ದಾವೆಣಗೆರೆ : ಕೆರೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಮೂವರು ಮಹಿಳೆಯರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ದಾವಣಗರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಿಗ್ಗೇನಹಳ್ಳಿ ನಡೆದಿದೆ.
ದೀಪಾ(28) ದಿವ್ಯಾ (26) ಹಾಗೂ ಚಂದನಾ(19) ಮೃತರು ಎಂದು ತಿಳಿದು ಬಂದಿದೆ. 5 ಜನ ಮಹಿಳೆಯರು ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದು, ಬಟ್ಟೆ ತೊಳೆದ ನಂತರ ಮುಖ ತೊಳೆಯಲು ಹೋದಂತಹ ಸಂದರ್ಭದಲ್ಲಿ ದೀಪಾ ಎಂಬವರು ಕಾಲು ಜಾರಿ ಕರೆಗೆ ಬಿದ್ದಿದ್ದು, ರಕ್ಷಿಸಲು ಹೋದ ಇಬ್ಬರು ಮಹಿಳೆಯರು ನೀರಿನೊಳಕ್ಕೆ ಹೋಗಿದ್ದಾರೆ ಎನ್ನಲಾಗಿದೆ.
ಚನ್ನಗಿರಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ತಾಹಶೀಲ್ದಾರ್ ನಾಗರಾಜ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.
