ಮಹಿಳಾ ದಿನಾಚರಣೆ 50 ಮಹಿಳೆಯರಿಗೆ ಕಿಟ್ಟ್.

ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ)

ವೀರಮಾರ್ಗ ನ್ಯೂಸ್ : ವಿಜಯಪುರ ವತಿಯಿಂದ ದಿನಾಂಕ 8/3/2026 ರಂದು ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶಿವಾನುಭವ ಮಂಟಪ ಕಾರ್ಯಾಲಯ,ಶ್ರೀ.ಸಿದ್ದೇಶ್ವರ ದೇವಸ್ಥಾನ, ಎಸ್.ಎಸ್.ರೋಡ,ವಿಜಯಪುರ ಇಲ್ಲಿ ಆಯೋಜಿಸಲಾಗಿತ್ತು.ಪರಮ ಪೂಜ್ಯ. ಕೈವಲ್ಯ ಮಾತಾಜಿ ,ಕ್ರಪಾಮಯಿ ಶಾರದಾ ಆಶ್ರಮ ಇವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ವಾಯವ್ಯ ಪದವೀಧರ ಮತಕ್ಷೇತ್ರದ ಪರಿಷತ್ ಸದಸ್ಯರಾದ ಸನ್ಮಾನ್ಯ ಹಣಮಂತ. ರುದ್ರಪ್ಪ. ನಿರಾಣಿಯವರು ಉದ್ಘಾಟಕರಾಗಿ ಆಗಮಿಸಿದ್ದರು.ಶ್ರೀಮತಿ.ಲತಾ.ಮ.ಬಿರಾದಾರ.ರಾಜ್ಯಾಧ್ಯಕ್ಷೆ,ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ವಿಜಯಪುರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶ್ರೀಮತಿ.ಭಾರತಿ.ಪಾಟೀಲ, ಗೌರವಾಧ್ಯಕ್ಷರು,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಇವರು ಮಹಿಳೆಯರ ಸರ್ವಾಂಗೀಣ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು.ಶ್ರೀಮತಿ.ವಿದ್ಯಾವತಿ.ಅಂಕಲಗಿ,ವಕೀಲರು,ಕಾಂಗ್ರೆಸ ಮುಖಂಡರು ಇವರು ಕಾನೂನು ಸಲಹೆ ನೀಡಿದರು.ಶ್ರೀಮತಿ.ಆರತಿ.ಕಿತ್ತೂರ,ಇವರು ಆರೋಗ್ಯ ಸಲಹೆಗಾರರಾಗಿ ಆಗಮಿಸಿದ್ದರು.ವಿವಿಧ ಸಂಘದ ಪದಾಧಿಕಾರಿಗಳು ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದರು.ಕಾರ್ಯಕ್ರಮ ವನ್ನು ಉದ್ಘಾಟಿಸಿದ ಸನ್ಮಾನ್ಯ ಹಣಮಂತ ರುದ್ರಪ್ಪ. ನಿರಾಣಿಯವರುಮಹಿಳೆಯರಿಗೆ ಅನುಕಂಪ ಬೇಡ ಅವಕಾಶ ಕೊಟ್ಟರೆ ಪುರುಷರನ್ನು ಮೀರಿಸುವಸ್ಟು ಸಾಧನೆಯನ್ನು ಮಾಡುತ್ತಾರೆ ಎಂದು ಸುಧಾ ಮೂರ್ತಿಯವರ ಊದಾಹರಣೆ ನೀಡಿದರು,ಆಗಿ ಹೋದ ವೀರ ವನಿತೆಯರ ಶೌರ್ಯ ಕೊಂಡಾಡಿದ್ದಾರೆ.ಮಹಿಳೆಯರಿಗೆ ಸ್ವಾವಲಂಬಿಯಾಗಿ ಸರ್ಕಾರದ ಯೋಜನೆಯ ಕುರಿತು ಹೇಳಿ ಸರಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಲು ಮಾರ್ಮಿಕವಾಗಿ ಉದ್ಘಾಟಕರ ನುಡಿ ನುಡಿದರು.ಭಾರತಿ.ಪಾಟೀಲರು ಒಬ್ಬ ಮಹಿಳೆ ಇನ್ನೊರ್ವ ಮಹಿಳೆಗೆ ಸಹಾಯ ಸಹಕಾರ ನೀಡಿದರೆ ಗೌರವದಿಂದ ನೋಡಿದರೆ ನಿಜವಾದ ಸಬಲೀಕರಣ ಎಂದರು.ಸಂಘದ ರಾಜ್ಯಾಧ್ಯಕ್ಷರಾದ ಶ್ರೀಮತಿ.ಲತಾ.ಮ.ಬಿರಾದಾರ ಅವರನ್ನು ತಮ್ಮ ಕವನದ ಮೂಲಕ ಸಬಲೆ ಸಿಂಹಿಣಿ ಗಟ್ಟಿಗಿತ್ತಿ ಎಂದರು.ಮಹಿಳೆಯರ ಸರ್ವಾಂಗೀಣ ವಿಕಾಸಕ್ಕಿರುವ ಕಾನೂನಿನ ತಿಳುವಳಿಕೆ ನೀಡಿದರು.ಕೊಡಗು ಜಿಲ್ಲೆಯ ಸಂಘದ ಪದಾಧಿಕಾರಿ ರಾಜ್ಯ ನಿರೂಪಕಿ ಶ್ರೀಮತಿ.ಅಲಿಮಾ ರವರು ನಿರೂಪಣೆ ಮಾಡಿದರು,ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ.ಸರ್ವಮಂಗಲಾ.ಕಡಿವಾಲ ಇವರು ಸ್ವಾಗತಿಸಿದರು,ಸನ್ಮಾನ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯದರ್ಶಿ ಶ್ರೀಮತಿ.ಜೋತಿ.ಯಲಗೊಂಡ ಹಾಗೂ ಸುಜಾತಾ. ಗುರುನಾಯಕ ಮಾಡಿದರು.ಕಾರ್ಯಾದ್ಯಕ್ಷರಾದ ಶ್ರೀಮತಿ. ಸುಜಾತಾ ಪ್ರಾಸ್ತಾವಿಕ ಭಾಷಣ ಮಾಡಿದರು.ನಿರ್ದೇಶಕರಾದ ಶ್ರೀಮತಿ ರಾಜೇಶ್ವರಿ ಹಿಟ್ಟಿಳ್ಳಿ ಇವರು ವಂದಿಸಿದರು.ತಮ್ಮ ಅಧ್ಯಕ್ಷತೆಯ ನುಡಿಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀಮತಿ.ಲತಾ.ಮ.ಬಿರಾದಾರ ಇವರು ರಾಜ್ಯದಲ್ಲಿನ ಮಹಿಳಾ ಸರಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ವಿಜಯಪುರ ಇದು ವಿಜಯಪುರ ಜಿಲ್ಲೆಯಲ್ಲಿ ,ರಾಜ್ಯ ದಲ್ಲಿ,ರಾಷ್ಟ್ರದಲ್ಲಿ ಪ್ರಪ್ರಥಮವಾಗಿ ನೊಂದಾಯಿತ ಸಂಘ.ಈ ಸಂಘದ ನಿರ್ಮಾತ್ರ ಶ್ರೀಮತಿ.ಲತಾ.ಮ.ಬಿರಾದಾರ. ಇವರು ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸುಮಾರು ಏಳು ವರ್ಷದಿಂದ ಸರ್ಕಾರಕ್ಕೆ ಮಹಿಳಾ ನೌಕರರ ಜ್ವಲಂತ ಸಮಸ್ಯೆಗಳನ್ನ ಮನವರಿಕೆ ಮಾಡಿ ಕೊಟ್ಟಿದ್ದಾರೆ.ಅದರಂತೆ ಕೆಲವು ಸಮಸ್ಯೆಗಳ ಪರಿಹಾರ ಆಗಿದೆ.ಅದರಲ್ಲಿ
ಋತುಚಕ್ರ ರಜೆ ಕೂಡ ಒಂದು ಎಂದರು.

ಈ ಕೆಳಗಿನ ಕೆಲವು ಸಮಸ್ಯೆಗಳನ್ನ ಸರಕಾರಕ್ಕೆ ಹಕ್ಕೊತ್ತಾಯ ಮಾಡಿದರು.ಗರ್ಭಿಣಿಯರಿಗೆ ಪ್ರತಿ ತಿಂಗಳು ತಪಾಸಣೆಗೆ ಒಂದು ವಿಶೇಷ ಸಾಂದರ್ಭಿಕ ರಜೆ ನೀಡುವ ವ್ಯವಸ್ಥೆ ಕಲ್ಪಿಸಬೇಕು.ಗರ್ಭಪಾತವಾದಾಗ ಒಂದು ತಿಂಗಳ ಮಾತ್ರತ್ವ ರಜೆ ಕಲ್ಪಿಸಬೇಕು.ಮಂಡಿ ಶಸ್ತ್ರ ಚಿಕಿತ್ಸೆ,ಗರ್ಭಾಷಯ ಶಸ್ತ್ರ ಚಿಕಿತ್ಸೆ ಗಳು ಉಚಿತ ಯೋಜನೆಗೆ ಒಳಪಡಬೇಕು. ಹಾಲುಣಿಸುವ ತಾಯಂದಿರಿಗೆ ಈಗಿರುವ ಸಮಯದ ಸಡಿಲಿಕೆಯು ಒಂದುವರೆ ವರ್ಷದಿಂದ ಮಗು 2 ವರ್ಷ ಆಗುವವರೆಗೆ ಆಗಬೇಕು.ಇನ್ನು ಶಿಕ್ಷಕಿಯರ ವರ್ಗಾವಣೆಯಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿರುವ ವಿಧವೆಯರಿಗೆ ಆದ್ಯತೆಗೆ ಪರಿಗಣಿಸುತ್ತಿಲ್ಲ.ಮಕ್ಕಳಿಗೆ ಎಷ್ಟು ವರ್ಷವಾದರೂ ಆದ್ಯತೆಗೆ ಪರಿಗಣಿಸಬೇಕು.ರಾಜ್ಯ, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸರಕಾರಿ ಮಹಿಳಾ ನೌಕರರ ಭವನ ನಿರ್ಮಾಣ ಕಾರ್ಯ ಆಗಬೇಕು.ಮಹಿಳೆಯರ ಸರ್ವಾಂಗೀಣ ರಕ್ಷಣೆಗೆ ವಿಶೇಷ ಕಾನೂನು ಜಾರಿಗೊಳಿಸಬೇಕು.ಆದ್ದರಿಂದ ಮಹಿಳೆಗೆ ಅನುಕಂಪ ಬೇಡ ,ಅವಕಾಶಕೊಡಿ ಎಂದರು.ಸ್ವಂತಕ್ಕಲ್ಲ, ಸಮಾಜಕ್ಕೆ ಎಲ್ಲ, ಎಂಬ ತತ್ವದಡಿ ಸದ್ದಿಲ್ಲದೇ, ಸುದ್ದಿ ಮಾಡದೆ ಸುಮಾರು ಏಳು ವರ್ಷಗಳಿಂದ ಸರಕಾರಿ ಮಹಿಳಾ ನೌಕರರ ಸೇವೆಯಲ್ಲಿ ತೊಡಗಿರುವ ಏಕೈಕ ಸಂಘವೆಂದರೆ ಅದು ಶ್ರೀಮತಿ.ಲತಾ.ಮ.ಬಿರಾದಾರ ಇವರು ಸ್ಥಾಪಿಸಿದ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ (ರಿ) ವಿಜಯಪುರ.ಮಹಿಳಾ ನೌಕರರಿಗೆ ನೀವು ಸಂಘಟಿತರಾಗಿ ನಾನು ನಿಮಗೆ ಸಂಘಶಕ್ತಿಯನ್ನು ಕೊಟ್ಟಿದ್ದೇನೆ ಎಂದು ಎಲ್ಲರಿಗೂ ಸಂಘಟಿತರಾಗಲು ಕರೆ ನೀಡಿದರು.ಕಾರ್ಯಕ್ರಮದಲ್ಲಿ 100 ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸರಕಾರಿ ಮಹಿಳಾ ನೌಕರರಿಗೆ ವೀರ ರಾಣಿ ಕಿತ್ತೂರು ಚೆನ್ನಮ್ಮ ಪ್ರಥಮ ಮಹಿಳಾ ಸಾಧನಾ, ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.50 ಆದರ್ಶ ದಂಪತಿಗಳಿಗೆ ಗೌರವ ಸನ್ಮಾನ ಮಾಡಲಾಯಿತು.50 ನಿವೃತ್ತ ಮಹಿಳಾ ಸರಕಾರಿ ನೌಕರರಿಗೆ ಗೌರವ ಸನ್ಮಾನ ಮಾಡಲಾಯಿತು.ಸುಮಾರು100 ಜನ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳಿಗೆ, 2025-26 ನೇ ಸಾಲಿನಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಅವರ ಪೂರ್ವಭಾವಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಕಾರ್ಯಕ್ರಮದ ಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ. ಭಾರತಿ.ಬಿರಾದಾರ,ಖಜಾಂಚಿ ಯಾದ ಶ್ರೀಮತಿ.ಪಾರ್ವತಿ.ಪೂಜಾರಿ ರವರು ಹಾಜರಿದ್ದರು.