ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕ ಆಡಳಿತ ಅಧಿಕಾರಿಗಳಾದ ತಹಸೀಲ್ದಾರ್ ಆರ್ ಎಚ್ ಭಾಗವಾನ್ ಇವರ ಮೂಲಕ ಮಾನ್ಯ ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಶ್ರೀ ಪ್ರಿಯಾಂಕ ಖರ್ಗೆ ಹಾಗೂ ಮಾನ್ಯ ಕಂದಾಯ ಸಚಿವರು ಶ್ರೀ ಕೃಷ್ಣಬೈರೆಗೌಡ ಅವರಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ಇ-ಸ್ವತ್ತು 2.0 ತಂತ್ರಾಶದಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಹಾಗೂ ತಂತ್ರಾಂಶವನ್ನು ಸಾರ್ವಜನಿಕರಿಗೆ ಅನುಕೂಲಕರ ರೀತಿಯಲ್ಲಿ ನಿಯಮಾವಳಿಗಳನ್ನ ಸರಳೀಕರಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ ಮಾತನಾಡಿ ಕರ್ನಾಟಕ ರಾಜ್ಯಾದ್ಯಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ಅನುಕೂಲಕರ ರೀತಿಯಲ್ಲಿ ಹಾಗೂ ಭ್ರಷ್ಟಾಚಾರ ಹಾಗೂ ಮದ್ಯವರ್ತಿಗಳ ಹಾವಳಿಯಿಲ್ಲದೇ ತಮ್ಮ ಆಸ್ತಿಗಳನ್ನ ನೇರವಾಗಿ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಸಿಕೊಳ್ಳಲು ಹಾಗೂ ತಮ್ಮ ಅಸ್ತಿಗಳನ್ನು ಡಿಜಟಲಿಕರರಣಗೊಳಿಸಿಕೊಳ್ಳಲು ಇ-ಸ್ವತ್ತು 2.0 ತಂತ್ರಾಂಶವನ್ನು ಸಾರ್ವಜನಿಕರಿಗೆ ಪರಿಚಯಿಸಿದ್ದು ಇರುತ್ತದೆ ಕಾರಣ ಸಾರ್ವಜನಿಕರಿಗೆ ತಮ್ಮ ಅಸ್ತಿಗಳನ್ನ ನೋಂದಾಯಿಸಿಕೊಳ್ಳಲು ಹಕ್ಕು ಪತ್ರ, ವಿಲ್. ದಾನ ಪತ್ರ, ಸೆಲ್ ಡೀಡ್. ಹೀಗೆ ಕೆಲ ದಾಖಲಾತಿಗಳನ್ನು ನಿಗದಿಗೊಳಿಸಿ ಕಡ್ಡಾಯಗೊಳಿಸಿದ್ದು ಆದರೆ ಅನೇಕ ಗ್ರಾಮೀಣ ಬಾಗದ ಸಾರ್ವಜನಿಕರಿಗೆ ಇದು ಒಂದು ರೀತಿಯ ದೊಡ್ಡ ತಲೆನೋವಾಗಿ ಪರಣಮಿಸಿದ.
ನಂತರ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಮಾತನಾಡಿ ಕೆಲ ಗ್ರಾಮೀಣ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಹಲವಾರು ವರ್ಷಗಳಿಂದ ಬಳುವಳಿಯಾಗಿ ಬಂದಂತಹ ಪಿತ್ರಾರ್ಜಿತ ಆಸ್ತಿಗಳಿಗೆ ಹಾಗೂ ಸಹೋದರರೂ ಕೇವಲ ಒಪ್ಪಂದಗಳ ಮೂಲಕ ಹಂಚಿಕೊಂಡ ಆಸ್ತಿಗಳಿಗೆ ಯಾವುದೇ ಮೂಲ ನೋಂದಾಯಿತ ದಾಖಲೆ ಇಲ್ಲದಿರಿವದು ತೊಂದರೆಯಾಗಿದೆ ಕೇವಲ ಗ್ರಾಮ ಪಂಚಾಯತಿಯ ಅಸ್ತಿ ದಾಖಲೆ ಇದ್ದರು ಕೂಡ ಹಾಗೂ ತಮ್ಮದೇ ಮೂಲ ಅಸ್ತಿಯಾಗಿದ್ದರು ಕೂಡ ಅದನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ ಖರೀದಿ ಪಾಲುವಿಭಾಗ ಅಸ್ತಿಗೆ ಸಾಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕೂಡಲೇ ಪರಿಶೀಲಿಸಿ ತಂತ್ರಾಂಶಗಳಲ್ಲಿನ ದೋಷಗಳನ್ನು ಸರಿಪಡಿಸಿ ಈಗಿರುವ ಆಸ್ತಿ ನೋಂದಣಿಗೆ ಇರುವ ದಾಖಲಾತಿಗಳನ್ನೇ ಪರಿಗಣಿಸಿ ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಹಾಗೂ ತಂತ್ರಾಂಶಗಳಲ್ಲಿ ನಿಯಮಾವಳಿಗಳನ್ನು ಸರಳೀಕರಿಸಿ ತಮ್ಮ ಆಸ್ತಿಗಳನ್ನು ನೋಂದಾಯಿಸಿಕೊಳ್ಳಲು ಹಾಗೂ ಡಿಜಿಟಲೀಕರಣಗೊಳಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಮಾನ್ಯ ಸಚಿವರು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಾಗೂ ಸಚಿವರು ಕಂದಾಯ ಇಲಾಖೆ ಇವರಿಗೆ ಅಗ್ರಹಿಸಿದರು.
ಈ ಸಂಧರ್ಭದಲ್ಲಿ ಸ್ವಾಕರವೇ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಕುಂದಾಪುರ ಪರಶುರಾಮ ಕುರುವತ್ತಿ ರಿಯಾಜ್ ದೊಡ್ಡಮನಿ ಶ್ರೀಧರ್ ಛಲವಾದಿ ಗೋಪಿ ಕುಂದಾಪುರ ಕೊಟ್ರೇಶ್ ದುಗ್ಗತ್ತಿ ಬಸವರಾಜ ಸಾವಕ್ಕನವರ ಶಂಕರ ಹಳ್ಳಪ್ಪನವರ ಸಂತೋಷ ಡಿ ಯೈ ಹನುಮಂತಪ್ಪ ಗಂಗಣ್ಣನವರ ನಿಂಗಪ್ಪ ಬೀರಣ್ಣನವರ ಸಂತೋಷ ಗಂಗಣ್ಣನವರ ರಾಜಪ್ಪ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು