಲ್ಲಿದ್ದ ಮಕ್ಕಳನ್ನ ಕಳೆದು ಕೊಂಡ ಗರ್ಭಿಣಿ..!!

ಹಾವೇರಿ ಜಿಲ್ಲೆಯಲ್ಲಿ ಸಾಲ ವಸೂಲಿ ವಿಚಾರವಾಗಿ ನಡೆದ ಜಗಳವು ಭೀಕರ ತಿರುವು ಪಡೆದು ಗರ್ಭಿಣಿ ಮಹಿಳೆಯ ಅವಳಿ ಶಿಶುಗಳ ಸಾ*ವಿಗೆ ಕಾರಣವಾಗಿದೆ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ :ಸವಣೂರು ತಾಲ್ಲೂಕು : ಅಲ್ಲಿಪುರ ಗ್ರಾಮದಲ್ಲಿ ಮಾರ್ಚ್ 28ರಂದು ಈ ಘಟನೆ ಸಂಭವಿಸಿದೆ. ಪವಿತ್ರ ಮುತ್ತಪ್ಪ ಲಮಾಣಿ ಎಂಬ ಗರ್ಭಿಣಿ ಮಹಿಳೆ ಜಗಳವನ್ನು ಶಮನಗೊಳಿಸಲು ಮಧ್ಯಪ್ರವೇಶ ಮಾಡಿದ ವೇಳೆ, ಆರೋಪಿಗಳು ಆಕೆಯ ಹೊಟ್ಟೆಗೆ ಒ*ದ್ದಿದ್ದಾರೆ ಎನ್ನಲಾಗಿದೆ.

ಗ್ರಾಮದ ಸುರೇಶ್ ಹಾಲಪ್ಪ ಲಮಾಣಿ, ಪರಶುರಾಮ ಲಮಾಣಿ, ಮಹೇಶ್ ಲಮಾಣಿ ಹಾಗೂ ಸಕ್ಕುಬಾಯಿ ಅವರು ಪವಿತ್ರ ಅವರ ಪೋಷಕರಿಗೆ ನೀಡಿದ್ದ ಸುಮಾರು 30 ಸಾವಿರ ರೂಪಾಯಿ ಸಾಲವನ್ನು ವಾಪಸು ಕೇಳಲು ಬಂದಿದ್ದರು. ಈ ವೇಳೆ “ಸ್ವಲ್ಪ ಸಮಯ ಕೊಡಿ, ಮಗಳ ಸೀಮಂತದ ನಂತರ ಹಣ ಹಿಂತಿರುಗಿಸುತ್ತೇವೆ” ಎಂದು ಪವಿತ್ರ ಅವರ ತಾಯಿ ಹಾಲವ್ವ ಮನವಿ ಮಾಡಿಕೊಂಡಿದ್ದರು.

ಆದರೆ ಮಾತಿನ ಚಕಮಕಿಯೇ ಹಲ್ಲೆಗೆ ತಿರುಗಿದ್ದು, ಹಾಲವ್ವ ಮೇಲೆ ದಾಳಿ ನಡೆದಿದೆ. ಈ ವೇಳೆ ತಾಯಿಯನ್ನು ರಕ್ಷಿಸಲು ಮುಂದಾದ ಪವಿತ್ರ ಮೇಲೆ ಕ್ರೂರವಾಗಿ ಹ*ಲ್ಲೆ ನಡೆಸಿ, ಹೊಟ್ಟೆಗೆ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡ ಪವಿತ್ರ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಅವಧಿಪೂರ್ವದಲ್ಲಿ ಜನಿಸಿದ ಅವಳಿ ಶಿಶುಗಳು ಸಾ*ವನ್ನಪ್ಪಿವೆ. ಈ ಘಟನೆ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.