ಖಾಸಗಿ ಜೆಟ್ ವಿಮಾನ ಪತನವಾಗಿ
ಇಬ್ಬರಿಗೆ ಗಂಭೀರ ಗಾಯ, ಪ್ರಾಣ ಹಾನಿ ಇಲ್ಲಾ.
ವೀರಮಾರ್ಗ ನ್ಯೂಸ್ : ಕೊಲ್ಹಾರ : ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಗ್ರಾಮದಲ್ಲಿ ವಿಮಾನ ಪತನ ವಿಮಾನದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಖಾಸಗಿ ಜೆಟ್ ವಿಮಾನವೊಂದು ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದಾಗ ಇಂಧನ ಖಾಲಿಯಾದರಿಂದ ವಿಮಾನ ಭಾನುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಪತನವಾಗಿದೆ.
ರೆಡ್ ಬರ್ಡ್ ಕಂಪನಿಯ ಖಾಸಗಿ ಕಂಪನಿಯ ವಿಮಾನ ಪತನಗೊಂಡು ಕೊಲ್ಹಾರ ಸಮೀಪದ ಮಂಗಳೂರು ಗ್ರಾಮದಲ್ಲಿ ರೈತ ಶಿವನಗೌಡ ಬಿರಾದಾರ ಅವರ ಜಮೀನಿನಲ್ಲಿ ವಿಮಾನ ಪತನಗೊಂಡಿದೆ. ಕ್ಯಾಪ್ಟನ್ ಕುನಾಲ್ ಮಲ್ಲೋತ್ರಾ ಮತ್ತು ತರಬೇತಿ ನಿರತ ಪೈಲಟ್ ಗೌತಮ್ ಶಂಕರ್ ಪಿ.ಆರ್. ವಿಮಾನದಿಂದ ಜಿಗಿದು ಪಾರಾಗಿದ್ದು,
ಅಪಘಾತದ ವೇಳೆ ಜೆಟ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು 108 ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಬಲೇಶ್ವರ ಪಿಎಸ್‌ಐ ಬಸನಗೌಡ ಮೇಳಪ್ಪನವರ ಮಾಹಿತಿ ತಿಳಿಸಿದ್ದಾರೆ.