ಅಕ್ರಮ ಮರಳು ಗಣಿಗಾರಿಕೆಗೆ ಕ್ರಮ ಯಾವಾಗ,,,?

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾವೇರಿ ಜಿಲ್ಲಾ ಅಂದ್ರೆ ಖುಷಿ ಪಡುವಂತಹ ಜಿಲ್ಲಾ, ಸಂತರು ಶರಣರು, ಸಾಹಿತಿಗಳು ಸನ್ಯಾಸಿಗಳು,ತಪಸ್ವಿಗಳನ್ನ ಕಂಡ ನಾಡು ಅಥವಾ ಜಿಲ್ಲೆ ಅಂದ್ರೆ ಅದು ಹಾವೇರಿ.

ಆದರೆ ಆ ಜಿಲ್ಲೆಗೆ ಭಗವಂತನ ಕೋಡಿಗೆ ಹೇಗಿದೆ ಅಂದರೆ, ಹೆಸರಾಂತ ಜ್ಞಾನಿಗಳು ವಿಜ್ಞಾನಿಗಳು ಕೂಡಾ ಇದ್ದಾರೆ ಅಂದರೆ ತಪ್ಪಾಗಲಾರದು.

ಅದೇ ರೀತಿಯಾಗಿ ತುಂಗಭದ್ರಾ ನದಿ ಗಂಗಾದೇವಿ, ಹಾವೇರಿ ಜಿಲ್ಲೆಯನ್ನು ಸುತ್ತುವರಿದಿದ್ದಾಳೆ.

ರಾಣೇಬೆನ್ನೂರ ತಾಲೂಕು ಹೆಚ್ಚು ಹಳ್ಳಿಗಳು ತುಂಗಭದ್ರಾ ನದಿ ತೀರದಲ್ಲಿ ಇವೆ.ಆದರೆ ದುರ್ದೈವ ಏನೂ ಅಂದರೆ, ಅಕ್ರಮ ಮರಳು ದಂದೆಕೋರರ ಆರ್ಭಟಕ್ಕೆ ತುಂಗಭದ್ರೆ ನಲುಗಿದ್ದಾಳೆ ಎನ್ನುವ ಮಾತು ಪದೇ ಪದೇ ಕೇಳುತ್ತಲೇ ಇದೆ.
ಕಾನೂನು ರೀತಿ ಮರಳು ಸಾಗಾಟ ಮಾಡುವದನ್ನೇ ಮರೆತು, ಸರ್ಕಾರದ ಖಜಾನೆ ಬೀಗ ಹಾಕಿ, ಚುನಾಯಿತ ಜನಪ್ರತಿನಿದಿನಗಳ ಎಡಗೈ-ಬಲಗೈ, ಚಮುಚ್ ಗಳು ತಮ್ಮ ಖಜಾನೆ ಭರ್ತಿ ಮಾಡಿಕೊಂಡು, ಹಣದ ನೆಶೆ ನೆತ್ತಿಗೆ ಏರಿಸಿಕೊಂಡು, ಸತತವಾಗಿ ಹತ್ತು ವರ್ಷಗಳಿಂದ, ಸಮಾಜದ ಬಡಮಕ್ಕಳಿಗೆ ದುಡ್ಡಿನ ಆಸೆ ತೋರಿಸಿ ಹಾಳುಮಾಡಿದ್ದಲ್ಲದೆ.
ಸುದ್ದಿ ಮಾಡುವ ವರದಿಗಾರರ ಮೇಲೆ ಹಲ್ಲೆ ಸುಳ್ಳು ಕೇಸು ಇನ್ನೂ ಅನೇಕ ರೀತಿಯಿಂದ ತೊಂದರೆ ಕೊಡುತ್ತಲೇ ಇದ್ದಾರೆ.

ಕೆಲವೊಂದು ಅಕ್ರಮ ಮಾಫಿಯಾಗಳಿಗೆ ಕೆಲವೊಂದು ಇಲಾಖೆಯವರೇ ಮಾಮ ಕೆಲಸ ಮಾಡುತ್ತಿದ್ದಾರೆ ಅನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಪದೇ ಪದೇ ಕೇಳುತ್ತಲೇ ಇದೆ….!

ಇಲ್ಲಿ ಮಾಫಿಯಾ ಒಂದೇ ರೀತಿ ಅಲ್ಲವೇಅಲ್ಲಾ, BPL ಕಾರ್ಡ ದಾರರ ಅಕ್ಕಿ ಓಸಿ ಇಸ್ಪೀಟ್ ಜೊತೆಗೆ ಅಕ್ರಮ ಮರಳು ದಂಧೆ, ಇವುಗಳ ಯಾರ ಗಮನಕ್ಕೆ ಬಾರದೆ ನೆಡೆಯಲು ಸಾಧ್ಯವೇ,,,,?

ಆದರೆ ವರದಿಗಾರರು ಹೋರಾಟಗಾರರ ಮೇಲೆ ಸತತವಾಗಿ ದಾಳಿ ಹಲ್ಲೆ ಸುಳ್ಳು ಕೇಸ್ ದಾಖಲು ಮಾಡುವುದು ನೆಡೆಯುತ್ತಲೇ ಇದೆ.

ಈ ಹಿಂದೆ ಅದೇ ಅಕ್ರಮ ಮರಳು ದಂಧೆಕೋರರು ಲಲಿತಾ ಬಿ ಪಾಟೀಲ್ ಎನ್ನುವ ಮಹಿಳಾ ಪತ್ರಕರ್ತೆಯ ಮೇಲೆ ಸುಳ್ಳು ಕೇಸು ದಾಖಲು ಮಾಡಿ, ತದನಂತರ ದಿಟ್ಟ ಧೈರ್ಯ ಹೆಣ್ಣುಮಗಳನ್ನ ವಾಹನ ಅಪಘಾತ ಮಾಡುವ ಮೂಲಕ ಪ್ರಾಣವನ್ನೇ ತೆಗೆಯುವ ಹುನ್ನಾರ ಮಾಡಿದ್ದರು ಆದರೆ ಬದುಕಿ ಬಂದಿದ್ದೆ ಪವಾಡ.
ಅಷ್ಟೇಕ್ಕೆ ಸುಮ್ಮನಾಗದ ಅಕ್ರಮ ಮರಳು ಚೋರರು, ಆಂಜನೇಯ ಐರಣಿ ಸಮಾಜ ಸೇವೆ ಮಾಡುತ್ತಾ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ರಮ ಹೇಗೆ ಮಾಡಿತ್ತಾರೆ ಎಂಬುವ ಮಾಹಿತಿಯನ್ನು ಕಲೆ ಹಾಕಿ ಇಲಾಖೆಯವರೆಗಿ ಮಾಹಿತಿ ನೀಡಿ ಅಕ್ರಮ ಮರಳು ಚೋರರ್ ವಿರುದ್ಧ ಕೇಸು ಮಾಡಿಸಿ ದಂಡ ಹಾಕೇಸುತ್ತ ಬಂದ್ ಸಮಾಜಸೇವಕನ ವಿರುದ್ಧ ಪಿತೂರಿ ಮಾಡಿ ಸುಳ್ಳುಕೇಸು ದಾಖಲು ಮಾಡಿದ್ದಾರೆ. ಇನ್ನೂ
ಸುರೇಂದ್ರ ಜ್ಯೋತಿಯವರು ಹೆಸರಾಂತ ಮಾಹಿತಿ ಹಕ್ಕು ಹೋರಾಟಗಾರರ ಅವರು ಅವರಮೇಲೆ ಕೂಡಾ ಸುಳ್ಳು ಕೇಸು ದಾಖಲು ಮಾಡಿ ಮಾರಣವಂತಿಕವಾಗಿ ಹಲ್ಲೆ ಮಾಡಿದ್ದೂ ಇದೆ,ಹೊರ ಜಿಲ್ಲೆಯಿಂದ ಬಂದ ಅಕ್ರಮ ಮರಳು ದಂಧೆಕೋರರು ಇದೆಲ್ಲಾ ಮಾಡಲು ಒಂದು ಹೆಜ್ಜೆ ಮುಂದೆ ಇಡುತ್ತಾರೆ. ಕೊಟ್ರೇಶ್ ಉದಗಟ್ಟಿ ಇವರ ಮೇಲೆಯೂ ಕೂಡ ಹಲ್ಲೇ ಆಯಿತು, ದೀಪಾವಳಿ ಎನ್ನುವ ವರದಿಗಾರರನ್ನು ಅವರ ಮೇಲೆ ಕೂಡಾ ಹಲ್ಲೆ ಮಾಡಿ ರಾಜಿ ಪಂಚಾಯತಿ ಮಾಡಿ ಕಳಿಸಿದ್ದರು ಅದಕ್ಕೂ ಕಾರಣ ಇದೆ ಕೆಲವು ಪತ್ರಿಕೆಯ ಹೆಸರಲ್ಲಿ ಓಸಿ ಇಸ್ಪೀಟ್ ಅಕ್ರಮ ಮರಳು ಸರಕಾರಿ ಕೆಲಸದಲ್ಲಿ ಇರುವ ಮೇಲಧಿಕಾರಿಗಳಿಗೆ ಬೇಕು ಬೇಡ ಗಮನಿಸಿ ಸಪ್ಲೈ (ಸಾಗಾಟ ) ಮಾಡುವದು ಈಗಾಗಿ ನಿಷ್ಠಾವಂತ ವರದಿಗಾರರಿಗೆ ಏಟು ಬೀಳುತ್ತಲೇ ಇದೆ,ಸತತವಾಗಿ ಹಲ್ಲೆ ಮಾಡುತ್ತಲೇ ಬಂದಿದ್ದಾರೆ. ಅಷ್ಟಕ್ಕೇ ಬಿಡದ ಅಲ್ಕಾ ಗಳು, ಪಾಸು ಒಂದೇ ಮರಳಿನ ಲೋಡು 3-4 ಇದು ಲೀಗಲ್ ಇವರ ಲೇಖಕ್ಕೆ.

ಹನುಮಂತಪ್ಪ ಕರೂರ್ ನಾಯಕನ ನಡುಗೆ ವಾರ ಪತ್ರಿಕೆಯ ಸಂಪಾದಕರು, ಇವರ ಮೇಲೆ ಅಲ್ಲೆಯ ಜೊತೆಗೆ ಸುಳ್ಳು ಕೇಸು ದಾಖಲು ಮಾಡಿದರು, ಅದೇ ರೀತಿ ತಮ್ಮ ಕಳ್ಳ ದಂಧೆ ಮುಂದುವರಿಸಿದ ಲಜ್ಜೆಗೆಟ್ಟ ಮರಳು ಕಳ್ಳರು, ಅವರ ಪರಾಕ್ರಮ ಗಧೆ ಎತ್ತಿ ತೋರಿಸಿದ್ದಾರೆ, ರಾಣೇಬೆನ್ನೂರ ಟ್ರಾಫಿಕ್ ಪಿಎಸ್ಐ ಕೃಷ್ಣಪ್ಪ ಅವರಿಗೆ ಕೆಲವು ಫೋನ್ ಮುಕಾಂತರ ಬಂದ ಮಾಹಿತಿಯ ಮೇರಿಗೆ ಬೆಳಿಗ್ಗೆ 10-00 ಘಂಟೆಗೆ ಪರವಾನಿಗೆ ಪಡೆದು ಸಂಜೆ 7-00 ಯ ವರೆಗೂ ಮರಳು ಸಾಗಾಟ ಮಾಡುವುದು ಸುದ್ದಿ ಬಂದ ನಂತರ ಅನುಮಾನಗೊಂಡು ಮರಳಿನ ವಾಹನವನ್ನು ಪರಿಶೀಲನೆ ನಡೆಸಿದ್ದಾರೆ,
ಅದೇ ಸಮಯಕ್ಕೆ ಹಾಯ್ ಬೆನ್ನೂರ್ ವಾರ ಪತ್ರಿಕೆಯ ಉಪಸಂಪಾದಕರು ತಮ್ಮ ಕೆಲಸದ ನಿಮಿತ್ಯ ರಸ್ತೆಯಲ್ಲಿ ಹೋಗುವಾಗ 60-ರಿಂದ 90 ಜನ ನಿಂತಿರುವುದು ನೋಡಿ ಏನಾಗಿದೆ ಎಂದು ನೋಡಲು ತೆರಳಿದ ವಾರದಿಗಾರರಿಗೆ ವಿಷಯ ಗೊತ್ತಾಗಿದೆ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಮಾತನಾಡಿಸುತ್ತ ವಿಡಿಯೋ ಮಾಡಲು ಮುಂದಾಗಿದ್ದಾರೆ, ಅವರನ್ನು ನೀನು ಯಾರು,,? ಯಾಕೆ ವಿಡಿಯೋ ಮಾಡುತ್ತೀಯಾ,,? ಎಂದು ಪೋಲಿಸ್ ಅಧಿಕಾರಿಗಳ ಎದುರೇ,,, ವರದಿಗಾರರ ವಾಹನ ಫೋನ್ ಕಸಿದು ಕೊಂಡು ಹಲ್ಲೆ ಮಾಡಿದ್ದಾರೆ, ಇನ್ನೂ ಯಾವ ಯುಗದಲ್ಲಿ ಇದ್ದೇವೆ ನಾವು ಬುದ್ಧ-ಬಸವ-ಅಂಬೇಡ್ಕರ್ ನಾಡಿನಲ್ಲಿ ಇಂತ ನೀಚರ ಹಟ್ಟಹಾಸಕ್ಕೆ ನೀಲಗುತ್ತಿರುವುದು ನಿಜವೇ,,,?

ಅಷ್ಟಕ್ಕೂ ಬಿಡದೆ ಅಕ್ರಮ ಮರಳು ರಾಕ್ಷಸರು ವಿಜಯಲಕ್ಷ್ಮಿ ಶಿರಬೂರ ವಿಜಯ್ ಟೈಮ್ಸ್ ನ್ಯೂಸ್ ಚಾನಲ್ ನಿರ್ದೇಶಕರು ಹಾವೇರಿ ಜಿಲ್ಲಾಗೆ ಅಕ್ರಮ ಒಸಿ 20-30 ಕೋಟಿ ಗೋಡಮನಲ್ಲಿ ರಾಜಾರೋಷವಾಗಿ ಇಸ್ಪೀಟ್ ದಂಧೆ ನಡೆಯತಿತ್ತು, ಆ ವಿಚಾರವಾಗಿ ಸುದ್ದಿಮಾಡಲು ಬಂದಾಗ ಗಲಾಟೆ ಮಾಡಿ ವರದಿಗಾರರು ಮೇಲೆ ಹಲ್ಲೆ ಆಗಿತ್ತು, ತದನಂತರ ಅಕ್ರಮ ಮರಳು ದಂಧೆ ಕೋರರು ಹಾಡಹಗಲೇ ಅಕ್ರಮ ಮರಳು ಸಾಗಾಟ ಮಾಡುವದು ವಿಡಿಯೋ ಚಿತ್ರೀಸಲು ಹೋದಾಗ ಅಕ್ರಮ ಮರಳು ದಂಧೆಕೋರರು ತಡೆಯಲು ಮುಂದಾಗಿದ್ದಾರೆ ದಿಟ್ಟ ಮಹಿಳೆ ಯಾವದಕ್ಕೂ ಬಗ್ಗದೆ ಹೆದರದೆ ನನ್ನ ಮೇಲೆ ವಾಹನ ಹತ್ತಿಸಿಕೊಂಡು ಹೋಗಿ ಕರ್ನಾಟಕ ರಾಜ್ಯವೇ ನೋಡಲಿ ಎಂದು ಖಡಕ್ಕಾಗಿ ನಿಂತ ಮೇಲೆ ವಾಹನದಲ್ಲಿರುವ ಮರಳನ್ನು ವಾಪಸ್ ನದಿ ಪಾತ್ರದಲ್ಲಿ ಸುರವಿ ಕಾಲಿ ವಾಹನವನ್ನು ಎತ್ತಿಕೊಂಡ ಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು…

ಕಣ್ಣಿದ್ದು ಕುರುಡರಾದರೆ ಗುತ್ತಲ್ ಪಿಎಸ್ಐ ಬಸನಗೌಡ ಪಾಟೀಲ್ ಮನೆಮನೆಗೂ ಪೊಲೀಸ್ ಎನ್ನುವದನ್ನ ಸರ್ಕಾರ ಆದೇಶ ಮಾಡಿ ಹಳ್ಳಿಹಳ್ಳಿಯಲ್ಲಿ ಮನೆಮನೆಗೂ ಭೇಟಿ ನೀಡುತ್ತಾರೆ, ಪೋಲಿಸ್ ಕಾನ್ಸ್ಟೇಬಲ್ ಗಳು ಹಳ್ಳಿಗಳಿಗೆ ಹೋದಾಗಲೇ ಮಾಹಿತಿ ಕಲೆಹಾಕಿ ಬಂದ ತಕ್ಷಣ ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡುವದನ್ನ ಬಿಟ್ಟು ಮುಚ್ಚಿಟ್ಟಿದ್ದಾದರೂ ಏತಕ್ಕೆ,,,?

ಸತತವಾಗಿ ಪ್ರತ್ಯಪುರ ಕೋಟಿಹಾಳ ಮುದೇನೂರು ನಲವಾಗಿಲು ನದಿಹರಳಹಳ್ಳಿ ಐರಣಿ ಹಿರೇಬಿದ್ರಿ ಸೋಮ್ಲಾಪುರ ಕೋಣನತಂಬಿಗೆ ಕುದ್ರಿಹಾಳ ಹರನಗಿರಿ ಚಂದಾಪುರ ಚೌಡದಾನಪುರ ಚಿಕ್ ಕುರುವತ್ತಿ ಗುತ್ತಲಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಂಚಾರಗಟ್ಟಿ ಚಿಕ್ಕರಳಹಳ್ಳಿ ಹಾವನೂರ್ ಬೆಳವಗಿ-ಗಳಗನಾಥ್ ಮೇವುಂಡಿ ತರದಹಳ್ಳಿ ಹುಳ್ಯಾಳ್. ಇಷ್ಟು ಗ್ರಾಮದಲ್ಲಿ ಸತತವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಲೇ ಇರುತ್ತದೆ ಎನ್ನುವ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳು ಬರುತ್ತಿದೆ.

ಬಡಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ ಹರನಗಿರಿ ಗ್ರಾಮದ ಹತ್ತಿರಾ ರಾತ್ರಿ ಸುಮಾರ್ 2-30 ಸಮಯಕ್ಕೆ ಮರಳು ತುಂಬಿದ 12 ಗಾಲಿಯ ಟಿಪ್ಪರ್ ಲಾರಿ ಪಲ್ಟಿ ಆಗಿ ಆ ವಾಹನದಲ್ಲಿ ಇದ್ದ ಡ್ರೈವರ್ ಆ ಸ್ಥಳದಲ್ಲೇ ಸಾವನ್ನಪ್ಪಿದ್ದನು ಆದರೆ ಯಾರು ಗಮನಕ್ಕ ಬಾರದೆ FIR ಮಾಡಿ ಮುಚ್ಚಿ ಹಾಕುವ ವ್ಯವಸ್ಥೆವನ್ನ ಮಾಡಿದ್ದಾರೆ.

ಆದರೆ ರಾತ್ರಿ ಅಕ್ರಮ ಮರಳು ಸಾಗಾಟ ಮಾಡಲು ಪರವಾನಿಗೆ ಕೊಟ್ಟವರು ಯಾರು ? ಮೊದಲು ಇದು ಸೂಕ್ತ ತನಿಕೆಯಾಗಿ ಲಾರಿಯ ಮಾಲೀಕನ ಮೇಲೆ ಕ್ರಮ ಕೈಗೊಳ್ಳಬೇಕಿತ್ತು , ಆದರೆ ಯಾವುದೇ ರೀತಿಯ ಕ್ರಮ ಆಗದೇ ಉಳಿದಿರುವುದು ಸಾರ್ವಜನಿಕ ವಲಯದಲ್ಲಿ ಪಿಸು ಪಿಸು ಮಾತಿನ ಜೊತೆಗೆ ಅನುಮಾನಕ್ಕೆ ಎಡಿ ಮಾಡಿಕೊಟ್ಟಿದೆ.

ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಜಿಲ್ಲೆಯ ಟಾಸ್ಕ್ಫೋರ್ಸ್ ಸಮಿತಿಯ ಕಮಿಟಿ…?

ಸರಕಾರದ ಕಾನೂನುನ್ನ ಸಂಪೂರ್ಣ ಗಾಳಿಗೆ ತೋರಿದ ಇಲಾಖೆಗಳಿಗೆ ನಿದ್ದೆಯಿಂದ ಎಚ್ಚರ ಆಗುವುದು ಯಾವಾಗ,,,? ಅನ್ನುವ ಪ್ರಶ್ನೆ ಸಾರ್ವಜನಿಕರದ್ದು.

ಯಾರ ಮೇಲೆ ಕ್ರಮ,,,? ಯಾವ ದಿನ ಕ್ರಮ,,,? ಮುಂದಿನ ಸುದ್ದಿ ನಿಮ್ಮ ಸುತ್ತ ನಡೆಯುವ ಅಕ್ರಮ ವರದಿ ಮತ್ತೆ ಸಿಗೋಣ ವೀಕ್ಷಕರೆ ನನ್ನ ಪ್ರೀತಿಯ ಓದುಗರೆ ನಮಸ್ಕಾರ್.