ಕಾರ್ಮಿಕರ ದಿನಾಚರಣೆಯಂದು ಕಾರ್ಮಿಕರಿಂದ ಬೋರ್ಡ್ ಉದ್ಘಾಟನೆ.

ಕಾರ್ಮಿಕರ ದಿನಾಚರಣೆಯಂದು ಕಾರ್ಮಿಕರಿಂದ ಬೋರ್ಡ್ ಉದ್ಘಾಟನೆ

ವೀರಮಾರ್ಗ ನ್ಯೂಸ್ : ರಾಣೆಬೆನ್ನೂರು ನಗರದಲ್ಲಿ ಇರುವ ಮಡ್ಲೇರಿ ರೋಡ್ ರೈಲ್ವೆ ಗೇಟ್ ಹತ್ತಿರ ಇರುವ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಬೋರ್ಡ್ ಉದ್ಘಾಟನೆಯನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಹಾಗೂ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಮರಡೆಪ್ಪ ಚಳಗೇರಿ ಇವರ ನೇತೃತ್ವದಲ್ಲಿ ಸರ್ವ ಸದಸ್ಯರು ಕಾರ್ಮಿಕರೊಂದಿಗೆ ಮೇ 1 ಕಾರ್ಮಿಕರ ದಿನಾಚರಣೆಯಂದು ಬೋರ್ಡ್ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರು ಕನ್ನಡಪರ ಹೋರಾಟಗಾರರಾದ ನಿತ್ಯಾನಂದ ಕುಂದಾಪುರವರು ಆಗಮಿಸಿ ಕಾರ್ಯಕ್ರಮದ ಕುರಿತು ಮಾತನಾಡಿದರು ಭಾರತದ ದೇಶಾದ್ಯಂತ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತೇವೆ ಹಾಗೂ ಸರ್ಕಾರದ ಸವಲತ್ತುಗಳನ್ನು ಕೊಡಿಸುವ ಮೂಲಕ ಸಂಘಟನೆಗಳು ಸಹ ಹೆಚ್ಚು ಬೆಳೆಯುತ್ತವೆ ಆದರೆ ಸಂಘಟನೆಗಳು ನಿಜವಾದ ಕಾರ್ಮಿಕರನ್ನು ಗುರುತಿಸಿ ಸೌವಲತ್ತುಗಳನ್ನು ಕೊಡಿಸುವ ಕೆಲಸ ಮಾಡಬೇಕು ಏಕೆಂದರೆ ನಿಜವಾದ ಕಾರ್ಮಿಕರಿಗೆ ಇವತ್ತಿನ ದಿವಸ ಸವಲತ್ತುಗಳು ಸಿಗುವ ಬದಲು ಮನೆಯಲ್ಲಿ ಇದ್ದು ಏನು ಕೆಲಸ ಮಾಡದೆ ಇರುವವರು ಈ ಎಲ್ಲಾ ಸೌಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಇದರಿಂದ ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಆದ ಕಾರಣ ಸಂಘಟನೆಗಳು ನಿಜವಾದ ಕಾರ್ಮಿಕರ ಕಡೆ ನಿಗಾ ವಹಿಸಬೇಕೆಂದು ಕಾರ್ಮಿಕರ ಸಂಘಟನೆ ಅವರಿಗೆ ಈ ಮೂಲಕ ತಿಳಿಸಲು ವ್ಯಕ್ತಪಡಿಸುತ್ತೇನೆ ಹಾಗೂ ನಿಮ್ಮ ಜೊತೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಯಾವಾಗಲೂ ಕೈಜೋಡಿಸುತ್ತೇವೆ ನಿಮ್ಮ ಜೊತೆ ಇರುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬೀರೇಶ್ ಲಮಾಣಿ ಶೋಭಾ ಮೂದೇನೂರು ಚಂದ್ರಪ್ಪ ಬಣಕಾರ ಚಿದಾನಂದ ಬಸವಣ್ಣನವರ್ ರೂಪಾ ಹಳ್ಳದರ ನಾಗಮ್ಮ ಚಳಗೇರಿ ಆನಂದ ಲಮಾಣಿ ಪರಶುರಾಮ ಕುರುವತ್ತಿ ರಿಯಾಜ್ ದೊಡ್ಡಮನಿ ರೇವಣಸಿದ್ದಪ್ಪ ಪಾಟೀಲ್ ಹಾಗೂ ಕಾರ್ಮಿಕರು ಮತ್ತಿತರರು ಉಪಸ್ಥಿತರಿದ್ದರು.