ರಾಜ್ಯ ಶಿಕ್ಷಣ ನೀತಿ ಅಂತಿಮ ವರದಿ ಸಲ್ಲಿಕೆ.

ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆ…

ಮಾತೃಭಾಷೆ ಕಡ್ಡಾಯ ಬೋಧನೆಗೆ ಸರಕಾರಕ್ಕೆ ಸಿಪಾರಸ್ಸು…

ವೀರಮಾರ್ಗ ನ್ಯೂಸ್ : ಬೆಂಗಳೂರು : ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲ ಮಾದರಿಯ ಶಾಲೆಗಳು 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವಂತೆ ಸೇರಿದಂತೆ ಹಲವು ಶಿಫಾರಸುಗಳ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) (SEP) ಅವರ ನೇತೃತ್ವದಲ್ಲಿ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಅಂತಿಮ ವರದಿಯನ್ನು ಸಲ್ಲಿಸಲಾಯಿತು.

ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಶಿಕ್ಷಣ ಆಯೋಗದ ಅಧ್ಯಕ್ಷರು ಪ್ರೊ. ಸುಖದೇವ್ ಥಾರೋಟ. ಅವರ ನೇತೃತ್ವದಲ್ಲಿ ರಾಜ್ಯ ಶಿಕ್ಷಣ ನೀತಿ ಎಸ್ಇಪಿ (SEP) ಅಂತಿಮ ವರದಿಯನ್ನ ಸಲ್ಲಿಸಲಾಯಿತು.

Oplus_131072

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವರಾದ ಮಧು ಬಂಗಾರಪ್ಪ ಎಂ ಸಿ ಸುಧಾಕರ್ ಬೈರತಿ ಸುರೇಶ್ ಶಿಕ್ಷಣ ತಜ್ಞರು ನಿರಂಜನರಾಧ್ಯ ವಿ ಪಿ. ಮುಖ್ಯಮಂತ್ರಿಗಳು ರಾಜಕೀಯ ಕಾರ್ಯದರ್ಶಿ ನಸಿರ್ ಮಹಮ್ಮದ್ ಭಾಗ್ಯವಾನ್ರ ಮುದಿಗೌಡ ಇನ್ನೂ ಅನೇಕ ಪ್ರಮುಖರು ಸೇರಿಇದ್ದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದ ವೇಳೆ ಜಾರಿಗೆ ತಂದು ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು ರದ್ದುಗೊಳಿಸಿ. (SEP) ಜಾರಿಗೆ ತರುವುದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ತಿಳಿಸಿತ್ತು ಆನಂತರ ಅಧಿಕಾರಕ್ಕೆ ಬಂದ ತಕ್ಷಣ 2023 ಅಕ್ಟೋಬರ್ ನಲ್ಲಿ ರಾಜ್ಯ ಶಿಕ್ಷಣ ಆಯೋಗವನ್ನು ಶಿಕ್ಷಣ ತಜ್ಞ ಪ್ರೊ. ಸುಖದೇವ್ ಥಾರೋಟ್ ಅವರ ಅಧ್ಯಕ್ಷತೆಯಲ್ಲಿ ರಚಿಸಿತ್ತು ಈಗ ಆಯೋಗವು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲಾ ಮಾದರಿಯ ಶಾಲೆಗಳು ಐದನೇ ತರಗತಿಯವರೆಗೆ ಕನ್ನಡ ಅಥವಾ ಮಾತೃಭಾಷೆಯಲ್ಲಿ ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವಂತೆ ಶಿಫಾರಸ್ಸು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಬೋಧನಾ ಮಾಧ್ಯಮ ಮತ್ತು ತ್ರಿ ಭಾಷಾ ಸೂತ್ರದ ಹೆಚ್ಚು ವಿವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಸೇರಿದಂತೆ ಎಲ್ಲಾ ಮಂಡಳಿಗಳ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ ಮಾತೃ ಭಾಷೆಯಲ್ಲೇ ಬೋಧನೆ ಮಾಡುವುದನ್ನು ಕಡ್ಡಾಯಗೊಳಿಸಬೇಕೆಂದು ತಿಳಿಸಿದೆ. ಅಲ್ಲದೆ ದ್ವಿ ಭಾಷೆ ನೀತಿ ಅನುಷ್ಠಾನ ಮಾಡುವುದನ್ನು ಸೂಕ್ತ ಕನ್ನಡ ಅಥವಾ ಮಾತೃಭಾಷೆ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಬೋಧಿಸುವುದು ಉತ್ತಮ ಎಂದು ಆಯೋಗ ಅಭಿಪ್ರಾಯ ಪಟ್ಟದ್ದು ಆ ಮೂಲಕ ಆಯೋಗವು ಪರೋಕ್ಷವಾಗಿ ತ್ರಿ ಭಾಷೆ ನೀತಿ ಅವಶ್ಯಕತೆ ಇಲ್ಲವೆಂದು ತಿಳಿಸಿದಂತಾಗಿದೆ. ಇದೇ ರೀತಿ ಶಾಲಾ ಶಿಕ್ಷಣ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಎಂಬ ರೀತಿಯಲ್ಲಿ ವಿಭಾಗ ಮಾಡಿಕೊಂಡು ಪ್ರತಿ ವಿಭಾಗದಲ್ಲೂ ಶಿಫಾರಸ್ಸುಗಳನ್ನು ಸರಕಾರಕ್ಕೆ ನೀಡಿದೆ.

ಸಮಿತಿ ಕಾರ್ಯವೈಖರ್ಯ :-

ಸಮಿತಿಯು 12 ಸದಸ್ಯರು ಆರು ವಿಷಯ ತಜ್ಞರು ಮತ್ತು ಒಬ್ಬ ಸದಸ್ಯರು ಕಾರ್ಯದರ್ಶಿಯೊಂದಿಗೆ ತನ್ನ ಕಾರ್ಯ ಆರಂಭ ಮಾಡಿತು. ಪ್ರಾಥಮಿಕ ಉನ್ನತ ಶಿಕ್ಷಣ ಹೀಗೆ 35 ಕಾರ್ಯಪಡೆಗಳನ್ನು ರಚಿಸಿತು. 379 ವಿಷಯಗಳು ತಜ್ಞರ ಸೇರಿ 132 ಸಭೆಗಳನ್ನು ವಿಚಾರ ಸಂಕೀರ್ಣಗಳು ನಡೆಸಿದವು. ಇವು 20075 ಮಾನವ ದಿನಗಳಿಗೆ ಸಮಾನವಾಗಿದೆ. 2024ರಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಇದು ಪದವಿ ಶಿಕ್ಷಣ ಬಹು ಪ್ರವೇಶ ಮತ್ತು ನಿರ್ಗಮನಕ್ಕೆ ಸಂಬಂಧಿಸಿದಾಗಿತ್ತು.

ಆಯೋಗದ ಅಂತಿಮ ವರದಿ ಮೂರು ಸಂಪುಟಗಳಲ್ಲಿದೆ. ಶಾಲಾ ಶಿಕ್ಷಣ 560 ಪುಟ ಉನ್ನತ ಶಿಕ್ಷಣದ್ದು 45 ಪುಟ ಹಾಗೂ ಸಂಪುಟ ಮೂರು ಸುಮಾರು 450 ಪುಟಗಳನ್ನು ಹೊಂದಿದೆ. ಇದರಲ್ಲಿ ಸಂಪುಟ 1ಮತ್ತು 2ಈ ರೀತಿ ಗುರುಸಿ ಗುರುತಿಸಿದೆ. ಒಟ್ಟಾರೆ ವರದಿಯು 2197ಪುಟಗಳಿಂದ ಕೂಡಿದೆ. ಇದು ವಾಸ್ತವ ಪರಿಸ್ಥಿತಿಯ ಸಮಗ್ರ ತಿಳುವಳಿಕೆಯ ಆಧಾರದ ಮೇಲೆ ರೂಪಿಸಲಾಗಿದೆ.

ವಿಭಾಗವಾರು ಪ್ರಮುಖ ಶಿಫಾರಸ್ಸುಗಳು,,,,

ಶಾಲಾ ಶಿಕ್ಷಣ

ಸಂವಿಧಾನಿಕ ಮೌಲ್ಯ ಶಿಕ್ಷಣ ಕಡ್ಡಾಯ ವಿಷಯವಾಗಿ ಕಲಿಸಿ.

ಎರಡು ವರ್ಷ ಪೂರ್ವ ಪ್ರಾಥಮಿಕ ಎಂಟು ವರ್ಷ ಪ್ರಾಥಮಿಕ ನಾಕು ವರ್ಷ ಮಾಧ್ಯಮಿಕ ಶಿಕ್ಷಣ.

RTE 4 ರಿಂದ 18 ವಯೋಮಾನಕ್ಕೆ ವಿಸ್ತರಿಸುವುದು.

NCERT ಪಠ್ಯಪುಸ್ತಕದ ಅವಲಂಬನೆ ಕೊನೆಗೊಳಿಸಿ.

ಗುತ್ತಿಗೆ ಅತಿಥಿ ಶಿಕ್ಷಕರ ನೇಮಕ ನಿಲ್ಲಿಸಿ.