ಅಕ್ರಮ ಮರಳು ದಂಧೆಗೆ ಟ್ರಾನ್ಸ್ಪೋರ್ಟ್ ಸಮಿತಿ ಮೌನ..

ಹಾವೇರಿ : ರಾಜ್ಯದಲ್ಲಿ ಬೇಸಿಗೆಕಾಲ ಬಂದರೆ ಸಾಕು ಅತಿ ಹೆಚ್ಚು ಸುದ್ದಿಯಲ್ಲಿರುವುದು ಅಕ್ರಮ ಮರಳು ಗಣಿಗಾರಿಕೆ. ತುಂಗಭದ್ರ & ವರದಾ ನದಿ ತೀರದ ಪಾತ್ರದಲ್ಲಿ ಅಕ್ರಮ ಮರಗಳು ಗಣಿಗಾರಿಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಮೌನ ವಹಿಸಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ.

ರಟ್ಟಿಹಳ್ಳಿ ತಾಲೂಕಿನ ಹಳ್ಳೂರಿನಿಂದ ಹಿಡಿದು ಹಾವೇರಿ ತಾಲೂಕಿನ ಮೇವುಂಡಿ ತೆರೆದಹಳ್ಳಿಯವರಿಗೂ ತುಂಗಭದ್ರಾ ನದಿ ತೀರದಲ್ಲಿ ಅತಿ ಹೆಚ್ಚಾಗಿ ಹಗಲು ಮತ್ತು ರಾತ್ರಿ ಎನ್ನದೆ ಅಕ್ರಮ ಮರಗಳು ಸಾಗಾಣಿಕೆ ನಡೆಯುತ್ತಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟಾಗುತ್ತಿರುವುದಂತೂ ನಿಜ.
ರಾಣೆಬೆನ್ನೂರು ತಾಲೂಕಿನ ಕೋಟಿಹಾಳ, ಮುದೇನೂರು, ಮೆಡ್ಲೇರಿ, ಐರಣಿ, ಕುದುರಿಹಾಳ ಹರನಗಿರಿ ಚಂದಾಪುರ ಚೌಡದಾನಪುರ ಚಿಕ್ ಕುರುವತ್ತಿ ಪತ್ಯಪುರ ರಟ್ಟೀಹಳ್ಳಿ ತಾಲೂಕ ಹಳ್ಳೂರು ಇತರೆ ಹಾವೇರಿ ತಾಲೂಕಿನ ಹರಳಹಳ್ಳಿ, ಗಳಗನಾಥ,ಮೇವುಂಡಿ ತೆರದಹಳ್ಳಿ, ಬೆಳವಿಗಿ, ನೀರಲಗಿ ಇನ್ನೂ ಹಲವಾರು ಕಡೆ ತುಂಗಭದ್ರಾ ನದಿ ಪಾತ್ರಲ್ಲಿ ನಡೆಯುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಳ್ಳುತ್ತಲೇ ಇವೆ ಆದರೆ ಜಿಲ್ಲೆಯಲ್ಲಿ ನಡೆಯುವ ಈ ಆಕ್ರಮಗಳು ಬಗ್ಗೆ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಂಟಲಿಜೆನ್ಸಿ ಸಂಪೂರ್ಣ ವಿಫಲವಾದಂತೆ ಕಾಣಿಸುತ್ತಿದೆ.

Oplus_131072

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ , ಜಿಲ್ಲೆಯ ರಾಜಕಾರಣಿಗಳು ಎಲ್ಲಾ ಗೊತ್ತಿದ್ದು ಮೌನ ವಹಿಸಿರುವುದು ಮರಳು ದಂಧೆಗೆ ಪರೋಕ್ಷವಾಗಿ ತಮ್ಮ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಂಡು ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ತುಂಗಭದ್ರಾ ನದಿ ಪಾತ್ರದಲ್ಲಿ ಕಾನೂನು ವ್ಯವಸ್ಥೆ ಹದಿಗೆಡುತ್ತಾ ಹೋಗುತ್ತಿದ್ದು ಮರಳು ಮಾಫಿಯಾ ತಡೆಗಟ್ಟಲು ಬಂದವರಿಗೆ ರಕ್ಷಣೆ ಇಲ್ಲದಂತಾಗಿದೆ. ಇತ್ತೀಚಿಗೆ ವಿಜಯ ಟೈಮ್ ಮುಖ್ಯಸ್ಥರಾದ ವಿಜಯಲಕ್ಷ್ಮಿ ಶಿಬರೂರ್ ಹಾವೇರಿ ತಾಲೂಕ ಹರಳಹಳ್ಳಿ ತುಂಗಭದ್ರಾ ನದಿ ತೀರದಲ್ಲಿ ಮರಳುಗಾಡಿ ಹಿಡಿದ ಸಂದರ್ಭದಲ್ಲಿ ಅವರ ಮೇಲೆ ಗಾಡಿ ಹತ್ತಿಸೊ ಪ್ರಯತ್ನ ನಡೆದಿದ್ದಂತು ನಿಜ.
ರಾಣೆಬೆನ್ನೂರು, ಹಾವೇರಿ, ರಟ್ಟಿಹಳ್ಳಿ ಹಾನಗಲ್ ತಾಲೂಕಿನ ತುಂಗಭದ್ರ ನದಿ ಪಾತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಆಕ್ರಮ ಮರಳು ಮಾಫಿಯಾ ತಡೆಗಟ್ಟಲು ಸರ್ಕಾರ ಕ್ರಮವಹಿಸಬೇಕಾಗಿದೆ. ಜಿಲ್ಲಾ ಪೊಲೀಸ್,ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ಅಕ್ರಮ ಗಣಿಗಾರಿಕೆ ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಕಾರ್ಯಪ್ರವೃತ್ತರಾಗಬೇಕಾಗಿದೆ. ಸರಕಾರ ಮುಂದೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ

ಹಾವೇರಿ ಜಿಲ್ಲಾಧ್ಯಂತ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಸಂಪೂರ್ಣ ವಿಫಲ..!

ರಾಜ್ಯದ ಮರಳು ಸಂಪತ್ತು “Illegal stand mining” ದಂಧೆಕೋರರ ಪಾಲು, ಸರಕಾರದ ಮೌನ ನಡೆ,ಬೊಕ್ಕಸನಷ್ಟಕ್ಕೆ ಹೊಣೆ ಯಾರು?