ಹೆಸರಾಂತ ಡ್ಯಾನ್ಸರ್ ಗೆ ಅಪಘಾತ ಸ್ಥಳದಲ್ಲೇ ಪ್ರಾಣ ಬಿಟ್ಟ ಯುವಕ.

ಹೆಸರಾಂತ ಡ್ಯಾನ್ಸರ್ ಗೆ ಅಪಘಾತ ಸ್ಥಳದಲ್ಲೇ ಪ್ರಾಣ ಬಿಟ್ಟ ಯುವಕ…

ಹಿರಿಯರು ನೂರೊಂದು ಮಾತುಗಳನ್ನ ಹೇಳ್ತಿದ್ರು.

ನಕ್ಷತ್ರ ವಾರ ಇದರ ಜೊತೆ ಸಮಯ ಯಾವ ಕಾಲ ಗಳಿಗೆ ಇದಿಯಲ್ಲವೂ ಹಿಂದೂ ಧರ್ಮದಲ್ಲಿ ಬೆಳೆದ ಬಂದ ಬದುಕು.

ಹೋದ ಪ್ರಾಣ ಮತ್ತೆ ಮರುಕಸಲೂ ಸಾಧ್ಯವಿಲ್ಲ…

ಜೀವಂತ ಇದ್ದಾಗಲೇ ಹಿರಿಯರ ಮಾತಿನ ಜೊತೆ ಸಮಸ್ಯೆಗಳನ್ನು ಕೇಳಿಕೊಂಡು ಸರಿದು ನಡೆಯುವ ದಾರಿ ಸಾಕಷ್ಟು ಉಂಟು…

ಹಿರಿಯರ ಮಾತನ್ನ ಕೇಳಿ ಗುರುಗಳ ಮಾತನ್ನ ಪಾಲಿಸಿ ಗುರು ಅನ್ನುವ ಪದ ಸಮುದ್ರದಷ್ಟು ಶಕ್ತಿ….

ವಿಧಿಯಾಟ ಅಂದರೆ ಇದೇನಾ…?

ವೀರಮಾರ್ಗ ನ್ಯೂಸ್ : ಬೆಂಗಳೂರು : ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ಡ್ಯಾನ್ಸರ್ ಸುಧೀಂದ್ರ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ನಡೆದಿದೆ.

ನಿನ್ನೆಯಷ್ಟೇ ಮಾರುತಿ ಸುಜುಕಿ ಕಂಪನಿಯ ಎಕೋ ಹೊಸ ಕಾರನ್ನು ಡೆಲಿವರಿ ಪಡೆಯಲಾಗಿತ್ತು, ಆದರೆ, ರಸ್ತೆ ಮಧ್ಯೆ ಕಾರು ಕೆಟ್ಟು ನಿಂತ್ತಿದ್ದರಿಂದ ಪರೀಕ್ಷಿಸಲು ಆಚೆ ಬಂದಾಗ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಡ್ಯಾನ್ಸರ್ ಸಾವನ್ನಪ್ಪಿದ್ದಾನೆ. ಮೃತ ಸುಧೀಂದ್ರ ಜೀ ಕನ್ನಡದ ಸೈ ಡ್ಯಾನ್ಸ್ ಶೋ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದನು.

ಮಾರುತಿ ಕಂಪನಿಯ ಕಳಪೆ ಗುಣಮಟ್ಟವೇ ಸಾವಿಗೆ ಕಾರಣ ಎಂದು ಸಾರ್ವಜನಿಕರ ಆರೋಪ ಮಾಡುತ್ತಿದ್ದಾರೆ.

ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.