ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ನಗರ : ರೈಲ್ವೆ ಹೋರಾಟ ಸಮಿತಿ ವತಿಯಿಂದ ಈ ದಿವಸ ನಗರದ ರೈಲ್ವೆ ಸ್ಟೇಷನ್ ವರ್ತಕರ ಸಮುದಾಯ ಭವನದಲ್ಲಿ ರೈಲ್ವೆ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ರವೀಂದ್ರ ಗೌಡ ಪಾಟೀಲ್ ನೇತೃತ್ವದಲ್ಲಿ ದೇವರಗುಡ್ಡ ರಸ್ತೆ ಮೇಲ್ ಸೇತುವೆ ಉದ್ಘಾಟನೆಯನ್ನು ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು ಕೆಳಗಡೆ ಅಂಡರ್ ಪಾಸ್ ಮಾಡುವುದರ ಮುಖಾಂತರ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗಿದವೇ ಎಂದು ನಗರಸಭೆ ಮಾಜಿ ಸದಸ್ಯರಾದ ಮಲ್ಲಣ್ಣ ಅಂಗಡಿ ಹಾಗೂ ನಗರಸಭೆ ಮಾಜಿ ಸದಸ್ಯರಾದ ಪ್ರಭು ಕರ್ಜಿಗಿ ಮಠ ಹೇಳಿದರು ಮೇಲ ಸೇತುವೆ ಸಲುವಾಗಿ ಸುಮಾರು ನಾಲ್ಕು ವರ್ಷಗಳಿಂದ ಸಾಕಷ್ಟು ಹೋರಾಟಗಳನ್ನು ಮಾಡುವ ಮುಖಾಂತರ ಸಾಕಷ್ಟು ಮನವಿಗಳು ನೀಡಿ ಅದಾದ ಮೇಲೆ ಮೇಲ್ ಸೇತುವೆ ರೆಡಿಯಾಗಿದೆ ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ಸಾಕಷ್ಟು ಮನವಿಗಳು ನೀಡಿದರು ಕೂಡ ಮೇಲೆ ಸೇತುವೆ ಉದ್ಘಾಟನೆ ಆಗದೆ ನಿರ್ಲಕ್ಷ್ಮ ವಹಿಸಿದ್ದಾರೆ ಎಂದು ಈ ದಿವಸ ರೈಲ್ವೆ ಹೋರಾಟ ಸಮಿತಿಯು ಅಧಿಕಾರಿಗಳ ಮುಂದೆ ತಿಳಿಸಿದ್ದಾರೆ ರೈಲ್ವೇ
ಅಧಿಕಾರಿಗಳು ಆದಷ್ಟು ಬೇಗ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆದಷ್ಟು ಬೇಗ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು
ರೈಲ್ವೆ ಹೋರಾಟ ಸಮಿತಿಯು ಸೋಮವಾರ ದಿವಸ ರೈಲ್ವೆ ತಡೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸಮ್ಮುಖದಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟೆವು.
ಈ ಒಂದು ಸಭೆಯಲ್ಲಿ ನಿತ್ಯಾನಂದ ಜಿ ಕುಂದಾಪುರ್ ಕೊಟ್ರೇಶಪ್ಪ ಎಮ್ಮಿ ಜಗದೀಶ್ ಕೆರೂಡಿ ಪರಶುರಾಮ್ ಕುರುವತ್ತಿ ಚಂದ್ರಶೇಖರ್ ಹಳ್ಳಪ್ಪನವರ್ ತುಕಫ ಲಮಣಿ ಜಿಜಿ ಹೊಟ್ಟಿಗೌಡ್ರು ಇನ್ನು ಅನೇಕ ಹೋರಾಟಗಾರರು ಭಾಗವಹಿಸಿ ಹೋರಾಟ ಸಮಿತಿ ಸಭೆಯನ್ನು ಯಶಸ್ವಿಗೊಳಿಸಿದರು