ಇಂದಿನ ಯುವಕರು ಮೊಬೈಲ್ ಬಳಕೆಯಿಂದ ಕಾಲ ಹರಣ : ಗೀತಾ ತಿರುಮಲ
ವೀರಮಾರ್ಗ ನ್ಯೂಸ್ : ಹಾವೇರಿ : ಇಂದಿನ ಡಿಜಿಟಲ್ ಯುಗದಲ್ಲಿ ಜನಪದ ಕಲೆ ದುರುಮುರಿಗೇರ, ವೇಷಗಾರರು, ಕರಡಿ ಆಡಿಸುವರು ಕೌಲತ್ ತರುವರು ಗಂಗೆ ಗೌರಮ್ಮ ಅಂತ ಎರಡು ಗೊಂಬಿ ತೆಗೆದುಕೊಂಡು ಬರುವರು ಇವೆಲ್ಲವೂ ಇಂದಿನ ಯುಗದಲ್ಲಿ ಇವೇಲ್ಲವು ಮಾಯವಾಗುತ್ತವೆ ಇಂದಿನ ಯುವಕರು ಮೊಬೈಲ್ ಬಳಕೆಯಿಂದ ಕಾಲ ಹರಣ ಮಾಡುತ್ತಿದ್ದಾರೆ ಎಂದು ಹೇಳಿದರು
ಸವಣೂರ ಪಟ್ಟಣದಲ್ಲಿ ಇತ್ತಿಚೆಗೆ ದಾನೇಶ್ವರಿ ಮಹಿಳಾ ಸ್ವಸಹಾಯ ಸಂಘ ಮಾದಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಜಾನಪದ ಸಂಗೀತ ಕಾರ್ಯಕ್ರಮವನ್ನು ಸವಣೂರಿನ ತಿರುಮಲ ಏ ಎಸ್ ಐ ಪೊಲೀಸ್ ಇಲಾಖೆಯ ಗೀತಾ ತಿರುಮಲ ಅವರು ಉದ್ಘಾಟಿಸಿ ಮಾತನಾಡಿದರು.
ಜನಪದ ಕಲೆ ಎಂಬುದು ಅಭೂತಪೂರ್ವವಾಗಿದೆ ಅದನ್ನ ಉಳಿಸಿ ಬೆಳೆಸಲು ನಾವು ನೀವೆಲ್ಲರೂ ಪಣತೊಡಬೇಕು ಇಂಥ ಜನಪದ ಕಲಾವಿದರ ಜೊತೆ ಗೂಡಿ ನಾವು ನೀವು ಜನಪದ ಕಲೆ ಎಂಬುದನ್ನು ಉಳಿಸಬೇಕು ಅಂದಾಗ ಜನಪದ ಉಳಿಯುತ್ತದೆ ಹಿಂದಿನ ಜನಪದಕ್ಕೂ ಇಂದಿನ ಜಾನಪದಕ್ಕೆ ಬಹಳ ವ್ಯತ್ಯಾಸವಿದೆ ಆದ್ದರಿಂದ ಜನಪದ ಕಲೆ ಉಳಿಸಿ ಎಂದರು
ಈ ಸಂದರ್ಭದಲ್ಲಿ ಸುನಂದ ಚಿನ್ನಾಪುರ, ನಾಗಯ್ಯ ಹಿರೇಮಠ ನಿವೃತ್ತ ಶಿಕ್ಷಕರು ಮೇಳ್ಳಗಟ್ಟಿ, ಶಿವನಗೌಡ ಪಾಟೀಲ, ಸವಣೂರ ಎನ್ ಎಸ್, ದ್ಯಾಮನಗೌಡ್ರ್ ,ಎಸ್ಎಸ್ ಪಾಣೆಗಟ್ಟಿ ,ವಿನೋದ್ ಪತ್ತಾರ, ಶಂಭುಲಿಂಗ, ಸಿ ಎಸ್ ಪಾಟೀಲ ಮತ್ತಿತರರು ಇದ್ದರು.
ವರದಿ : H ಭಜಂತ್ರಿ. ಹಾವೇರಿ.