ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲ್ಲೂಕಿನ : ಕುರಬಗೇರಿ ಓಣಿ ಕಾರ್ಯಕ್ಷೇತ್ರದ ಉಮಾ ಮಡಿವಾಳರ ಇವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲೆಯ ಗೌರವಾನ್ವಿತ ನಿರ್ದೇಶಕರು ಶ್ರೀಯುತ ಶಿವರಾಯ ಪ್ರಭು ಸರ್ ಅವರು ಮನೆ ಹಸ್ತಾಂತರ ಮಾಡಿ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ತಿಂಗಳು 1000/ ಮಾಶಾಸನ, ವಾತ್ಸಲ್ಯ ಕಿಟ್ ದಿನ ಬಳಕೆಯ ಸಾಮಗ್ರಿ, ವಾತ್ಸಲ್ಯ ವಿದ್ಯಾ ನಿಧಿ, ವಾತ್ಸಲ್ಯ ಮನೆ ಹೀಗೆ ನಿರ್ಗತಿಕರಿಗೆ ಬೇಕಾದ ಸೌಲಭ್ಯಗಳನ್ನು ನೀಡಿ ನೆಮ್ಮದಿಯ ಜೀವನ ನಡೆಸಲು ಮಾತೃಶ್ರೀ ಹೇಮಾವತಿ ಅಮ್ಮನವರ ಆಶೆಯದಂತೆ ನೀಡಲಾಗುತ್ತಿದೆ. ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜೆಡಿಸ್ ಮುಖಂಡರಾದ ಮಂಜುನಾಥ ಗೌಡಶಿವಣ್ಣನವರ ಅವರು ಗ್ರಾಮಭಿವೃದ್ಧಿ ಯೋಜನೆ ಯೋಜನೆಯು ಬಡ ಜನರಿಗೆ ತುಂಬಾ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿಗಳು ಶ್ರೀಮತಿ ಸುಧಾ ಮೇಡಂ, ತಾಲೂಕಿನ ಯೋಜನಾಧಿಕಾರಿಗಳು ಮಂಜುನಾಥ ಗೌಡ, ಜನಜಾಗ್ರತಿ ಯೋಜನಾಧಿಕಾರಿಗಳು ಭಾಸ್ಕರ ಸರ್, ವಾತ್ಸಲ್ಯ ಮನೆ ಕಟ್ಟಡಕ್ಕೆ ಜಾಗ ನೀಡಿದ ದಾನಿಗಳು ಗಣೇಶ ಕೊಪ್ಪದ, ಜ್ಞಾನ ವಿಕಾಸ ಸಮನ್ವಯಧಿಕಾರಿ ಶೋಭಾ, ಸೇವಾಪ್ರತಿನಿಧಿ ಮಂಜುಳಾ, ಊರಿನ ಗಣ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು.