ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕು : ಹುಲಿಕಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ನಮ್ಮ ಗ್ರಾಮದ ಆರಾಧ್ಯ ದೈವ ಪವಾಡ ಪುರುಷ ನಾಡಿನ ದೊರೆ ಭಕ್ತರ ಕಷ್ಟಗಳನ್ನು ಪರಿಹರಿಸುವ ಭಕ್ತರ ಮನೆ ದೇವರಾದ ಶ್ರೀ ಬೀರಲಿಂಗೇಶ್ವರ ದೇವರು ಹಾಗೂ ಶ್ರೀ ಚೌಡೇಶ್ವರಿ ದೇವಿ ಶ್ರೀ ದುರ್ಗಾದೇವಿ ದೇವರ ಜಾತ್ರಾ ಮಹೋತ್ಸವವು ಭಕ್ತರ ಜನಸಾಗರದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು..

ಬೀರಲಿಂಗೇಶ್ವರ ದೇವರ ಸೋಮವಾರ ಜಾತ್ರೆಯ ಅಂಗವಾಗಿ ಬೆಳಗ್ಗೆ 6 ಗಂಟೆಗೆ ಪಂಜಿನ ವಾಲಗ ನಡೆಯಿತು ಬೆಳಿಗ್ಗೆ 7-00 ಗಂಟೆಯಿಂದ 11-00 ಗಂಟೆಯ ವರೆಗೆ ಭಕ್ತಾದಿಗಳು ಹರಕೆಗಳಾದ ಜವಳ ತೆಗೆಸುವದು ಕಾಯಿ ತೂಕ ಅಕ್ಕಿ ತೂಕ ಬಾಳೆ ಹಣ್ಣಿನ ತೂಕ ದೀಡು ನಮಸ್ಕಾರ ಹಾಕುವದು ಇನ್ನೂ ಹಲವಾರು ಹರಕೆಗಳನ್ನು ತೀರಿಸುತ್ತಾ ದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ
ನಂತರ ಬೆಳಿಗ್ಗೆ : 11-00 ಗಂಟೆಯಿಂದ ಮಧ್ಯಾಹ್ನ : 2-00 ಗಂಟೆಯ ವರೆಗೆ ದೇವರ ವಿಶೇಷ ಪೂಜೆ ನೆರವೇರುವದು ದೇವರ ಚಾಕ್ರಿ ಮಾಡುವ ಕೋಲಕಾರ ವಂಶಸ್ಥರಿಂದ ದೇವರ ನೈವೇದ್ಯಕ್ಕೆ ಬಾನದ ಎಡೆ ಕೊಟ್ಟ ನಂತರ ಪೂಜೆ ನೆರವೇರುವಾಗ ಜೋಗಮ್ಮ ಅವರಿಂದ ದೇವರ ನಾಮ ಸ್ಮರಣೆಯ ಜೋಗತಿ ಪದಗಳು ಹೇಳುವರು ನಂತರ ಗುಡದಯ್ಯನ ವಾಲಗ ನೆರವೇರುವದಕ್ಕೆ ಕುಡಪಲಿ ವಂಶಸ್ಥರಿಂದ ನಿಶಾನೆ ಇಡಿದು ದೇವರನ್ನು ಸ್ವಾಗತಿಸುವರು ಭಟ್ಟಂಗಿ ವಂಶಸ್ಥರಿಂದ ತಾಯಿ ಚೌಡೇಶ್ವರಿ ದೇವಿ ಡೊಳ್ಳನ್ನು ಕಟ್ಟಿಕೊಂಡು ಡೊಳ್ಳಿನ ನಾದವನ್ನು ಬಿರುಸಾಗಿ ಬಾರಿಸುತ್ತಾ ಕುಣಿಯುತ್ತಾ ನಲಿಯುವರು ಜೋಗಮ್ಮ ತಾಯಿಯರಿಂದ ಪದಗಳ ಜೊತೆ ಚೌರಿಯನ್ನು ಹಾಕಿಸಿಕೊಳ್ಳುತ್ತಾ ಮುಂದೆ ಸಾಗುವದು ಚೀನಕಾಳಿಯನ್ನು ಉದುವೆದರೊಂದಿಗೆ ಬೀರಲಿಂಗೇಶ್ವರ ದೇವರನ್ನು ಗುಡದಯ್ಯನ ಕಟ್ಟೆಗೆ ಐದು ಮನೆತನದ ಪೂಜಾರ ಇವರೊಂದಿಗೆ ದೇವರನ್ನು ಡೊಳ್ಳಿನ ಮೆರವಣಿಗೆ ಮೂಲಕ ಕರೆತಂದು ಇವರ ಜೊತೆ ಗೂಡಿ ಕುರವತ್ತಿ ಬಸವೇಶ್ವರ ದೇವರ ವೇಷ ಧರಿಸಿ ಕುರುವತ್ತಿ ಬಸವೇಶ್ವರನ ಜೊತೆಗೆ ದೇವರ ಪೂಜಾರ ಇವರೊಂದಿಗೆ ಗುಡದಯ್ಯನ ಕಟ್ಟೆಗೆ ಭಕ್ತರ ಜೊತೆ ಆಗಮಿಸುವದು ನಂತರ ಭಕ್ತರೆಲ್ಲರೂ ಮಿಸಲಿಟ್ಟಿರುವ ಹಾಲು ಹಾಗೂ ಬಾಳೆ ಹಣ್ಣು ತುಪ್ಪವನ್ನು ಎರಡು ಪತ್ರೆಗೆ ಹಾಕಿ ಪೂಜೆ ನೆರವೇರಿಸಿ ಬಂದಂತ ಸದ್ಭಾಕ್ತರಿಗೆ ಹಂಚಲಾಗುವದು ನಂತರ ದೇವರನ್ನು ಗುಡಿದುಂಬಿಸಲಾಗುವದು
ಸಾಯಂಕಾಲ :-4-00 ಗಂಟೆಯಿಂದ 6-00 ಗಂಟೆಯ ವರೆಗೆ ಭಕ್ತದಿಗಳಿಂದ ಗ್ರಾಮಸ್ಥರಿಂದ ಎತ್ತಿನ ಮೆರವಣಿಗೆ ಬೆಲ್ಲದ ಬಡ್ಡಿ ಎತ್ತಿನ ಬಂಡ್ಡಿ ಕುರಿ ಬಂಡ್ಡಿಯನ್ನು ಅಲಗೆ ಡ್ರಮ್ ಸಟ್ ಹಾಗೂ ಭಜನೆಯ ಮೂಲಕ ವಿವಿಧ ರೀತಿಯ ವಾದ್ಯಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಿತು ಸಂಜೆ :- 6-00 ಗಂಟೆಗೆ (ಪ್ರಸಾದವನ್ನು ) ತಗೆದುಕೊಂಡು ನಂತರ ಭಕ್ತಾದಿಗಳು ದೇವರ ಆಶೀರ್ವಾದ ಪಡೆದುಕೊಂಡು ಭಕ್ತದಿಗಳನ್ನು ಭಂಡಾರದೊಂದಿಗೆ ಬೀಳ್ಕೊಡಲಾಯಿತು.

ಈ ಜಾತ್ರೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಸಕಲ ಸದ್ಭಕ್ತರಿಗೆ ಶ್ರೀ ಬೀರಲಿಂಗೇಶ್ವರ ದೇವರ ಕಮಿಟಿಯವರು ಹಾಗೂ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು ಹಾಗೂ ಕುಮಾರಪಟ್ಟಣ ಪೊಲೀಸ್ ಇಲಾಖೆಯವರು ಜಾತ್ರಾ ಬಂದೋಬಸ್ತ್ ಒಳ್ಳೆಯ ರೀತಿಯಲ್ಲಿ ನೆರವೇರಿಸಿದ್ದಕ್ಕೆ ಗ್ರಾಮದ ಬೀರಲಿಂಗೇಶ್ವರ ಕಮಿಟಿಯವರು ಗ್ರಾಮಸ್ಥರು ಕೃತಜ್ಞತೆಗಳನ್ನು ಸಲ್ಲಿಸಿದರು