ಹಾವೇರಿ ಜಿಲ್ಲಾಡಳಿತ ಸಂಪೂರ್ಣ ವಿಫಲ.

ಹಾವೇರಿ ಜಿಲ್ಲಾಡಳಿತ ಸಂಪೂರ್ಣ ವಿಫಲ. ಅಪರಾಧ ವೈಭವ. ನಿರ್ಲಕ್ಷಿತ ನಿರ್ಬಂಧಿತ ನಿಷೇಧಿತ ಪ್ರದೇಶ ಹರೋಹರ.!?

ಹಾವೇರಿ ಜಿಲ್ಲೆಯ : ರಾಣೆಬೆನ್ನೂರು ತಾಲೂಕಿನ : ಚೌಡದಾನಪುರ ಗ್ರಾಮ ರಾಷ್ಟ್ರೀಯ ಸ್ಮಾರಕದ ನಿಯಂತ್ರಣ ಪ್ರದೇಶದಲ್ಲಿದೆ. ಯಾವುದೇ ನಿರ್ಮಾಣ ಕಾರ್ಯಗಳು ತಾತ್ಕಾಲಿಕವಾಗಿರಲಿ ಅಥವಾ ಶಾಶ್ವತವಾಗಿರಲಿ ರಾಷ್ಟ್ರೀಯ ಪುರಾತತ್ವ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ಪ್ರೋಟೆಕ್ಟೆಡ್ ಏರಿಯಾ ಅಂದರೆ ನಿರ್ಭಂಧಿತ ಪ್ರದೇಶ. ಧಾರ್ಮಿಕ ಚಟುವಟಿಕೆಯ ನೆಪದಲ್ಲಿ ಮೂರು ಅಡಿಯಷ್ಟು ಭೂಮಿ ಅಗೆದು ಅಗ್ನಿಕುಂಡವನ್ನು ತಯಾರಿಸಿದ್ದಾರೆ ಅದರ ವಿವಿಧ ದೃಶ್ಯಗಳು ಇಲ್ಲಿವೆ.
ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿತ ಪ್ರದೇಶದಲ್ಲಿ ಮಾಡಬಹುದು ಆದರೆ ಆಳವಾದ ಭೂಮಿಯನ್ನು ಅಗೆಯುವುದು ಸೇರಿದಂತೆ ಬಣ್ಣವನ್ನು ಚೆಲ್ಲಾಡುವುದು ದೇವಸ್ಥಾನದ ಕಟ್ಟಡಕ್ಕೆ ಅಪಾಯಕಾರಿ ಚಟುವಟಿಕೆ ಆಗುತ್ತದೆ. ಆದ್ದರಿಂದ ಒಂದು ರಾಷ್ಟ್ರೀಯ ಪುರಾತತ್ವ ಸ್ಮಾರಕವನ್ನು ಉಳಿಸಿ ಇಲ್ಲ ಅಂದ್ರೆ ನಿರ್ಬಂಧಿತ ಪ್ರದೇಶ ನಿಷೇಧಿತ ಪ್ರದೇಶ ನಿಯಂತ್ರಿತ ಪ್ರದೇಶ ರದ್ದು ಮಾಡಿ ಸಾರ್ವಜನಿಕರ ಬೇಕಾಬಿಟ್ಟಿ ಚಟುವಟಿಕೆ ನಡೆಸಲು ತಾಲೂಕು ಆಡಳಿತ ಜಿಲ್ಲಾ ಆಡಳಿತ ರಾಜ್ಯ ಆಡಳಿತ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರೆ ಕೇಂದ್ರ ಸರ್ಕಾರದ ರಕ್ಷಣೆಯ ವೆಚ್ಚವಾದರೂ ಉಳಿಯುತ್ತದೆ ರಾಜ್ಯ ಜಿಲ್ಲೆ ಮತ್ತು ತಾಲೂಕು ಆಡಳಿತಗಳಿಗೆ ರಕ್ಷಣೆಯ ಹೊಣೆಗಾರಿಕೆ ತಪ್ಪುತ್ತದೆ. ಹೊಣೆಗಾರಿಕೆ ಇಲ್ಲದ ಬೇಜವಾಬ್ದಾರಿ ನಾಗರೀಕರ ರಾಜಕೀಯ ಪಕ್ಷಗಳ ಗುಂಪುಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಮಾಡಬಾರದ ಕುಕೃತ್ಯಗಳನ್ನು ಮಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಆರಾಮಾಗಿ ತಾವು ಇರುವ ಜಾಗದಲ್ಲಿ ಸುಖವಾಗಿ ಇರುವ ಆಡಳಿತದ ಅಧಿಕಾರಿಗಳು ತಮ್ಮ ಸುಖಕ್ಕೆ ಅಡ್ಡಿಯಾಗುವ ಇಂತಹ ರಾಷ್ಟ್ರೀಯ ಸ್ಮಾರಕಗಳ ಕಾನೂನಾತ್ಮಕ ತೊಡಕುಗಳನ್ನು ನಿವಾಳಿಸಿ ಒಗೆದುಬಿಟ್ಟರೆ ಕುರ್ಚಿಯಲ್ಲಿ ಕುಳಿತು ಆರಾಮಾಗಿ ಆಡಳಿತ ಮಾಡಿಕೊಂಡು ಹೋಗಬಹುದು.

ರಾಷ್ಟ್ರೀಯ ಸ್ಮಾರಕ ಕೆಡವಿ ಬಿಡಿ ಅಪರಾಧವನ್ನು ಕಾನೂನು ಬದ್ಧ ಮಾಡಿ ಅಪರಾಧಿಗಳ ಅಟ್ಟಹಾಸಕ್ಕೆ ಗ್ರೀನ್ ಸಿಗ್ನಲ್ ಕೊಡಿ. ಯಾರಿಗೆ ಬೇಕಾಗಿದೆ ಚರಿತ್ರೆ ಇತಿಹಾಸ. ಈಗ ನಾವು ಮಾಡುವುದೇ ಕ್ರಿಮಿನಲ್ ಅಪರಾಧವೇ ಚಾರಿತ್ರಿಕ ಇತಿಹಾಸಾಗಬೇಕು ಕೆಡವಿ ಬಿಡಿ ಕೆಡವಿ ಬಿಡಿ ಮುಕೇಶ್ವರ ದೇವಾಲಯ ಕೆಡವಿ ಬಿಡಿ.

ಹಣ ಹೆಂಡ ಸೀರೆ ತಟ್ಟೆ ಲೋಟ ಹಂಚುವ ಏಜೆಂಟರುಗಳು ನಾಗರೀಕರಿಂದಲೇ ಬೇಕಾಬಿಟ್ಟಿ ಹಣವನ್ನು ಸಂಗ್ರಹಿಸುವುದು ಮನೆ ಮನೆತನ ತಮ್ಮನ್ನು ನಡೆಸಿಕೊಳ್ಳುವುದಕ್ಕಾಗಿ ದೇವರನ್ನು ಬಿಸಿನೆಸ್ ಮಾಡಿಕೊಂಡು ವಿದ್ಯುತ್ ಕಳ್ಳತನ ಸೇರಿದಂತೆ ದೇವರ ಗುಂಡಿಗಳನ್ನೇ ರಾತ್ರೊರಾತ್ರೀ ಖಾಲಿ ಮಾಡಿದ ಪ್ರಕರಣಗಳು ಬೇಕಾದಷ್ಟು ಘಟನೆಗಳು ನಡೆದಿವೆ. ಬಡವರನ್ನು ಸುಲಿಗೆ ಮಾಡುವ ಮಾಧ್ಯಮ ವರ್ಗದವರ ಮನೆ ಮನೆತನಗಳಿಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುವವರನ್ನು ದೇವರು ರಕ್ಷಿಸುತ್ತಾನೆಯೇ? ಇಂತಹವರಿಗೆ ರಕ್ಷಿಸುವ ದೇವರ ಆದಂತಹ ದೇವರು. ಇಂಥವರ ಹೆಡೆಮುರಿ ಕಟ್ಟದಿದ್ದರೆ ರಾಜ್ಯ ದೇಶ ಗ್ರಾಮ ಊರುಗಳು ತಾಲೂಕು ಜಿಲ್ಲೆ ಹಾಳಾಗಿ ಹೋಗುತ್ತವೆ ಗುಂಪು ಕಟ್ಟಿಕೊಂಡು ಗುಂಡಾಗಿರಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗದಷ್ಟು ಅಧಿಕಾರಿಗಳು ಕುಳಿತಿದ್ದಾರೆ ಎಂದರೆ ಇದಕ್ಕೆ ಯಾರಾದರೂ ಪ್ರಜಾಪ್ರಭುತ್ವದ ಆಡಳಿತ ಎನ್ನುತ್ತಾರೆಯೇ?

ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ಕಾಲೇಜಾಯ್ತು ರಣರಂಗ!

ವಿದ್ಯಾರ್ಥಿನಿಗೆ ಪ್ರಾಧ್ಯಾಪಕ ಅಬ್ದುಲ್ ಮಾಡಿದ ಲವ್ ಪ್ರಪೋಸ್‌ ನಿಂದ ಕೆರಳಿದ ಯುವತಿಯಿಂದ ಅಬ್ದುಲ್ಲನ ಕೆನ್ನೆಗೆ ಚಪ್ಪಲಿ ಸೇವೆ.

ಈ ಘಟನೆಯ ವಿರುದ್ಧ ಸ್ಟೂಡೆಂಟ್ಸ್ ಎಲ್ಲರೂ ಪ್ರತಿಭಟನೆ ಮಾಡಿ ರಣರಂಗವಾದ ಕಾಲೇಜ್ ಕ್ಯಾಂಪಸ್