ವಿಶ್ವ ಕ್ಷೌರಿಕರ ದಿನ ಆಚರಣೆ – ಸನ್ಮಾನ…

ಅರಸಿಕೆರೆ ಗ್ಲಾಮರ್ ಕೇರ್ ಸಂಸ್ಥೆಯಿಂದ ವಿಶ್ವ ಕ್ಷೌರಿಕರ ದಿನ ಆಚರಣೆ – ಸನ್ಮಾನ…

ಕ್ಷೌರಿಕರ ಜಾತಿ ಸಮೀಕ್ಷೆ; ಸವಿತಾ ಸಮಾಜ ಎಂದೇ ನಮೂದಿಸಿ’ ಕೃಷ್ಣಾ ಹಡಪದ ಕರೆ

ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಸವಿತಾ ಸಮಾಜಕ್ಕೆ ಸಂಬಂದಿಸಿದ 26 ಉಪಪಂಗಡದ ಕ್ಷೌರಿಕರು ವಿವಿಧ ಜಾತಿ ಸೂಚಕ ಹೆಸರುಗಳನ್ನು ಬಿಟ್ಟು, ಸಮುದಾಯದ ಮೂಲ ಹೆಸರನ್ನೇ ನೇರವಾಗಿ ಸವಿತಾ ಸಮಾಜ ಎಂದೇ ನಮೂದಿಸಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಸವಿತಾ ಸಮಾಜದ ಕ್ಷೌರಿಕ ಬಾಂಧವರಲ್ಲಿ ಮನವಿ ಮಾಡಿ ಕರೆ ನೀಡಿದರು.
ಅವರು ಅರಸಿಕೆರೆಯಲ್ಲಿ ಕಡೂರ ರವಿಕುಮಾರ ಮಾಲಿಕತ್ವದ ಗ್ಲಾಮರ್ ಕೇರ್ ಸಂಸ್ಥೆಯಿಂದ ಹಮ್ಮಿಕೊಂಡ ವಿಶ್ವ ಕ್ಷೌರಿಕರ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆ ವತಿಯಿಂದ ಸಲ್ಲಿಸಿದ ಪ್ರೀತಿಯ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ ರಾಜ್ಯದ ಸಮಸ್ತ ಕ್ಷೌರಿಕರ ಮನೆಗೆ ಬರುವ ಸಮೀಕ್ಷಕರಿಗೆ ಜಾತಿ ಕಾಲಂನಲ್ಲಿ ನಮ್ಮ ಜಾತಿಯನ್ನು ‘ಸವಿತಾ ಸಮಾಜ’ ಉಪಜಾತಿಯನ್ನು “ಕ್ಷೌರಿಕ” ದರ್ಮ “ಹಿಂದು” ಎಂದು ನಮೂದಿಸಲು ಮುಲಾಜಿಲ್ಲದೆ ತಿಳಿಸಬೇಕು ಇದು ಸವಿತಾ ಸಮಾಜದ ಒಗ್ಗಟ್ಟನ್ನು ತೋರಿಸುವುದಲ್ಲದೆ, ಸಮುದಾಯದ ಸರಿಯಾದ ಪ್ರತಿನಿಧಿಸುವಿಕೆಗೆ ಸಹಕಾರಿಯಾಗುತ್ತದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಸವಿತಾ ಸಮಾಜದ ಕ್ಷೌರಿಕ ಬಾಂಧವರಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ನಿರ್ದೇಶಕರು ಮತ್ತು ಗ್ಲಾಮರ್ ಕೇರ್ ಸಂಸ್ಥೆಯ ಮಾಲೀಕರಾದ ಕಡೂರ ರವಿಕುಮಾರ ಮಾತನಾಡಿ ಗದಗ ಕೃಷ್ಣಾ ಎಚ್ ಹಡಪದ ಅವರು 26 ವರ್ಷಗಳಿಂದ ಸವಿತಾ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘಟನೆ ಮಾಡುತ್ತಾ ಸರ್ಕಾರದ ಮಟ್ಟದಲ್ಲಿ ಹಲವಾರು ಬೇಡಿಕೆಗಳನ್ನು ಸಲ್ಲಿಸಿ ಪಟ್ಟು ಹಿಡಿದು ಅದನ್ನು ಸಾಕಾರ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ನಿರ್ಗತಿಕ ಬಡ ಕ್ಷೌರಿಕರಿಗಾಗಿ ಸರಕಾರದಿಂದ ಕ್ಷೌರಕುಟೀರ ಮಾಡಬೇಕೆಂಬ ಪ್ರಸ್ತಾಪವನ್ನು.
ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಸರ್ಕಾರದ ಗಮನ ಸೆಳೆಯುವಲ್ಲಿ ಬಹು ಮುಖ್ಯ ಪಾತ್ರಗೈದ ಅವರು ಕರ್ನಾಟಕ ರಾಜ್ಯ ಇತಿಹಾಸದಲ್ಲೇ ರಾಜ್ಯದ ಪ್ರಥಮವಾದ ಗದಗನಲ್ಲಿ ಒಂದು ಪ್ರಮುಖ ವೃತ್ತಕ್ಕೆ ಶ್ರೀ ಸವಿತಾ ಮಹರ್ಷಿ ಗುರುಗಳ ನಾಮಕರಣ ಮಾಡಿಸಿದ್ದು ಹೀಗೆ ಸಮಾಜದ ಮುಖ್ಯವಾಗಿ ಸಾವಿರಾರು ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಗದಗ ಕೃಷ್ಣಾ ಎಚ್ ಹಡಪದ ಅವರನ್ನು ವಿಶ್ವ ಕ್ಷೌರಿಕ ದಿನಾಚರಣೆ ಪ್ರಯುಕ್ತ ಗ್ಲಾಮರ್ ಕೇ‌ರ್ ಅರಸೀಕೆರೆ ಸಂಸ್ಥೆಯಿಂದ ಗೌರವ ಸನ್ಮಾನ ಸಲ್ಲಿಸಿ ಗೌರವಿಸಿದ್ದು ಹೆಮ್ಮೆ ಅನಿಸುತ್ತದೆ. ಎಂದು ಹೇಳಿದರು
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಯುವ ನಾಯಕರಾದ ವಿನಾಯಕ ರಾಯಚೂರ. ಬೆಳಗಾವಿನ ಸಮಾಜದ ಯುವ ಮುಖಂಡರಾದ ಪ್ರಮೋದ್ ಚಿಂಚಲಿ, ಗ್ಲಾಮರ್ ಕೇರ್ ನ ವ್ಯವಸ್ಥಾಪಕರಲ್ಲೊಬ್ಬರಾದ ಜೈವಿತ್ ಕೆ ಆರ್, ಸಿಬ್ಬಂದಿಗಳಾದ ವಿನಾಯಕ್ , ಸಂತೋಷ್ ಇತರರು ಭಾಗಿಯಾಗಿದ್ದರು.