ಅವಿರೋಧ ಆಯ್ಕೆ..

ನೂತನ ಕಾರ್ಯದರ್ಶಿಯಾಗಿ ಶ್ರೀ ಪ್ರಭಾಕರ ರಿತ್ತಿ

ಹಾವೇರಿ ಚಿತ್ರಕಲಾ ಶಿಕ್ಷಕರ ಸಂಘಕ್ಕೆ ಅಧ್ಯಕ್ಷ , ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಅವಿರೋಧ ಆಯ್ಕೆ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ಜಿಲ್ಲಾ ಘಟಕ ಹಾವೇರಿ ಇದರ 2026-29 ಸಾಲಿಗೆ ನೂತನ ಸಮಿತಿಯನ್ನು ಪೆ.5 ರಂದು ಹಾವೇರಿಯಲ್ಲಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ರಾಜ್ಯ ಸಮಿತಿಯ ಸದಸ್ಯರ ಮಾರ್ಗದರ್ಶನಡದಲ್ಲಿ ಹಾವೇರಿ ಎಲ್ಲಾ ತಾಲೂಕುಗಳ ಅಧ್ಯಕ್ಷ, ಕಾರ್ಯದರ್ಶಿಗಳ ಮತ್ತು ಸರ್ವಸದಸ್ಯರು ಸಮ್ಮುಖದಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ
ಪದಾಧಿಕಾರಿಗಳ ಹುದ್ದೆಗೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಅಧ್ಯಕ್ಷರಾಗಿ ಶ. ಸವಣೂರ ತಾಲೂಕಿನ ಶಿರಬಡಿಗಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಶಿವಾನಂದ ಪುರದ ಹಾಗೂ ನೂತನ ಕಾರ್ಯದರ್ಶಿಯಾಗಿ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಕೆ.ಪಿ.ಎಸ್ ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಪ್ರಭಾಕರ ರಿತ್ತಿ ಅವರು ಆಯ್ಕೆಯಾಗಿದ್ದಾರೆ. ಪೆ.8 ರಂದು ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ B S ಗಸ್ತಿಯವರ ಅನುಮೊದನೆಯೊಂದಿಗೆ ಹೊಸ ಸಮಿತಿಯು ಅಸ್ತಿತ್ವಕ್ಕೆ ಬಂದಿದೆ.