ಮಗಳವಯಸ್ಸಿನ ಅಪ್ರಾಪ್ತ ಬಾಲಕಿಗೆ ಮಗು ಕರುಣಿಸಿದ ಸುರೇಶ್ ಕಾಕಾ….

ಮಗಳವಯಸ್ಸಿನಅಪ್ರಾಪ್ತ_ಬಾಲಕಿಗೆ ಮಗು ಕರುಣಿಸಿದ ಸುರೇಶ್ ಕಾಕಾ….

ಅಂಕಲ್ ; ಆಯಂಬುಲೆನ್ಸ್‌ನಲ್ಲೇ ಹೆಣ್ಣುಮಗು ಜನನ…

ವೀರಮಾರ್ಗ ನ್ಯೂಸ್ : ಚಾಮರಾಜನಗರ ಜಿಲ್ಲಾ : ಗುಂಡ್ಲುಪೇಟೆ ತಾಲೂಕಿನ : ಗ್ರಾಮ ಒಂದರಲ್ಲಿ..ಮಾನವೀಯತೆ ಮರೆತ ಘಟನೆಯೊಂದು ಬೆಳಕಿಗೆ ಬಂದಿದೆ.
ಗ್ರಾಮದ 17 ವರ್ಷದ ಬಾಲಕಿಗೆ ಮೂರು ದಿನಗಳ ಹಿಂದೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಾಲಕಿ ಮತ್ತು ಆಕೆಯ ಪೋಷಕರು ಇದು ಸಾಮಾನ್ಯ ಹೊಟ್ಟೆನೋವು ಎಂದು ಭಾವಿಸಿ ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಗರ್ಭಿಣಿ ಇರುವುದನ್ನು ಪತ್ತೆಹಚ್ಚಿ, ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ವೈದ್ಯರ ಸಲಹೆಯಂತೆ ಬಾಲಕಿಯನ್ನು ಆಯಂಬುಲೆನ್ಸ್‌ನಲ್ಲಿ ಚಾಮರಾಜನಗರಕ್ಕೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡು, ಆಯಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ತಾಯಿ ಮತ್ತು ಮಗು ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಬಂಧಿಕನಿಂದ ನಂಬಿಕೆ ದ್ರೋಹ :

ಈ ಆಘಾತಕಾರಿ ಘಟನೆಯ ನಂತರ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಎದುರಾದಾಗ, ಬಾಲಕಿ ತನ್ನ ತಂದೆಯ ಮುಂದೆ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ತನ್ನದೇ ಗ್ರಾಮದ ನಿವಾಸಿಯಾಗಿದ್ದು, ಸಂಬಂಧಿಯೂ ಆಗಿರುವ 46 ವರ್ಷದ ಸುರೇಶ್ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣ ಎಂದು ನಿವೇದಿಸಿಕೊಂಡಿದ್ದಾಳೆ. 17 ವರ್ಷದ ಬಾಲಕಿಯ ಮೇಲೆ ತನ್ನ ಅರ್ಧ ವಯಸ್ಸಿನ ಮಗಳ ಪ್ರಾಯದವಳು ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಸುರೇಶ್ ಎಸಗಿರುವ ಈ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪೋಕ್ಸೋ ಅಡಿ ಪ್ರಕರಣ ದಾಖಲು :

ಬಾಲಕಿಯ ಹೇಳಿಕೆಯನ್ನಾಧರಿಸಿ ಆಕೆಯ ತಂದೆ ಕೂಡಲೇ ಬೇಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಸುರೇಶ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತ ಬಾಲಕಿಯ ಗರ್ಭಧಾರಣೆಯ ವಿಷಯ ಪೋಷಕರಿಗೆ ಇಷ್ಟು ದಿನ ತಿಳಿಯದೆ ಹೋಗಿದ್ದು ಹೇಗೆ ಮತ್ತು ಆರೋಪಿ ಸುರೇಶ್ ಬಾಲಕಿಯ ಮೇಲೆ ಯಾವ ರೀತಿ ಒತ್ತಡ ಹೇರಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

POCSO ಫೋಕ್ಸೋಕಾಯ್ದೆ ಅಡಿ ಕೇಸು ದಾಖಲಾಗಿದೆ ತನಿಖೆ ಮುಂದುವರೆದಿದೆ.

ಆ ಹೆಣ್ಣುಮಗುಗೇ ನ್ಯಾಯ ಸಿಗಲಿ ಎನ್ನುವುದೇ ಸಾರ್ವಜನಿಕರ ಆಸೆ.