ಕೇಸರಿಯಲ್ಲಿ ರಕ್ತದ ಓಕಳಿ ಆಡಿದ ದುಸ್ಕರ್ಮಿಗಳು…
ದುಸ್ಕರ್ಮಿಗಳಿಗೆ ಬಲೇ ಬಿಸಿದ ಕಾಕಿ ಪಡೆ....
ಅತೀ ಶೀಘ್ರದಲ್ಲಿ ಪತ್ಯೆ ಮಾಡಲು ಟೀಮ್..
ವೀರಮಾರ್ಗ ನ್ಯೂಸ್ : ಕೊಪ್ಪಳ : ರಾಜಕೀಯ ವೈಷಮ್ಯದಿಂದ ಬಿಜೆಪಿ ಯುವ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ (31) ಕೊಲೆಯಾದ ಮೃತ ದುರ್ದೈವಿ. ಸ್ನೇಹಿತರ ಜೊತೆ ಊಟ ಮಾಡಿ ಗಂಗಾವತಿಗೆ ತೆರಳುವ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ವೆಂಕಟೇಶ್ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ದುಷ್ಕರ್ಮಿಗಳು ಬಳಸಿದ್ದ ಕಾರು ಗಂಗಾವತಿಯ ಹೆಚ್ಆರ್ ಎಸ್ ಕಾಲೋನಿಯಲ್ಲಿ ಪತ್ತೆಯಾಗಿದೆ.