ಎದ್ದೇಳು,ಕನ್ನಡಿಗ,KRS ಪಕ್ಷ ದಿಂದ ಅಭಿಯಾನ.

ವೀರಮಾರ್ಗ ನ್ಯೂಸ್ : ರಾಯಚೂರು ಜಿಲ್ಲಾ : ರಾಯಚೂರುನಲ್ಲಿ ಎದ್ದೇಳು ಕನ್ನಡಿಗ,ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿ.

ನವಂಬರ್ ಒಂದಕ್ಕೆ ಬೆಂಗಳೂರುನಲ್ಲಿ ಪಕ್ಷದ ಬೃಹತ್ ಸಮಾವೇಶಕ್ಕೆ ಕರೆ.

ರಾಯಚೂರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ರಾಯಚೂರು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ನಗರದ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಕೇಂದ್ರ ಬಸ್ ನಿಲ್ದಾಣ, ತೀನ್ ಕಂದಿಲ್ ವೃತ್ತ, ಚಂದ್ರ ಮೌಳೇಶ್ವರ ವೃತ್ತದ ವರೆಗೆ ಪಾದಯಾತ್ರೆ ಮಾಡಿ ಅಭಿಯಾನದ ಕುರಿತು ಜನ ಜಾಗೃತಿ,ಹಾಗೂ ಪಕ್ಷದ ಸದಸ್ಯತ್ವ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸೋಮಸುಂದರ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ನೋವುಗಳಿಗೆ,ಕಷ್ಟ ಕಾರ್ಪಣ್ಯಗಳಿಗೆ ನಮ್ಮನ್ನು ಆಳುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು ನೇರವಾಗಿ ಕಾರಣ.ಅವರವರ ಸ್ವಾರ್ಥದ ಮತ್ತು ಕುಟುಂಬದ ರಾಜಕಾರಣದಲ್ಲಿ ರಾಜ್ಯದ ಮತದಾರರನ್ನು ಮೂರ್ಖರನ್ನಾಗಿ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಜನಪರವಾದ ಆಡಳಿತ ನಡೆಸಬೇಕಾದ ಪಕ್ಷಗಳು ಜಾತಿ ರಾಜಕಾರಣ, ಹಣಬಲದ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ ಹಾಗಾಗಿ ನಮ್ಮ ಪಕ್ಷವು ಕನ್ನಡ ನಾಡಿನ ನೆಲ,ಜಲ,ಗಡಿ ಭಾಷೆಯ ಉಳಿವಿಗಾಗಿ ಮತ್ತು ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡುವಿಕೆಗಾಗಿ ಒತ್ತಾಯಿಸಿ ಮುಂದಿನ ನವಂಬರ್ ತಿಂಗಳಲ್ಲಿ ಒಂದು ದೊಡ್ಡ ಸಮಾವೇಶ ಆಯೋಜಿಸಲಾಗುತ್ತಿದ್ದು ಸಮಸ್ತ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷ ಶ್ರೀ ಜೋಗನಹಳ್ಳಿ ಗುರುಮೂರ್ತಿ ಅವರು ಮಾತನಾಡಿ ರಾಜ್ಯದಲ್ಲಿ ರೈತರಿಗೆ,ಮಹಿಳೆಯರಿಗೆ,ವಿದ್ಯಾರ್ಥಿಗಳಿಗೆ,ಕೃಷಿ ಕಾರ್ಮಿಕರಿಗೆ ಉತ್ತಮವಾದ ಜೀವನ ನಿರ್ವಹಣೆಗೆ ಅನುನಕೂಲದ ವಾತಾವರಣ ನಿರ್ಮಾಣವಾಗಿದೆ ಈ ಎಲ್ಲಾ ಅವ್ಯವಸ್ಥೆಗಳನ್ನು ವಿರೋಧಿಸಿ ಪ್ರತಿಯೊಬ್ಬರು ಉತ್ತಮವಾದ ಜನ ಜೀವನ ಮಾಡುವಂತೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಜನರಿಗೆ ತಲುಪಿಸಿ ಕನ್ನಡಿಗರನ್ನು ಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದು ಇದಕ್ಕೆ ಕನ್ನಡಪರ,ರೈತಪರ,ಪ್ರಗತಿಪರ ಸಂಘಟನೆಗಳ ಮುಖಂಡರು,ನಾಯಕರು ಬೆಂಬಲಿಸಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ್, ಪ್ರಸನ್ನ ಕುಮಾರ್,ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಶಎಸ್ಸಿ ಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಬಸವ ಪ್ರಭು, ಯುವ ಘಟಕದ ರಾಜ್ಯ ಕಾರ್ಯದರ್ಶಿ ದ್ಯಾವಣ್ಣ ಪುಲದಿನ್ನಿ, ಜಿಲ್ಲಾಧ್ಯಕ್ಷ ಕುಂದೂರು ರಾಘವೇಂದ್ರ,ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಸುಕಲ್ಪೇಟೆ , ಪ್ರಧಾನ ಕಾರ್ಯದರ್ಶಿ ವಿಜಯ್ ಪೋಲ್,ಕಾರ್ಯದರ್ಶಿಗಳಾದ ವಿಶ್ವನಾಥ್ ನಾಯ್ಡು,ಶರಣಪ್ಪ ಕವಿತಾಳ, ವೆಂಕಟೇಶ್,ಶರಣಪ್ಪ ಹಂಚಿನಾಳ, ಅಲ್ಲಭಕ್ಷಿ, ಶಂಕರ್ ಗೌಡ,ಯುವ ಘಟಕದ ಜಿಲ್ಲಾಧ್ಯಕ್ಷ ರಾಮಸ್ವಾಮಿ ಆರೋಲಿ,ಉಪಾಧ್ಯಕ್ಷ, ಗಂಗಪ್ಪ,ಕುಮಾರ್ ನಾಯಕ್, ಗೋವಿಂದ, ವೀರೇಶ್ ಕೋಟೆ,ಪಂಪಾಪತಿ, ರಮೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.