ಅಪಘಾತದಲ್ಲಿ ಯುವಕ ಬಲಿ.

ವೀರಮಾರ್ಗ ನ್ಯೂಸ್ : ಎಚ್.ಡಿ.ಕೋಟೆ : ಸ್ನೇಹಿತರ ಮನೆಯಲ್ಲಿ ಪಿತೃಪಕ್ಷದ ಊಟ ಮುಗಿಸಿ ದ್ವಿ-ಚಕ್ರ ವಾಹನದಲ್ಲಿ ವಾಪಸ್ಸಾಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಯುವಕ ಬಲಿಯಾಗಿದ್ದಾನೆ.

ಎಚ್‌.ಡಿ.ಕೋಟೆ ಪಟ್ಟಣದ ನಿವಾಸಿ ಮಂಜುನಾಥ್(42) ಮೃತ ದುರ್ದೈವಿ. ಗುರುವಾರ ರಾತ್ರಿ 11:30ರ ವೇಳೆಯಲ್ಲಿ ಹುಣಸೂರು-ಬೇಗೂರು ರಸ್ತೆ ಮಾರ್ಗದ ಕೆ.ಎಡತೊರೆ ಬಳಿ ಬರುತ್ತಿದ್ದ ಹಿಂಬದಿಯಿಂದ ಅತಿ ವೇಗದಲ್ಲಿ ಬರುತ್ತಿದ್ದ ಕಾರೊಂದು ಬೈಕ್ ಗೆ ಗುದ್ದಿದ ಕಾರಣ ಸುಮಾರು 100ಮೀ. ದೂರದ ಕಂದಕಕ್ಕೆ ಉರುಳಿದ ಬೈಕ್ ಸವಾರನ ತಲೆಗೆ ಕಲ್ಲೊಂದು ಒಡೆದ ಪರಿಣಾಮ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾನೆ.