ಹೆತ್ತಮಗ ಯಮನಾಗುತ್ತಾನೆ ಎಂದು ಕನಸಿನಲ್ಲಿ ಕಂಡಿಲ್ಲ ಆ ಹಿರಿಜೀವಗಳು…!
ಒಡಹುಟ್ಟಿದವನೇ ಸ್ಮಶಾನಕ್ಕೆ ಕಳಿಸುವ ವ್ಯವಸ್ಥೆ ಮಾಡುತ್ತಾನೆ ಎಂದು ನಂಬಿರಲಿಲ್ಲ ಆ ಮುದ್ದು ತಂಗಿ…!
ಸಮಾಜದಲ್ಲಿ ಯಾರನ್ನ ನಂಬಿ ಜೀವನ ನಡೆಸಬೇಕು ಮನೆ ಒಳಗೆ ಬಿಟ್ಟಕೊಳ್ಳಬೇಕು…!
ಕ್ರೂರಿಯಾ ಮನಸ್ಥಿತಿ ಬದಲಾಗದೆ ನಿಂತಿದೆಯಾ,,,?
ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲಾ : ಕೊಟ್ಟೂರು : ಪಟ್ಟಣದ ಹರಪನಹಳ್ಳಿ ರಸ್ತೆಯ ವೇ ಬ್ರಿಡ್ಜ್ ಹತ್ತಿರದ ಮನೆಯಲ್ಲಿ ವಾಸವಿದ್ದ ಹೆತ್ತ ತಂದೆ ತಾಯಿ,ತನ್ನ ಬೆನ್ನ ಹಿಂದೆ ಹುಟ್ಟಿದ ತಂಗಿ ಮತ್ತು ಆರೋಪಿ ಅಕ್ಷಯ್ ವಾಸವಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆಯ ಜಗಳೂರು ಪಟ್ಟಣವಾಸಿಗಳಾಗಿದ್ದು, ಕೊಟ್ಟೂರಿಗೆ ವಲಸೆ ಬಂದಿದ್ದರು.
ಇತ್ತೀಚೆಗೆ ತನ್ನ ತಂದೆ ಸುಮಾರು ಒಂದೂವರೆ ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದ್ದಕ್ಕೆ ರಕ್ಷಿಸ ವರ್ತನೆಯಿಂದ ಹೆತ್ತಮಗನೇ ತಂದೆ, ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿ, ಬೆಂಗಳೂರಿಗೆ ಹೋಗಿ ಬೆಂಗಳೂರಿನ ತಿಲಕ್ ನಗರ ಠಾಣೆಗೆ ಹೋಗಿ ತನ್ನ ತಂದೆ, ತಾಯಿ ಮತ್ತು ತಂಗಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ.
ಅಕ್ಷಯ್ ಹೆತ್ತ ತಂದೆ-ತಾಯಿ ಎಂಥ ಮಗನಿಗೆ ಜೀವಕೊಟ್ರಿ, ನಿಮ್ಮ ಜೀವನೇ ಹೋಯಿತು…
ಅಕ್ಷಯ್ನ ವರ್ತನೆ ಅಲ್ಲಿನ ಪೊಲೀಸರಿಗೆ ಅನುಮಾನ ಬಂದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಕ್ಷಯ್ ತನ್ನ ಕ್ರೌರ್ಯವನ್ನು ಪೊಲೀಸರಿಗೆ ತಾನು ಮಾಡಿರುವ ಕೊಲೆಗಳನ್ನು ಒಪ್ಪಿಕೊಂಡಿದ್ದಾನೆ.
ತನ್ನ ಒಡಹುಟ್ಟಿದ ತಂಗಿ,,,,!
ಅಲ್ಲದೇ ತಾನು ಕೊಲೆ ಮಾಡಿದ ಮೃತದೇಹಗಳನ್ನು ಎಲ್ಲಿ ಹೂತು ಹಾಕಿದ್ದಾನೆ ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಒಮ್ಮೆ ಮನೆಯಲ್ಲಿಯೇ ಹೂತುಹಾಕಿದ್ದೇನೆ ಎಂದು, ಇನ್ನೊಂದು ಬಾರಿ ಸಂಡೂರಿನಲ್ಲಿ ಹೂತುಹಾಕಿದ್ದೇನೆ ಎಂಬ ಅಸ್ಪಷ್ಟ ಮಾಹಿತಿ ನೀಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ತಾವಿದ್ದ ಮನೆಯಲ್ಲಿ ಕುಣಿಗಳನ್ನು ತೆಗೆದಿದ್ದು ಮನೆಯಲ್ಲಿ ರಕ್ತದ ಕಲೆಗಳು ಇರುವುದರಿಂದ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಅವರು ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದರು.
SP ಮೇಡಂ ಮನೆ ಪರಿಶೀಲನೆ ಮಾಡುತ್ತಿರುವ ದೃಶ್ಯ…
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ದುರುಗಪ್ಪ, ಪಿಎಸ್ಐ ಗೀತಾಂಜಲಿ ಶಿಂಧೆ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಕ್ಷಯ್ ಹಣದ ಆಮಿಷಕ್ಕೆ ಒಳಗಾಗಿ ಹೆತ್ತ ತಂದೆ ತಾಯಿ, ಒಡಹುಟ್ಟಿದ ತಂಗಿಯನ್ನೇ ಕೊಲ್ಲುತ್ತಾನೆಂದರೆ ಈತನ ದುರ್ವರ್ತನೆ ಕೊಟ್ಟೂರಿನ ಸಾರ್ವಜನಿಕರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ. ಪೊಲೀಸರು ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿದ ನಂತರವಷ್ಟೇ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲಿದೆ. ಇತ್ತೀಚಿನ ದಿನಗಳಲ್ಲಿ ಮಾನವೀಯತೆಯೇ ಸತ್ತುಹೋಗಿ ಬರೀ ಹಣ, ಆಸ್ತಿಯ ಅಮಲಿಗೆ ಇಂತಹ ಕೃತ್ಯಗಳು ನಡೆಯುತ್ತಿರುವುದು ಮಾನಹೊತ್ತು ಸಮಾಜದಲ್ಲಿ ಬದುಕುವರ ತಲೆತಗ್ಗಿಸುವಂತಾಗಿದೆ.
ಇದು ಕೊಟ್ಟೂರುನಲ್ಲಿ ಇರುವ ಮನೆ,,,ಅದು ಮನಸ್ಸಾಕ್ಷಿ ಇಟ್ಟು ಕೊಂಡು ಹೇಗೆ ಬದುಕುತ್ತಾನೋ,,,,!? ಇಷ್ಟೆಲ್ಲ ಕರ್ಮ ಮಾಡಿ,,,!? ಹೆತ್ತತಂದೆತಾಯಿಗಳೇ ದೇವರು ಎನ್ನುವ ಯುಗದಲ್ಲಿ ರಾಕ್ಷಸನಾಗಿ ವರ್ತನೆ ಮಾಡಿರುವುದು ಯಾರನ್ನು ಮೆಚ್ಚಿಸುವುದಕೋಸ್ಕರ ಎಂಬುವ ಸತ್ಯಸತ್ಯತೆಗಳು ತನಿಕೆಯಲ್ಲೇ ಹೊರಬರಬೇಕು ಎನ್ನುತ್ತಿದ್ದರೆ ಸಾರ್ವಜನಿಕರು.