ಅಕ್ಕ-ತಂಗಿ ಸ್ಕೂಟರ್‌ನಿಂದ ಬಿದ್ದು ದಾರುಣ ಸಾವು,,,!

ಕೈವಾರ ತಾತಯ್ಯನಿಗೆ ಹೋಗಿ ಬರುತ್ತಿದ್ದ ಅಕ್ಕ-ತಂಗಿ ಸ್ಕೂಟರ್‌ನಿಂದ ಬಿದ್ದು ದಾರುಣ ಸಾವು,,,!

ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯದಿಂದ ಬಿದ್ದಿದ್ದ ಜಲ್ಲಿಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ, ಹಿಂಬದಿಯಿಂದ ಬಂದ ಕ್ಯಾಂಟ‌ರ್ ಅವರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.

ವೀರಮಾರ್ಗ ನ್ಯೂಸ್ : ಬೆಂಗಳೂರು ಗ್ರಾಮಾಂತರ ಹೊಸಕೋಟೆ : ಹೊಸಕೋಟೆ ಮತ್ತು ಚಿಂತಾಮಣಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವತಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಯ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಮತ್ತು ” ಯಲ್ಲಿದ್ದ ಜಲ್ಲಿಕಲ್ಲುಗಳೇ ಈ ದುರಂತಕ್ಕೆ ಕಾರಣ ಎ ಸ್ಥಳೀಯರು ಆರೋಪಿಸಿದ್ದಾರೆ.

ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಸಹೋದರಿಯರ ದುರಂತ ಸಾವು,ಮೃತ ದುರ್ದೈವಿಗಳನ್ನು ಹೊಸಕೋಟೆ ಮೂಲದವರಾದ ಶೈಲ (25) ಮತ್ತು ಅವರ ತಂಗಿ ಶ್ವೇತಾ (22) ಎಂದು ಗುರುತಿಸಲಾಗಿದೆ. ಇಬ್ಬರೂ ಅಕ್ಕ-ತಂಗಿಯರಾಗಿದ್ದು ಕೈವಾರ ಕ್ಷೇತ್ರಕ್ಕೆ ತೆರಳಿ ವಾಪಸ್ ಹೊಸಕೋಟೆಗೆ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ರಸ್ತೆ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ರಸ್ತೆಯ ಮೇಲೆ ಜಲ್ಲಿಕಲ್ಲುಗಳು ಬಿದ್ದಿದ್ದವು. ಯುವತಿಯರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನವು ಜಲ್ಲಿಕಲ್ಲುಗಳ ಮೇಲೆ ಹರಿದು ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಅದೇ ಸಮಯದಲ್ಲಿ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ (ಸರಕು ಸಾಗಣೆ ವಾಹನ) ವೇಗವಾಗಿ ಬಂದು, ಕೆಳಗೆ ಬಿದ್ದಿದ್ದ ಯುವತಿಯರ ದೇಹದ ಮೇಲೆ ಹರಿದಿದೆ. ಕ್ಯಾಂಟರ್ ಚಕ್ರಕ್ಕೆ ಸಿಲುಕಿದ ಇಬ್ಬರೂ ಯುವತಿಯರು ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ್ದಾರೆ.

ಕಳಪೆ ರಸ್ತೆ ನಿರ್ವಹಣೆಗೆ ಸಾರ್ವಜನಿಕರ ಆಕ್ರೋಶ…..

ಮನೆ ನಡೆದಿರುವ ಹೆದ್ದಾರಿಯನ್ನು KRDL ಸಂಸ್ಥೆಯು ನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರೂ, ವಾಹನ ಸವಾರರ ಸುರಕ್ಷತೆಗಾಗಿ ಯಾವುದೇ ಸರ್ವೀಸ್ ರಸ್ತೆಯ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಅಲ್ಲದೆ, ರಸ್ತೆಯ ಮೇಲೆ ನಿರ್ಲಕ್ಷ್ಯದಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಜಲ್ಲಿಕಲ್ಲುಗಳು ವಾಹನಗಳು ಸ್ಕಿಡ್ ಆಗಲು ನೇರ ಕಾರಣವಾಗಿವೆ. ರಸ್ತೆ ನಿರ್ವಹಣೆ ಮಾಡುವವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಕಳಪೆ ರಸ್ತೆ ನಿರ್ವಹಣೆಗೆ ಈ ಎರಡು ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭೀಕರ ದುರಂತಕ್ಕೆ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರ ಮತ್ತು ಸಂಬಂಧಪಟ್ಟ,ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸ್‌ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕ್ಯಾಂಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ರಸ್ತೆ ನಿರ್ವಹಣೆಯಲ್ಲಿನ ಲೋಪದಿಂದಾಗಿ ಅಮಾಯಕ ಯುವತಿಯರು ಪ್ರಾಣ ಕಳೆದುಕೊಂಡಿರುವುದು ಇಡೀ ಹೊಸಕೋಟೆ ಭಾಗದಲ್ಲಿ ದುಃಖದ ವಾತಾವರಣ ಸೃಷ್ಟಿ..