ವೀರಮಾರ್ಗ ನ್ಯೂಸ್ : ತುಮಕೂರು : ಯಮ ರಸ್ತೆಯಲ್ಲಿ ಕಾದು ಕೂತಿದ್ದ ಇಂಜಿನಿಯರಿಗಾಗಿ,,,
ಸಂಭ್ರಮ ಮೂರು ದಿನ… 4ನೇ ದಿನ ಯಮನ ಜೊತೆ ಪ್ರಯಾಣ!
ವಿಧಿಯ ಮುಂದೆ ಮಾನವ ಏನೂ ಇಲ್ಲ ಬಿಡಿ.. ಕರೆದಾಗ ಹೋಗಲು ರೆಡಿ ಇರಬೇಕು ಅಷ್ಟೇ. 42 ವರ್ಷದ ಅನಿಕೇತ್, 44 ವರ್ಷದ ಅಭೀರ್ ಹಾಗೂ ಆಂಧ್ರ ಮೂಲದ 35 ವರ್ಷದ ಸನ್ಮೋಕ್ತಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳು.
ಬೆಂಗಳೂರಿನಲ್ಲಿ(software,engineer) ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗೋಕರ್ಣ, ಮುರುಡೇಶ್ವರ, ಉಡುಪಿ ಕಡೆಗೆ ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದರು. ನಿತ್ಯ ಕೆಲಸದ ಒತ್ತಡದಲ್ಲಿದ್ದವರು ಸ್ನೇಹಿತರೆಲ್ಲರೂ ಕುಣಿದು ಕುಪ್ಪಳಿಸಿದ್ರು, ಆಡಿ ನಲಿದಿದ್ರು. ಆದ್ರೆ ಇದೇ ನಮ್ಮ ಅಂತಿಮ ಸಂಭ್ರಮ ಅಂತ ಅವರಿಗೆ ಗೊತ್ತೇ ಇರಲಿಲ್ಲ ಅನ್ಸುತ್ತೆ.
ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ತೆರಳುವಾಗ ತುಮಕೂರಿನ ನೆಲಹಾಳ್ ಬಳಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಮಾರುತಿ ಎರಿಟಿಗಾ ಕಾರು ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಲ್ಲಿ ಚಾಲಕ ಸೇರಿ 6 ಜನರಿದ್ದರು. ಅದ್ರಲ್ಲಿ ಚಾಲಕನ ಸ್ಥಿತಿ ಗಂಭೀರವಾಗಿದೆ.
ಎಲ್ಲಾ ಆ ವಿಧಿಯ ಲೀಲೆ.. ಯಾವುದೂ ನಮ್ಮ ಕೈಯಲ್ಲಿ ಇರಲ್ಲ…
ವರದಿ : ಚನ್ನೇಶ ಬೆಂಗಳೂರು.