ಶಿರಸಂಗಿ ಗ್ರಾಮಕ್ಕೆ ಭೇಟಿ ನೀಡಿದ ಎಮ್ ಬಿ ಪಾಟೀಲ ಸಚಿವರು.
ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲೆ : ಸವದತ್ತಿ ತಾಲೂಕಿನ : ಶಿರಸಂಗಿ ಗ್ರಾಮಕ್ಕೆ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಮ್ ಬಿ ಪಾಟೀಲ ಅವರು ಶುಕ್ರವಾರ ಶಿರಸಂಗಿ ಗ್ರಾಮದ ಶ್ರೀ ಕಾಳಿಕಾ ದೇವಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡರು. ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಾಬಾಬುಡನಗಿರಿ ಹಾಗೂ ರಾಮಮಂದಿರಕ್ಕೆ ಬೇಟಿ ನೀಡಿದರು, ಲಿಂಗರಾಜ ದೇಸಾಯಿಯವರ ಟ್ರಸ್ಟ್ ನ ಆಸ್ತಿಗಳ ಕುರಿತು ಮಾಹಿತಿ ಪಡೆದುಕೊಂಡರು. ಅದರ ಪಕ್ಕದಲ್ಲಿರುವ ಹೊಂಡವನ್ನು ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಿದರು.
ವಾಡೆಯ ಹತ್ತಿರದಲ್ಲಿ ಟ್ರಸ್ಟ ಆಸ್ತಿಯಲ್ಲಿ ರೂ 50 ಲಕ್ಷ ಅನುದಾನದಲ್ಲಿ ನಿರ್ಮಿತಿ ಕೇಂದ್ರದವರು ಮಾಡಿರುವ ಕಲ್ಯಾಣ ಮಂಟಪದ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ಲಿಂಗರಾಜ ದೇಸಾಯಿಯವರ ಸ್ಮಾರಕ ಮತ್ತು ವಾಡೆಗಳಿರುವ ಸ್ಥಳಕ್ಕೆ ಬೇಟಿ ನೀಡಿ ವಾಡೆಯನ್ನು ನವೀಕರಿಸುವ ಕುರಿತು ಮಾಹಿತಿ ಪಡೆದುಕೊಂಡರು. ಸದ್ಯೆಯ ವಾಡೆಯನ್ನು ಸಿಮೆಂಟನಿಂದ ರಿಸ್ಟೋರ್ ಮಾಡುವ ಕೆಲಸವನ್ನು ತಕ್ಷಣವೇ ಸ್ಥಗಿತಗೊಳಿಸಲು ಸೂಚನೆ ನೀಡಿದರು.
ಲಿಂಗರಾಜ ದೇಸಾಯಿಯವರ ವಾಡೆಯನ್ನು ಅದರ ಮೂಲ ಸಂರಚಣೆಗೆ ದಕ್ಕೆಯಾಗದಂತೆ ಅಬಿವೃದ್ಧಿ ಮಾಡುವುದಾಗಿ ತಿಳಿಸಿದರು. ಇದಕ್ಕಾಗಿ ಹೈದರಾಬಾದ ಮೂಲದ ಆರ್ಕಿಟೆಕ ರಾದಂತಹ ಅನುರಾಧ ಮೇಡಂ ರವರ ಜೊತೆಗೆ ದೂರವಾಣಿಯ ಮೂಲಕ ಮಾತನಾಡಿದರು. ಅವರು ಅಕ್ಟೋಬರ 07 ಅಥವಾ ಅಕ್ಟೋಬರ 08 ಕ್ಕೆ ಬಂದು ವಾಡೆಯನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿದರು. ವಾಡೆಯ ಹಳೆಯ ಫೋಟೋಗಳನ್ನು ಮಾನ್ಯ ಸಚಿವರ ಕಾರ್ಯಾಲಯಕ್ಕೆ ಕಳುಹಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡಿ ಸದ್ಯ ನಡೆಯುತ್ತಿರುವಂತಹ ನವೀಕರಣ ಕಾರ್ಯವನ್ನು ತಕ್ಷಣವೇ ಸ್ಥಗಿತಗೊಳಿಸಲು ತಿಳಿಸಿದರು.

ಲಿಂಗರಾಜ ದೇಸಾಯಿ ಟ್ರಸ್ಟ್ ಹೆಸರಿನಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಎಲ್ಲ ಆಸ್ತಿಗಳ ಸ್ಯಾಟಲೈಟ ಇಮೇಜಗಳ ಮೂಲಕ ಸರ್ವೇ ಮಾಡಿಸಿ ಗಡಿ ಗುರುತು ಮಾಡಲು ಸೂಚನೆ ನೀಡಿದರು.
ಲಿಂಗರಾಜ ದೇಸಾಯಿ ಟ್ರಸ್ಟ್ಗೆ ಸಂಬಂಧಿಸಿದ 34 ಗುಂಟೆಯ ಆಸ್ತಿಯಲ್ಲಿ ಬಂಡಿವಡ್ಡರ ಹಾಗೂ ಇತರರು ಮನೆ ನಿರ್ಮಿಸಿಕೊಂಡಿರುವ ಕುರಿತು ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.
ಶಿರಸಂಗಿ ಗ್ರಾಮದ ಸ್ಥಳೀಯರಿಂದ ಅವರ ಸಮಸ್ಯೆ ಹಾಗೂ ಅವಹಾಲುಗಳನ್ನು ಸ್ವೀಕರಿಸಿದರು.
ಸವದತ್ತಿ ಕೋಟೆಯ ಅಭಿವೃದ್ಧಿ ಪಡಿಸುವ ಕುರಿತು ಸ್ಥಳಿಯರು ಮಾನ್ಯ ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ್, ನವಲಗುಂದ ಶಿರಸಂಗಿ ಟ್ರಸ್ಟ್ ನ ಕಾರ್ಯದರ್ಶಿ ಸಿದ್ದು ಪಾಟೀಲ್, ಲಿಂಗರಾಜ ಉತ್ಸವ ಕಮಿಟಿ ಅಧ್ಯಕ್ಷರು ಬಸವ ಪ್ರಭು ಅಣ್ಣಿಗೇರಿ , ಗಂಗಪ್ಪ ಇದ್ಲಿ ಗ್ರಾಮ ಪಂಚಾಯತ ಸದಸ್ಯರು, ಮಲ್ಲಪ್ಪ ಕಪಲನ್ನವರ ಗ್ರಾಮ ಪಂಚಾಯತಿ ಸದಸ್ಯರು, ಲಿಂಗರಾಜ ಶಿರಸಂಗಿ ಸಮಿತಿ ನಿರ್ದೇಶಕರಾದ ಮಲ್ಲಿಕಾರ್ಜುನ್ ತೋರಣಗಟ್ಟಿ, ಯಲ್ಲಪ್ಪ ನಾಯಕರ, ಫಕೀರಪ್ಪ ಬಡೆನ್ನವರ್ ಗ್ರಾಮ ಪಂಚಾಯತಿ ಸದಸ್ಯರು, ಶಿರಸಂಗಿ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.