ಶ್ರೀ ಗಜಲಕ್ಷ್ಮಿ ದೇವಿಯ 10ನೇ ವಾರ್ಷಿಕ ಜಾತ್ರೋತ್ಸವ.

ಇಂದು ಸವಣೂರು ಶ್ರೀ ಗಜಲಕ್ಷ್ಮಿ ದೇವಿಯ 10 ನೇ ವಾರ್ಷಿಕ ಜಾತ್ರೋತ್ಸವ

ಹಾವೇರಿ ಜಿಲ್ಲೆಯ : ಸವಣೂರು ಪಟ್ಟಣದ ಕೋರಿಪೇಟೆ ಓಣಿಯಲ್ಲಿರುವ, ಶ್ರೀ ಗಜಲಕ್ಷ್ಮಿ ದೇವಿಯ ವಾರ್ಷಿಕ ಸಂಪ್ರದಾಯದ, ಹತ್ತನೇ ವಾರ್ಷಿಕೋತ್ಸವದ ಮಹಾ ಜಾತ್ರೋತ್ಸವವು ಮಾರ್ಚ್ 31ರಂದು, ಮಂಗಳವಾರ ದಿವಸ ಅತೀ ವಿಜ್ರಮಣೆಯಿಂದ ಜರುಗಲಿದೆ. ಎಂದು ದೇವಸ್ಥಾನ ಭಕ್ತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳವಾರ ಮುಂಜಾನೆ 8 ಗಂಟೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂರ್ಣಕುಂಭ ಕಳಸಗಳ ಮೆರವಣಿಗೆ ನಡೆದು, ನಂತರ ಶ್ರೀ ಗಜಲಕ್ಷ್ಮಿ ದೇವಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ ಭಕ್ತಾದಿಗಳಿಂದ ಉಡಿ ತುಂಬುವುದು, ನಂತರ ಸಾರ್ವಜನಿಕ ಭಕ್ತರಿಗಾಗಿ ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಗಜಲಕ್ಷ್ಮಿ ದೇವಿ ಭಕ್ತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.