ಪ್ರಕೃತಿಯ ಮಡಿಲಿನಲ್ಲಿ ಪುರ ಗ್ರಾಮದ ಮಲೆಮಹದೇಶ್ವರ.

ವೀರಮಾರ್ಗ ನ್ಯೂಸ್ :K R PETE ಪುರ ಗ್ರಾಮದ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರದ ಅಭಿವೃದ್ಧಿಗೆ ಮನವಿ ಮಾಡಿದ ಕ್ಷೇತ್ರದ ಪ್ರಧಾನ ಅರ್ಚಕರಾದ ಬಸಪ್ಪ ಗುರುಗಳು

ಪ್ರಕೃತಿಯ ಮಡಿಲಿನಲ್ಲಿರುವ ಪುರ ಗ್ರಾಮದ ಹೊರವಲಯ ದಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಸಮಗ್ರವಾದ ಅಭಿವೃದ್ಧಿಗೆ ಸರ್ಕಾರ ಹಾಗೂ ಭಕ್ತರು ಸಂಪೂರ್ಣ ಸಹಕಾರ ನೀಡಬೇಕು ಎಂದು ದೇವಾಲಯದ ಪ್ರಧಾನ ಅರ್ಚಕರಾದ ಬಸಪ್ಪ ಗುರುಗಳು ಮನವಿ ಮಾಡಿದರು.

ಅವರು ಇಂದು ಕೃಷ್ಣರಾಜಪೇಟೆ ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಬೇಡಿ ಬಂದ ಭಕ್ತರ ಹರಕೆಗಳು ಹಾಗೂ ಅಭಿಷ್ಟಗಳನ್ನು ಈಡೇರಿಸಿ ಆಶೀರ್ವದಿಸುತ್ತಿರುವ ಮಲೆ ಮಹದೇಶ್ವರ ಸ್ವಾಮೀಯವರ ಬೆಟ್ಟ ಕ್ಷೇತ್ರವು ನಾಡಿನ ಎರಡನೇ ಮಹದೇಶ್ವರ ಬೆಟ್ಟದಂತೆ ದಿನದಿಂದ ದಿನಕ್ಕೆ ಅಭಿವೃದ್ದಿಯ ಪತದತ್ತ ಸಾಗುತ್ತಿದೆ. ಸುಕ್ಷೇತ್ರಕ್ಕೆ ಅಮಾವಾಸ್ಯೆ ಮತ್ತು ಹುಣ್ಣಿಮೆ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಿದ್ದಾರೆ. ಸುಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿದಿನವೂ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಕೃತಿಯ ರಮ್ಯ ರಮಣೀಯ ಪ್ರದೇಶದಲ್ಲಿರುವ ಸುಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸಲು ಅನುಕೂಲವಾಗುವಂತೆ ಸುಸಜ್ಜಿತವಾದ ರಸ್ತೆ, ಕಲ್ಯಾಣಿ, ವಿಶ್ರಾಂತಿ ಗೃಹ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಭಕ್ತಾದಿಗಳು ಮುಂದಾಗಬೇಕು ಎಂದು ಮನವಿ ಮಾಡಿದ ಬಸಪ್ಪ ಗುರುಗಳು ಕೊಳ್ಳೇಗಾಲದ ಹನ್ನೂರಿನಲ್ಲಿರುವ ಮಲೈ ಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳು ಪ್ರಯಾಣ ಬೆಳೆಸಲು ಪಕ್ಷದಲ್ಲಿ ನಮ್ಮ ತಾಲೂಕಿನಲ್ಲಿಯೇ ಇರುವ ಎರಡನೇ ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳು ಭಗವಂತನ ದರ್ಶನ ಪಡೆದು ಪುನೀತರಾಗಬಹುದಾಗಿದೆ ಎಂದು ಬಸಪ್ಪ ಗುರುಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಒಳ್ಳೆಯ ನರಸೀಪುರ ತಾಲೂಕಿನ ಹಳ್ಳಿ ಮೈಸೂರಿನಿಂದ ಆಗಮಿಸಿದ್ದ ಯುವ ಪ್ರೇಮಿಗಳು ಮಲೆ ಮಹದೇಶ್ವರ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ನಾಡಿಗೆ ಹೊಸ ಸಂದೇಶ ನೀಡಿದರು.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ಮಂಡ್ಯ