ಕೃಷಿ ಸಹಕಾರ ಸಂಘದ ನಿರ್ದೇಶಕರ ಅವಿರೋಧ ಆಯ್ಕೆ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸವಣೂರ : ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ದುರ್ಗಾಂಬಾ ವಿವಿದ್ಯೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ,ನಿ ಇದರ ಸನ್ 2026-2031 ರ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಶಶಿಧರ ಶಿ ಕನವಳ್ಳಿ,ನಾಗಾರಾಜ ಮ ಆರೇರ,ಉಮೇಶ ಮ ಮಾಲಿ,ಮಲ್ಲೇಶಪ್ಪ ಶಿ ಸೋಮಸಾಗರ, ಪುಟ್ಟಪ್ಪ ಗ ಹಿರೇಮಠ,ಬಿನ್ ಸಾಲಗಾರ ಕ್ಷೇತ್ರದಿಂದ ಶಿವಯೋಗಿ ಶಿ ಕಡ್ಲೆಪ್ಪನವರ,ಸಾಲಗಾರ ಹಿಂದುಳಿದ ಅ ವರ್ಗದಿಂದ ಮೌನೇಶ ಕಾ ಕಮ್ಮಾರ,ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಶ್ರೀಮತಿ ಚನ್ನವ್ವ ಮ ಅಂಗಡಿ,ಶ್ರೀಮತಿ ಪಾರ್ವತಿ ಮ ಮೇವುಂಡಿ,ಪರಿಶಿಷ್ಟ ಜಾತಿ ಕ್ಷೇತ್ರದಿಂದ ಫಕ್ಕೀರಪ್ಪ ದ್ಯಾ ಕಾಳಿ,ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಚಂದ್ರಪ್ಪ ಗು ತಳವಾರ, ಸಾಲಗಾರ ಬ ವರ್ಗದಿಂದ ಸಿದ್ದಲಿಂಗಯ್ಯ ಮಾ ಮೇವುಂಡಿ ಇವರು ಅವಿರೋಧವಾಗಿ ಆಯ್ಕೆಯಾದರು.
ಹಲವರು ಅವಿರೋಧವಾಗಲು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವ ಮೂಲಕ ಸಹಕಾರ ನೀಡಿದರು ಎಂದು ಚುನಾವಣಾ ಅಧಿಕಾರಿಗಳಾದ ಎಫ್ ಡಿ ರಾಯಣ್ಣನವರ ತಿಳಿಸಿದರು. ನೂತನ ನಿರ್ದೇಶಕರುಗಳಿಗೆ ಗೌರವಿಸಲಾಯಿತು. ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಹಿರೇಮುಗದೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸೊಸೈಟಿ ಸರ್ವ ಸದಸ್ಯರುಗಳಿಗೆ ಹಿರಿಯರಿಗೆ ನೂತನ ನಿರ್ದೇಶಕರು ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಗಂಗಾಧರ ಕನವಳ್ಳಿ,ಮಲ್ಲಪ್ಪ ಸೋಮಸಾಗರ,ಬಸಪ್ಪ ಕನವಳ್ಳಿ,ಪರಮಯ್ಯಸ್ವಾಮಿ ಹಿರೇಮಠ,ಶಂಭಣ್ಣ ಆರೇರ,ಪರಶುರಾಮ ಹರ್ಲಾಪುರ,ಮಂಜಪ್ಪ ಮಾಲಿ,ಗುರುಬಸಯ್ಯ ಚಪ್ಪರದಹಳ್ಳಿಮಠ,ಬಸವರಾಜ ಸೋಮಸಾಗರ,ಬಿ ಡಿ ಕೋಳೂರು,ಚನ್ನಬಸಪ್ಪ ಕಡ್ಲೆಪ್ಪನವರ, ಸೋಮಯ್ಯ ಹಿರೇಮಠ,ಜಗದೀಶ ಕುಲಕರ್ಣಿ,ಕೃಷ್ಣಾಜಿರಾವ್ ಹಾಲಗಿ ಸೋಮಯ್ಯ ಕುಲಕರ್ಣಿ,ಅಡಿವಪ್ಪ ಕೊರಡೂರ, ಯಲ್ಲಪ್ಪ ಆರೇರ, ಗ್ರಾಪಂ ಮಾಜಿಸದಸ್ಯರಾದ ವಿರೇಶ ಸಿ, ನಿಂಗಪ್ಪ ಆರೇರ,ಮರಿಯಪ್ಪ ನಡುವಿನಮನಿ,ಸೊಸೈಟಿ ಮಾಜಿಅಧ್ಯಕ್ಷರಾದ ಪರಶುರಾಮ ಆರೇರ, ವಿಜಯಕುಮಾರ ಕನವಳ್ಳಿ,ಮೈಲಾರೆಪ್ಪ ತಳವಾರ ಸೊಸೈಟಿ ಸಿಇಓ ಗಳಾದ ಎಸ್ ಡಿ ಪಾಟೀಲ, ಸಿಬ್ಬಂದಿಗಳಾದ ಅಶೋಕ ಅಳ್ಳಳ್ಳಿ, ಭರಮಪ್ಪ ಮಲ್ಲಾಡದ,ಮಲ್ಲಿಕಾರ್ಜುನ ಮೇವುಂಡಿ ಸೇರಿದಂತೆ ಗಣ್ಯರು,ಸೊಸೈಟಿ ಸದಸ್ಯರುಗಳು,ರೈತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : H ಭಜಂತ್ರಿ. ಹಾವೇರಿ.